Advertisement

ಯೋಗ ಸರ್ವರೋಗ ನಿವಾರಕ

04:47 PM Jun 07, 2017 | |

ಧಾರವಾಡ: ಯೋಗವು ನಮ್ಮ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ವಿಶ್ವಸಂಸ್ಥೆಯು ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಿನ ಆಚರಿಸಲು ನಿರ್ಣಯ ಕೈಗೊಂಡಿರುವುದು ಯೋಗದ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದರು. 

Advertisement

ಭಾರತ ಸರಕಾರದ ಆಯುಷ್‌ ಮಂತ್ರಾಲಯದ ಯೋಗ ಮತ್ತು ನಿಸರ್ಗ ಚಿಕಿತ್ಸಾ ಸಂಶೋಧನಾ ಸಂಸ್ಥೆ ಸ್ಥಳೀಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಉಚಿತ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ನಮ್ಮ ನಿತ್ಯ ಚಟುವಟಿಕೆಗಳಿಗೆ ಮತ್ತು ವಿದ್ಯಾರ್ಥಿಗಳ ಅಧ್ಯಯನದಲ್ಲಿ ಏಕಾಗ್ರತೆ ಕಂಡುಕೊಳ್ಳಲು ಯೋಗಾಭ್ಯಾಸ ಪೂರಕವಾಗಿದೆ. ನಾನು ಈ ಹಿಂದೆ ಧಾರವಾಡದ ಅಪರ ಜಿಲ್ಲಾ ಧಿಕಾರಿಯಾಗಿದ್ದ ವೇಳೆ ಕವಿವಿಯಿಂದ ಯೋಗ ಸರ್ಟಿμಕೇಟ್‌ ಕೋರ್ಸ್‌ ಮಾಡಿದ್ದೇನೆ. ಶಾರೀರಿಕ, ಮಾನಸಿಕ ಆರೋಗ್ಯ ನಿರ್ವಹಣೆಗೆ ಯೋಗ ಸಹಕಾರಿಯಾಗಿದೆ.

ಪರಿಣಿತ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುವುದು ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾವಿತ್ರಿ ಮಹಿಷಿ ಮಾತನಾಡಿ, ಸಮಾಜಮುಖೀ ಕಾರ್ಯಗಳಿಗೆ ಮಹಿಷಿ ಟ್ರಸ್ಟ್‌ ಕೈಜೋಡಿಸುತ್ತದೆ. ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಜಿಲ್ಲೆಯ ವಿವಿಧ 75 ಕೇಂದ್ರಗಳಲ್ಲಿ 15 ದಿನಗಳ ಕಾಲ ಯೋಗ ಶಿಬಿರ ನಡೆಯುತ್ತಿವೆ. ಸಾರ್ವಜನಿಕರು ಅ ಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. 

ಜಿಲ್ಲಾ ಆಯುಷ್‌ ಅ ಧಿಕಾರಿ ಡಾ|ಜಿ.ಡಿ.ಪವಾರ್‌, ಡಾ|ಶ್ರೀಶೈಲ ಚೌಗಲಾ ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ರಮೇಶ ಸುಲಾಖೆ, ಎಸ್‌.ಎಚ್‌.ಪಾಟೀಲ, ರಾಮಚಂದ್ರ ಧೋಂಗಡೆ, ಡಾ|ಎಸ್‌.ಆರ್‌. ರಾಮನಗೌಡ್ರ, ಹೆಚ್‌.ಡಿ.ಟಕ್ಕಳಕಿ ಇದ್ದರು. ಇಂದಿರಾ ಹಾಗೂ ಸಪ್ನಾ ಪ್ರಾರ್ಥಿಸಿದರು. ಜಗದೀಶ ಮಳಗಿ ನಿರೂಪಿಸಿದರು. ಎಂ.ಡಿ.ಪಾಟೀಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next