Advertisement
ಶವಾಸನ ಯೋಗದಲ್ಲಿ ಅತ್ಯಂತ ಸರಳ ಆಸನವೇ ಶವಾಸನ ಆಗಿದೆ. ಶವಾಸನದಿಂದ ದೇಹ ಮತ್ತು ಮನಸ್ಸಿಗೆ ವಿಶಾಂತ್ರಿ ಸಿಗುತ್ತದೆ. ಸುಸ್ತು ಜತೆಗೆ ತಲೆಸುತ್ತುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ.
ಬಾಲಾಸನವೂ ಸುಸ್ತು ನಿವಾರಣ ಆಸನವಾಗಿದೆ. ಈ ಆಸನದಲ್ಲಿ ಮಕರಾಸನವೂ ಸೇರಿಕೊಂಡಿದೆ. ಪದಂಗಸ್ಥಾಸನ
ಮೈಕೈ ನೋವು, ದೇಹಯಾಸವನ್ನು ನಿವರಾಣೆ ಮಾಡಲು ಪದಂಗಸ್ಥಾಸನವು ಸಹಕಾರಿ. ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡ, ಆತಂಕವನ್ನು ನಿವಾರಿಸುತ್ತದೆ. ನಿದ್ರಾಹೀನತೆಯನ್ನು ಕಡಿಮೆ ಮಾಡುವ ಮೂಲಕ ಸುಸ್ತು ಅನ್ನು ಹೋಗಡಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸಲು ಈ ಆಸನ ಸಹಕಾರಿ.
Related Articles
ದೈಹಿಕವಾಗಿ ಸದೃಢರಾಗಿ ಸುಸ್ತು ಸಾಮಾನ್ಯ ಕಡಿಮೆಯಾಗುತ್ತದೆ. ಅಧೋ ಮುಖ ಸ್ವಾನಾಸನದಿಂದ ದೈಹಿಕವಾಗಿ ಸದೃಢರಾಗಿ ಸುಸ್ತು ಕಮ್ಮಿಯಾಗುತ್ತದೆ. ಅರ್ಧ ಚಕ್ರ ಈ ಆಸನದಿಂದ ಕಾಲು ಮತ್ತು ಕೈಗಳ ದುರ್ಬಲತೆ ದೂರವಾಗುತ್ತದೆ. ಸೊಂಟ ನೋವು ನಿವಾರಣೆ ಮಾಡುತ್ತದೆ.
Advertisement
ಆನಂದ ಬಾಲಾಸನಆನಂದ ಬಾಲಾಸನದಿಂದ ಮನಸ್ಸು ಪ್ರಪುಲ್ಲವಾಗಿರುತ್ತದೆ. ದೇಹಾಯಾಸ ಮತ್ತು ಮನಃಶಾಂತಿ ಈ ಆಸನದಿಂದ ಲಭಿಸುತ್ತದೆ. ಹಲಾಸನ
ಕಾಲಿನ ಸೆಳೆತ, ಹೊಟ್ಟೆ ಕೊಬ್ಬು ನಿವಾರಣೆ ಜತೆಗೆ ದಣಿವನ್ನು ನಿವಾರಿಸುತ್ತದೆ. ಸಲಭಾಸನ
ನಿರಂತರ ಸ್ನಾಯುಗಳ ಸೆಳೆತದಿಂದಲು ಆಯಾಸ ಉಂಟಾಗುತ್ತದೆ. ಇದರ ನಿವಾರಣೆಗೆ ಸಲಭಾಸನ ಸಹಕಾರಿ. ಬೆನ್ನು, ಕುತ್ತಿಗೆಗಳ ಸೆಳೆತ, ನೋವನ್ನು ನಿವಾರಣೆ ಮಾಡುತ್ತದೆ. ಬಕಾಸನ
ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಈ ಆಸನ ಹೆಚ್ಚಿಸುವ ಮೂಲಕ ಆಯಾಸವನ್ನು ಕಡಿಮೆ ಮಾಡುತ್ತದೆ. ಯೋಗದ ಜತೆಗೆ ಪ್ರಾಣಾಯಾಮ, ಧ್ಯಾನದ ಮೂಲಕವೂ ಸುಸ್ತು, ಆಯಾಸವನ್ನು ನಿವಾರಿಸಿಕೊಳ್ಳಬಹುದು.