Advertisement

ಪೊಲೀಸರಿಗೆ ಯೋಗ ತರಬೇತಿ ಶಿಬಿರ ಉದ್ಘಾಟನೆ‌

02:25 AM Jul 13, 2017 | Team Udayavani |

ಕುಂದಾಪುರ:  ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕಾದ ಆರಕ್ಷಕರಿಗೆ ತಮ್ಮ ಆರೋಗ್ಯ ರಕ್ಷಣೆ ಮಾಡುವಲ್ಲಿ ಯೋಗಾಭ್ಯಾಸ ಸಹಕಾರಿಯಾಗುತ್ತದೆ ಎಂದು ಯೋಗ ಶಿಕ್ಷಕ ವಿವೇಕ್‌ ಪೈ ಹೇಳಿದರು.

Advertisement

ಕುಂದಾಪುರ ಪೊಲೀಸ್‌ ಠಾಣೆಯ ಸಮೀಪದಲ್ಲಿ ಇರುವ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಜೆಸಿಐ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಪೊಲೀಸ್‌ ಸಹಯೋಗದಲ್ಲಿ  ಪೊಲೀಸರಿಗಾಗಿ  ಹದಿನೈದು ದಿನಗಳ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯೋಗ ಗುರು ಪತಂಜಲಿ ಹಾಕಿಕೊಟ್ಟ ಮಾರ್ಗದಲ್ಲಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯದ ಸಮಸ್ಯೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ.ಶಿವನಿಂದ ತಪಸ್ಸಿನ ಮೂಲಕ ಪತಂಜಲಿ ಗುರುಗಳು ಪಡೆದುಕೊಂಡ ಯೋಗ ಇಂದು ಜಗತ್ತಿನಾದ್ಯಂತ ಪ್ರಚಾರ ಪಡೆದುಕೊಂಡಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು  ಕುಂದಾಪುರ ಜೆಸಿಐ ಅಧ್ಯಕ್ಷೆ ಅಕ್ಷತಾ ಗಿರೀಶ್‌, ಸ್ಥಾಪಕಾಧ್ಯಕ್ಷೆ ಗೀತಾಂಜಲಿ, ವೃತ್ತ ನಿರೀಕ್ಷಕ ಮಂಜಪ್ಪ, ಠಾಣಾಧಿಕಾರಿ ನಾಸೀರ್‌ ಹುಸೇನ್‌, ಕುಂದಾಪುರ ಜೇಸಿಯ ಪದಾಧಿಕಾರಿಗಳು ಮತ್ತಿತರರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next