Advertisement
ನಗರಗಳು ಮಾತ್ರವಲ್ಲದೆ ಈಗ ಅಸಾಂಕ್ರಾಮಿಕ ಕಾಯಿಲೆಗಳು ಹಳ್ಳಿ ಭಾಗದಲ್ಲಿಯೂ ಹೆಚ್ಚುತ್ತಿವೆ. ಇದನ್ನು ತಡೆಯಲು ಈ ಹೆಜ್ಜೆ ಇರಿಸಲಾಗಿದ್ದು, ಉಡುಪಿ- ದ.ಕ.ದ ನೂರಕ್ಕೂ ಹೆಚ್ಚು ಪಿಎಚ್‌ಸಿಗಳಲ್ಲಿ ಈಗಾಗಲೇ ನಡೆಯುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಂಗವಾಗಿ ಆಯುಷ್ಮಾನ್ ಭಾರತದಡಿ ಪಿಎಚ್‌ಸಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಉಚಿತ ಯೋಗ ತರಗತಿ ಇದರ ಭಾಗವೂ ಹೌದು. ಕುಂದಾ ಪುರದ ಶಂಕರನಾರಾಯಣ, ಸಿದ್ದಾಪುರ ಮತ್ತಿತರ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ.
ದಿನವೂ ಬೆಳಗ್ಗೆ ಯಾ ಸಂಜೆ 1 ತಾಸು ತರಗತಿ ನಡೆ ಯುತ್ತಿದೆ. ಪರಿಣತರೇ ಸಂಪ ನ್ಮೂಲ ವ್ಯಕ್ತಿಗಳು. ಒಬ್ಬರಿಗೆ 2 ಕಡೆ ತರಬೇತಿ ನೀಡಲು ಅವ ಕಾಶವಿದ್ದು, ತಲಾ 5 ಸಾವಿರ ರೂ.ಗಳಂತೆ ಗೌರವಧನ ಇದೆ. 100ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಆರಂಭ
ಉಡುಪಿಯ ಸುಮಾರು 80 ಪಿಎಚ್‌ಸಿ ಗಳಲ್ಲಿ 39 ಕಡೆ (27 ಶಿಕ್ಷಕರು) ಯೋಗ ತರ ಬೇತಿ ಆರಂಭಿಸಿದ್ದಾರೆ. ದಕ್ಷಿಣ ಕನ್ನಡದ ಎಲ್ಲ 76 ಪಿಎಚ್‌ಸಿಗಳಲ್ಲಿಯೂ ಯೋಗ ತರಬೇತಿ ಆರಂಭಿಸಲಾಗಿದೆ. ರಾಜ್ಯದಲ್ಲಿ 2,359 ಪಿಎಚ್‌ಸಿಗಳಿದ್ದು, ಹಂತ ಹಂತವಾಗಿ ಜಾರಿಯಾಗಲಿದೆ.
Related Articles
ಅಸಾಂಕ್ರಾಮಿಕ ರೋಗಗಳು ಇಂದು ನಗರ ಪ್ರದೇಶಗಳಿಗೆ ಸೀಮಿತವಾಗಿ ಉಳಿದಿಲ್ಲ. ಹಳ್ಳಿಗಳಲ್ಲೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಿಗೂ ಸುಲಭವಾಗಿ ಯೋಗ ತರಬೇತಿ ಸಿಗಬೇಕಿದೆ. ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಖನ್ನತೆ ಕಡಿಮೆ ಮಾಡಿ, ದೈಹಿಕ ಮತ್ತು ಮಾನಸಿಕ ಲವಲವಿಕೆ ಹೆಚ್ಚಿಸುವುದು ಉದ್ದೇಶ. ತಿಂಗಳಿಗೆ ಕನಿಷ್ಠ 20 ಶಿಬಿರ ನಡೆಸಲಾಗುತ್ತಿದ್ದು, ಪಿಎಚ್‌ಸಿ ವ್ಯಾಪ್ತಿಯ ಜನರು ಪಾಲ್ಗೊಳ್ಳಬಹುದು.
Advertisement