Advertisement
ಬಿಬಿಎಂಪಿ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಯೋಗಾಸನ ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಸ್ಕೌಟ್‌ಗೈಡ್ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು. ಸೇನೆಯ ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾ ಬೆಂಗಳೂರಿನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಸೇನಾಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಒಟ್ಟು 6,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
Related Articles
Advertisement
ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿಯವರು ಯೋಗದ ಮಹತ್ವ ಮತ್ತು ಪ್ರಯೋಜನದ ಬಗ್ಗೆ ಮಾತನಾಡಿದರು. ನಗರದ ಹೊರವಲಯದ ಜಿಂದಾಲ್ ಪ್ರಕೃತಿ ಸಂಸ್ಥೆಯಲ್ಲಿ 1,200ಕ್ಕೂ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಜಿಂದಾಲ್ ಪಬ್ಲಿಕ್ ಸ್ಕೂಲ್ ಮತ್ತು ಜಿಂದಾಲ್ ಮಹಿಳೆಯರ ಪದವಿ ಕಾಲೇಜಿನ ವಿದ್ಯಾರ್ಥಿಗಳು ‘ಹೃದಯಕ್ಕಾಗಿ ಯೋಗ’ ಸಂದೇಶ ಸಾರಿದರು.
ಜಿಂದಾನ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನ ಸ್ಥಾಪಕ ಡಾ.ಸೀತಾರಾಮ್ ಜಿಂದಾಲ್ ಯೋಗದ ಮಹತ್ವದ ಕುರಿತು ಮಾತನಾಡಿದರು. ಬಿಇಎಲ್‌ನಲ್ಲೂ ಯೋಗದಿನ ಆಚರಿಸಿದ್ದು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಯ ಸೇರಿ 2000 ಮಂದಿ ಭಾಗವಹಿಸಿದ್ದರು. ಬಾಣಸವಾಡಿ ಮುಖ್ಯ ರಸ್ತೆಯಲ್ಲಿರುವ ಮಾರುತಿಸೇವಾ ನಗರದ ಒರಾಯನ್ ಈಸ್ಟ್ ಮಾಲ್‌ನಲ್ಲಿ ಕೇಶವ ಸೇವಾ ಸಮಿತಿ ವತಿಯಿಂದ ಯೋಗ ಕಾರ್ಯಕ್ರಮ ನಡೆಯಿತು. ಸಮಿತಿಯ ವಿಶ್ವಸ್ಥರಾದ ನ.ತಿಪ್ಪೇಸ್ವಾಮಿರವರು ಯೋಗಾಸಕ್ತರನ್ನು ಉದ್ದೇಶಿಸಿ ಮಾತನಾಡಿದರು. ಚಿತ್ರನಟಿ ಭಾವನ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದರು.
ನಿಮಾನ್ಸ್‌ನಲ್ಲಿ ಯೋಗ ವಸ್ತು ಪ್ರದರ್ಶನ: ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ನಿಮ್ಹಾನ್ಸ್ ಮತ್ತು ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದಲ್ಲಿ ಯೋಗ ಕುರಿತ ವಸ್ತು ಪ್ರದರ್ಶನ ನಡೆಯುತ್ತಿದೆ. ಒಂದು ವಾರ ಕಾಲ ನಡೆಯುವ ಈ ಪ್ರದರ್ಶನಲ್ಲಿ ಯೋಗದ ಕುರಿತು ನಡೆಯುತ್ತಿರುವ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ಪ್ರದರ್ಶಿಸಲಾಗಿದೆ.
ನಿಮಾನ್ಸ್‌ನಲ್ಲಿ ಯೋಗ ದಿನದ ಅಂಗವಾಗಿ ಯೋಗ ವಿಭಾಗ ಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ವೈದ್ಯರು, ಸಿಬ್ಬಂದಿ ವರ್ಗ ಸೇರಿದಂತೆ ಸಾವಿರಾರು ಮಂದಿ ಯೋಗಾಭ್ಯಾಸ ಮಾಡಿದರು. ಆಸ್ಪತ್ರೆ ರೋಗಿಗಳಿಗಾಗಿ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ವಿಶೇಷ ಯೋಗ ಕಾರ್ಯಕ್ರಮ ನಡೆಯಿತು. ಬಳಿಕ ವಿಶೇಷ ಉಪನ್ಯಾಸ ಸೇರಿದಂತೆ ಸಾತ್ವಿಕ ಉಪಾಹಾರ ಕೂಟ ಏರ್ಪಡಿಸಲಾಗಿತ್ತು.