Advertisement

ವಿದೇಶದಲ್ಲಿ ಯೋಗಗುರು ಈ ಗ್ರಾಮೀಣ ಪ್ರತಿಭೆ 

07:32 PM Jun 21, 2021 | Team Udayavani |

ಯಲ್ಲಪ್ಪ ಎಸ್‌.ಕೊಪ್ಪದ

Advertisement

ಉಗರಗೋಳ: ಯೋಗದ ಮೂಲಕ ಅತೀ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ನೂರಾರು. ಯೋಗದ ಕಂಪನ್ನು ವಿದೇಶಿ ನೆಲದಲ್ಲಿ ಪಸರಿಸುವ ಕಾರ್ಯ ಮಾಡುತ್ತಿರುವ ತಾಲೂಕಿನ ಉಗರಗೋಳ ಗ್ರಾಮದ ಸಿದ್ದಪ್ಪ ಶಿವಪ್ಪ ಹೆಬಸೂರ ಕೂಡ ಒಬ್ಬರು.

ಇವರು ವಿಯೆಟ್ನಾಂದಲ್ಲಿ ಯೋಗ ಗುರುವಾಗಿ ಅಲ್ಲಿನ ಜನರಿಗೆ ಯೋಗದ ಪಾಠ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಹಂತದಿಂದಲೂ ಯೋಗದಲ್ಲಿ ಆಸಕ್ತಿ ಹೊಂದಿದ ಈತ ಗ್ರಾಮೀಣ ಭಾಗದಲ್ಲಿ ಸರಿಯಾದ ಮಾರ್ಗ ದರ್ಶನವಿಲ್ಲದೇ ಸ್ವಂತ ಪ್ರಯತ್ನದಿಂದ ಕೆಲ ಆಸನಗಳನ್ನು ರೂಢಿಸಿಕೊಂಡಿದ್ದನು.. ಬಳಿಕ 6ನೇ ತರಗತಿಯಲ್ಲಿ ಶಿವರಾಜ್‌ ಪುರಾಣಿಕಮಠ ಎಂಬ ಯೋಗಗುರುವಿನ ಪರಿಚಯವಾಗಿ ಕುಂದಗೋಳದ ಶಿವಾನಂದ ಮಠದಲ್ಲಿ ಲಿಂ. ಬಸವೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದ. ನಂತರ ಕುಂದಗೋಳ, ಶಿರೂರ, ಉಗರಗೋಳ, ಉಪ್ಪಿನ ಬೆಟಗೇರಿ, ಶಿರಸಿ ಹಾಗೂ ಬೆಂಗಳೂರುಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು.

ಸದ್ಯ ಶಿವಪ್ಪ ವಿಯಟ್ನಾಮ್‌ನ ಓಂ ಯೋಗಾ ವೆಲ್‌ ನೆಸ್‌ ಹಬ್‌ ಸಂಸ್ಥೆಯ ಮೂಲಕ ಸಾವಿರಾರು ವಿದೇಶಿಯರಿಗೆ ಯೋಗದ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಕೋವಿಡ್‌ ಲಾಕ್‌ಡೌನ್‌ದಲ್ಲಿ ಸ್ವಗ್ರಾಮಕ್ಕೆ ಮರಳಿದ್ದ ಇವರು ಇಲ್ಲಿನ ಜನರಿಗೆ 6 ತಿಂಗಳ ಕಾಲ ಉಚಿತವಾಗಿ ಯೋಗ ತರಬೇತಿ ನೀಡಿದ್ದರು.

ಸಾಧನೆಗಳು: 2016 ರಲ್ಲಿ ವಿಯಟ್ನಾಮ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೂರ್ಯ ನಮಸ್ಕಾರ ಸ್ಪರ್ಧೆಯಲ್ಲಿ ದಾಖಲೆ, 2016ರಲ್ಲಿ 60 ಗಂಟೆಗಳ ಕಾಲ ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿ ಗ್ರಾಮದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next