Advertisement

ಎರಡು ದಶಕದಿಂದ ಯೋಗ-ಸ್ಕೇಟಿಂಗ್‌ ತರಬೇತಿ

04:15 PM Jun 21, 2021 | Team Udayavani |

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಯೋಗ ತರಬೇತಿ ನೀಡಿದ್ದಲ್ಲದೆ, ಕಳೆದ 20 ವರ್ಷಗಳಿಂದ ಯೋಗ ಹಾಗೂ ಮಕ್ಕಳಿಗೆ ಸ್ಕೇಟಿಂಗ್‌ ತರಬೇತಿಯಲ್ಲಿ ಯೋಗಗುರು ಈರಣ್ಣ ಕಾಡಪ್ಪನವರ ತೊಡಗಿಕೊಂಡಿದ್ದಾರೆ.

Advertisement

ವಿವಿಧ ಸಂಘ-ಸಂಸ್ಥೆಯವರು, ಅಂಧ ಮಕ್ಕಳು ಸೇರಿದಂತೆ ನೂರಾರು ಜನರಿಗೆ ಯೋಗ ತರಬೇತಿ ನೀಡಿದ್ದು, ಈಗಲೂ ಯೋಗ ತರಬೇತಿ ಮುಂದುವರಿಸಿದ್ದಾರೆ. 30 ವರ್ಷಗಳ ಹಿಂದೆ ಗೋಕರ್ಣದ ನಾಗರಾಜ ದೇವತೆ ಅವರಿಂದ ಯೋಗ ಕಲಿತಿದ್ದರು. ಯೋಗ ಮತ್ತು ವ್ಯಾಯಾಮ ಎರಡೂ ಒಂದೇ ಎಂಬ ಭಾವನೆಯಿಂದ ಕೆಲದಿನ ಯೋಗಾಭ್ಯಾಸ ಬಿಟ್ಟಿದ್ದರು. ನಂತರದಲ್ಲಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ರಾಘವೇಂದ್ರ ಪೈ ಎನ್ನುವವರು ಹುಬ್ಬಳ್ಳಿಗೆ ಆಗಮಿಸಿದ್ದಾಗ ಅವರಿಂದ ಮತ್ತೆ ಯೋಗಾಭ್ಯಾಸ ಕಲಿತಿದ್ದರು.

ಪೈ ಅವರು ಹುಬ್ಬಳ್ಳಿಯಲ್ಲಿ ಕೆಲ ದಿನ ಯೋಗ ತರಬೇತಿ ಶಿಬಿರ ಮುಗಿಸಿ ಹಿಂದಿರುವಾಗ, ಇನ್ನು ಮುಂದೆ ತಮಗೆ ಯೋಗ ತರಬೇತಿ ನೀಡುವವರು ಯಾರು ಎಂದು ಶಿಬಿರಾರ್ಥಿಗಳು ಕೇಳಿದರು. ಆಗ ರಾಘವೇಂದ್ರ ಪೈ ಅವರು, ನನ್ನನ್ನು ತೋರಿಸಿ ಇವರು ನಿಮಗೆ ತರಬೇತಿ ನೀಡುತ್ತಾರೆ ಎಂದು ಹೇಳಿದ್ದರು. ಅಂದಿನಿಂದ ಆರಂಭಗೊಂಡ ನನ್ನ ಯೋಗ ತರಬೇತಿ ಪಯಣ ಇನ್ನೂ ಮುಂದುವರಿದಿದೆ ಎನ್ನುತ್ತಾರೆ ಈರಣ್ಣ ಕಾಡಪ್ಪನವರ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾಗ ಅವರಿಗೂ ಕೆಲ ದಿನ ಯೋಗ ತರಬೇತಿ ನೀಡಿದ್ದೆ.

ಲಯನ್ಸ್‌ ಕ್ಲಬ್‌, ಇನ್ನಿತರ ಸಂಘ-ಸಂಸ್ಥೆಗಳ ಮೂಲಕ ನೂರಾರು ಜನರಿಗೆ ಯೋಗ ತರಬೇತಿ ನೀಡಿದ್ದೇನೆ. ಮಕ್ಕಳಿಗೆ ಯೋಗ ಜತೆಗೆ ಸ್ಕೇಟಿಂಗ್‌ ತರಬೇತಿಯೂ ನೀಡುತ್ತಿದ್ದೇನೆ. ನನ್ನಿಂದ ತರಬೇತಿ ಪಡೆದ ಮಕ್ಕಳು ಮೈಸೂರು ದಸರಾ ಸಂದರ್ಭದಲ್ಲಿ 5 ಕಿಮೀವರೆಗೆ ಸ್ಕೇಟಿಂಗ್‌ ಮೇಲೆ ಯೋಗ ಪ್ರದರ್ಶನ ನೀಡಿದ್ದು ಹೆಮ್ಮೆಯ ಸಂಗತಿ. ಯೋಗದ ಕಲಿಕೆ ಮುಗಿಯಿತು ಎನ್ನುವಂತಿಲ್ಲ. ಕಲಿಕೆ ನಿರಂತರ. ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ ಎಂಬುದು ಈರಣ್ಣ ಕಾಡಪ್ಪ ಅವರ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next