Advertisement

ಸೌದಿಯಲ್ಲಿ ಯೋಗಕ್ಕೆ ಕ್ರೀಡೆಯ ಮಾನ್ಯತೆ

06:00 AM Nov 15, 2017 | Harsha Rao |

ಹೊಸದಿಲ್ಲಿ: ಯೋಗ ಈಗ ಸೌದಿ ಅರೇಬಿಯಾದ ಅಧಿಕೃತ ಕ್ರೀಡಾ ಚಟುವಟಿಕೆಗಳಲ್ಲಿ ಒಂದು ಎಂದು ಮಾನ್ಯತೆ ಪಡೆದುಕೊಂಡಿದೆ. ಈ ಮೂಲಕ ಇಸ್ಲಾಮಿಕ್‌ ರಾಷ್ಟ್ರದಲ್ಲಿ ಜನತೆಗೆ ಇನ್ಮುಂದೆ ಅಧಿಕೃತವಾಗಿ ಯೋಗ ಕಲಿಕೆ ಹಾಗೂ ಬೋಧನೆಗೆ ಪರವಾನಿಗೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದ ಫ‌ಲವಾಗಿ ಇದು ಸಾಧ್ಯವಾಗಿದೆ. ಮಂಗಳವಾರ ಇಲ್ಲಿನ ಸರಕಾರ ಯೋಗಾಭ್ಯಾಸ ಹಾಗೂ ಯೋಗ ಬೋಧನೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಯೋಗವೂ ಒಂದು ಎಂದು ಹೇಳಿದೆ. ವ್ಯಾಪಾರ ಮತ್ತು ಉದ್ಯಮ ಸಚಿವಾ ಲಯ ಅದಕ್ಕೆ ಅನುಮೋದನೆ ನೀಡಿದೆ.

Advertisement

2015ರಲ್ಲಿ ವಿಶ್ವಸಂಸ್ಥೆ ಜೂನ್‌ 21ರಂದು “ಯೋಗ ದಿನ’ ಆಚ ರಣೆಗೆ ಮಾನ್ಯತೆ ನೀಡಿ ಭಾರತದ ಮನವಿಯನ್ನು ಪುರಸ್ಕರಿಸಿತ್ತು. ಆ ಬಳಿಕ ಸೌದಿ ಅರೇಬಿಯಾ ಸಹಿತ ವಿಶ್ವದ ಅನೇಕ ರಾಷ್ಟ್ರಗಳಲ್ಲಿರುವ ಭಾರತೀಯ ಶಾಲೆಗಳಲ್ಲಿಯೂ ಯೋಗ ಹೇಳಿಕೊಡಲಾಗುತ್ತಿತ್ತು.  ಸೌದಿ ಅರೇಬಿಯಾದಲ್ಲಿ ಕಳೆದ ಅನೇಕ ವರ್ಷಗಳಿಂದ ಯೋಗ ಪಾಠ ಮಾಡುತ್ತ ಬಂದಿರುವ ನೌಫ್ ಅಲ್‌ ಮರ್ವಾಯು ಅಲ್ಲಿನ ಮೊದಲ ಯೋಗ ಶಿಕ್ಷಕಿ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯೋಗಕ್ಕೆ ಮಾನ್ಯತೆ ನೀಡಿದ ವಿಶ್ವದ ಮೊದಲ ಇಸ್ಲಾಮಿಕ್‌ ರಾಷ್ಟ್ರ ಎನಿಸಿಕೊಂಡಿದೆ ಸೌದಿ ಅರೇಬಿಯಾ. ಕೆಲ ದಿನಗಳ ಹಿಂದಷ್ಟೇ ಝಾರ್ಖಂಡ್‌ನ‌ ಮುಸ್ಲಿಂ ಬಾಲಕಿಗೆ ಯೋಗ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಫ‌ತ್ವಾ ಹೊರಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next