Advertisement

ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಗ ಚಿಕಿತ್ಸೆ ನೀಡಿ ಕೊರೊನಾ ಗುಣಪಡಿಸುತ್ತೇನೆ: ಡಾ.ವಿಜಯಕುಮಾರ

10:14 AM Mar 17, 2020 | keerthan |

ವಿಜಯಪುರ: ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ ರೋಗಕ್ಕೆ ತಮ್ಮ ಬಳಿ ಸುಲಭ ಚಿಕಿತ್ಸಾ ವಿಧಾನವಿದೆ. ಕೋವಿಡ್-19 ಸೋಂಕಿತ ರೋಗಿಯನ್ನು ಗುಣಪಡಿಸಲು ನಾನು ಸಿದ್ಧನಿದ್ದೇನೆ. ವಿಜಯಪುರ ಜಿಲ್ಲಾಡಳಿತ ನನಗೆ ಆಹ್ವಾನ ನೀದರೆ ಐಸೋಲೇಶನ್ ಘಟಕದಲ್ಲಿರುವ ಸೋಂಕು ಶಂಕಿತನಿಗೆ ಚಿಕಿತ್ಸೆ ನೀಡಲು ಸಿದ್ಧ ಎಂದು ವಿಜಯಪುರ ಯೋಗ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ.ವಿಜಯಕುಮಾರ್ ಮಹಾನುಭಾವರು ತಿಳಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಮಾರಕ ರೋಗಕ್ಕೆ ಅಲೋಪತಿ ಔಷಧ ಇಲ್ಲದೆ ಇರಬಹುದು. ಆದರೆ‌ ಭಾರತೀಯ ಯೋಗ ಚಿಕಿತ್ಸಾ ವಿಧಾನದಲ್ಲಿ ಎಲ್ಲಾ ರೋಗಕ್ಕೂ ಚಿಕಿತ್ಸೆ ಇದೆ. ಹೀಗಾಗಿ ನನಗೆ ವಿಜಯಪುರ ಜಿಲ್ಲಾಧಿಕಾರಿಗಳು ಆಹ್ವಾನ ನೀಡಿದರೆ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಶನ್ ಘಟಕದಲ್ಲಿರುವ ಕೊರೊನಾ ಶಂಕಿತ ಸೋಂಕಿತನಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಚಿಕಿತ್ಸೆ ನೀಡಿ ಗುಣಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಳೆದ 38 ವರ್ಷಗಳಿಂದ ಯೋಗಸಾಧನೆ ಮಾಡಿರುವ ನಾನು ರಾಜ್ಯ-ಹೊರ ರಾಜ್ಯಗಳಲ್ಲಿ ಯೋಗ ಚಿಕಿತ್ಸಾ ಕೇಂದ್ರ ಹೊಂದಿದ್ದೇನೆ. ಹೀಗಾಗಿ ನನಗೆ ಯಾರೂ ಸವಾಲು ಹಾಕುವ ಪ್ರಶ್ನೆಯೇ ಇಲ್ಲ. ತಜ್ಞ ವೈದ್ಯರಿಂದಲೂ ಗುಣಪಡಿಸಲು ಆಗದ ಹಲವು ರೋಗಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಿದ್ದೇನೆ. ಆದರೆ ಪ್ರಚಾರ ಪಡೆದಿಲ್ಲ. ಹೀಗಾಗಿ ಸವಾಲಾಗಿ ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದರು.

ಕೆಮ್ಮು ದಮ್ನು, ಉಸಿರಾಟದ ಸಮಸ್ಯೆ ಸೃಷ್ಟಿಸಿ ಮನುಷ್ಯನ ಜೀವಕ್ಕೆ ಅಪಾಯ ತರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಇಲ್ಲದ ಮನುಷ್ಯ ರಕ್ತದ ಒತ್ತಡ, ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆಯಿಂದ ದೈಹಿಕವಾಗಿ ನಿತ್ರಾಣಗೊಂಡು ಗಂಭೀರವಾಗಿ ಹಾಸಿಗೆ ಹಿಡಿಯುತ್ತಾನೆ ಎಂದರು.

Advertisement

ವಿದೇಶಿ ಸಂಸ್ಕೃತಿಯ ಅಳವಡಿಕೆ ನಮ್ಮನ್ನು ಹಲವು ರೀತಿಯಲ್ಲಿ ಹೈರಾಣು ಮಾಡುತ್ತಿದೆ. ಪೌಷ್ಟಿಕತೆ ಇಲ್ಲದ ಹಾಗೂ ದಾಸ್ತಾನು ಮಾಡಿ ಶೀತಲ ಆಹಾರ ತಿನ್ನುವ ಸಂಸ್ಕೃತಿ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಕುಂದಿಸಿ, ರೋಗ ತರುತ್ತಿದೆ. ಆದರೆ ಪೌಷ್ಟಿಕ ಆಹಾರ ಹಾಗೂ ಮೂರು ಹೊತ್ತು ಕೂಡ ಬಿಸಿ ಅಡುಗೆ ಮಾಡಿ ತಾಜಾ ಆಹಾರ ಸೇವಿಸುವ ಭಾರತೀಯ ಅಹಾರ ಸಂಸ್ಕೃತಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದರು.

ಇದಲ್ಲದೇ ಕೊರೊನಾ ಸೊಂಕು‌ ಮಾತ್ರವಲ್ಲ ಕೆಮ್ನು, ದಮ್ಮು ಖರ್ಚು ರಹಿತವಾಗಿ ಮನೆಯ ಮದ್ದುನಿಂದಲೇ ಗುಣಮುಖ ಆಗಬಹುದು. ಮನೆಯಲ್ಲಿ ಇರುವ ಹಳೆಯ ಕಾಟನ್ ಬಟ್ಟೆಗಳನ್ನು ಸ್ವಚ್ಛವಾಗಿ ತೊಳೆದು, ಇಸ್ತ್ರಿ ಮಾಡಿ, ಮುಖಕ್ಕೆ ಧರಿಸಿದರೆ ಖರ್ಚಿಲ್ಲದ ಮಾಸ್ಕ್ ತಯಾರಿಸಿ, ಬಳಸಬಹುದು. ಎಷ್ಟೇ ತೀವ್ರ ಕೆಮ್ಮು ಇದ್ದರೂ ಕಾಫಿಯಷ್ಟು ಬಿಸಿ ಇರುವ ನೀರನ್ನು ಕುಡಿದರೆ ತಕ್ಷಣ ಕೆಮ್ಮು ನಿಯಂತ್ರಣ ಸಾಧ್ಯ. ಇಂಥದ್ದೇ ಕೆಲವು ಸುಲಭ ವಿಧಾನದಿಂದ ಕೊರೊನಾ ರೋಗ ನಿಯಂತ್ರಣ ಸಾಧ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next