Advertisement

ಸೌಂದರ್ಯ ಕಾಪಾಡಲು ಯೋಗದ ದಾರಿ

11:47 AM Nov 24, 2020 | Nagendra Trasi |

ಆರೋಗ್ಯ ಚೆನ್ನಾಗಿರಬೇಕು ಜತೆಗೆ ಸುಂದರವಾಗಿಯೂ ಕಾಣಬೇಕು. ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅನುಸರಿಸುತ್ತಿರುವ ದಾರಿ ಯೋಗ. ಯೋಗದಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮಾತ್ರವಲ್ಲ ಕಾಂತಿಯುತ ತ್ವಚೆಯನ್ನು ಪಡೆಯಲು ಸಾಧ್ಯವಿದೆ. ಇದರಿಂದ
ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು.

Advertisement

ದೇಹದ ಸೌಂದರ್ಯ ಹಾಳಾಗಲು ಹಲವು ಕಾರಣಗಳಿವೆ. ಮುಖ್ಯವಾಗಿ ಒತ್ತಡ, ಹೆಚ್ಚು ಅಥವಾ ಕಡಿಮೆ ವ್ಯಾಯಾಮ. ಕೆಲವೊಂದು ಯೋಗ ಭಂಗಿಗಳು ಚರ್ಮಕ್ಕೆ ಕಾಂತಿ ನೀಡುವುದು. ಇದರಿಂದ ಸೌಂದರ್ಯ ವೃದ್ಧಿಸಿಕೊಳ್ಳಲು ಸಾಧ್ಯವಿದೆ.

ಭುಜಂಗಾಸನ


ಎದೆಯನ್ನು ವಿಸ್ತರಿಸಿ ದೇಹದ ಒತ್ತಡ ಹಾಗೂ ಬಳಲಿಕೆಯನ್ನು ದೂರ ಮಾಡುತ್ತದೆ. ಜತೆಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಇದರಿಂದ ಚರ್ಮಕ್ಕೆ ಪುನಶ್ಚೇತನ ಸಿಗುವುದು.

ಉಸ್ಟ್ರಾಸನ

Advertisement


ಇದು ಪಕ್ಕೆಲುಬನ್ನು ತೆರೆದು ಶ್ವಾಸಕೋಶದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದರಿಂದ ಹೆಚ್ಚು ಆಕ್ಸಿಜನ್‌ ದೇಹಕ್ಕೆ ದೊರೆಯುವುದು. ಮೆದುಳಿನಲ್ಲಿ ರಕ್ತ ಸಂಚಾರ ಉತ್ತಮವಾಗಿ ಸಂವೇದನ ಅಂಗಗಳಿಗೆ ಉತ್ತೇಜನ ದೊರೆಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ದೇಹದಲ್ಲಿ ಹಾರ್ಮೊನ್‌ ಮಟ್ಟ ಸಮತೋಲನದಲ್ಲಿರುವಂತೆ ಮಾಡುತ್ತದೆ.

ಹಾಲಾಸನ


ದೇಹದಲ್ಲಿ ಸಂಪೂರ್ಣ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಎಲ್ಲ ಅಂಗಗಳಿಗೆ ಬೇಕಾಗುವ ಪೋಷಕಾಂಶ ದೊರೆಯಲು ಸಹಾಯ ಮಾಡುತ್ತದೆ. ನಿದ್ರೆಯ
ಸಮಸ್ಯೆಯನ್ನು ನಿವಾರಿಸಿ ದೇಹ ಸೌಂದರ್ಯ ಹಾಗೂ ತ್ವಚೆಯ ಕಾಂತಿಯನ್ನು ಕಾಪಾಡುತ್ತದೆ.

ಮತ್ಸ್ಯಾಸನ


ಮುಖ ಮತ್ತು ಗಂಟಲಿನ ಸ್ನಾಯುಗಳನ್ನು ಬಲಬಡಿಸುತ್ತದೆ. ಚರ್ಮವನ್ನು ನಯಗೊಳಿಸಿ ಬಿಗಿಯಾಗಿಸುತ್ತದೆ. ಥೈರಾಯ್ಡ, ಪೀನಲ್‌, ಪಿಟ್ಯುಟರಿ ಗ್ರಂಥಿಯ ಕ್ರಿಯೆಯನ್ನು ಸಾಮಾನ್ಯಗೊಳಿಸುತ್ತದೆ. ಹಾರ್ಮೋನ್‌ ಅನ್ನು ಸಮತೋಲನದಲ್ಲಿರಿಸಿ ಚರ್ಮದ ಕಾಂತಿಯನ್ನು ಕಾಪಾಡುತ್ತದೆ.

ಪವನಮುಕ್ತಾಸನ


ಜೀರ್ಣಕ್ರಿಯೆ ಸುಧಾರಣೆಗೆ ಇದು ಅತ್ಯುತ್ತಮ ಆಸನ. ನರ ವ್ಯವಸ್ಥೆಯ ಮೇಲೆ ಪರಿಣಾಮಕಾರಿ. ಇದರಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರೆ ಯುತ್ತದೆ. ಜತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೊಡವೆ ನಿವಾರಣೆ, ಚರ್ಮ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next