Advertisement

ಯೋಗ ಶಬ್ದಕ್ಕಿದೆ ವಿಶಾಲ ಅರ್ಥ: ಡಾ|ಚೆನ್ನವೀರ ಶ್ರೀ

02:46 PM Jun 22, 2018 | Team Udayavani |

ಬಸವಕಲ್ಯಾಣ: ಯೋಗ ಪರಂಪರೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪ್ರಾಚೀನ ಇತಿಹಾಸವಿದೆ.ರೋಗ ಮುಕ್ತಸಮಾಜ ನಿರ್ಮಾಣಕ್ಕೆ ಯೋಗ  ಸಹಕಾರಿಯಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ| ಚೆನ್ನವೀರ ಶಿವಾಚಾರ್ಯರು ಹೇಳಿದರು.

Advertisement

ಹಾರಕೂಡ ಗ್ರಾಮದ ಶ್ರೀ ಚನ್ನರೇಣುಕಬಸವ ಮಂಟಪದಲ್ಲಿ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡ, ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್‌ ಆಶ್ರಯದಲ್ಲಿ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಯೋಗ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಯೋಗ ಶಬ್ದದ ಅರ್ಥ ಬಹಳ ವಿಶಾಲವಾಗಿದೆ. ಜೀವನು ದೇವನೆಡೆಗೆ ಬೆರೆಯುವುದೇ ಯೋಗ. ಯೋಗಶಾಸ್ತ್ರದಲ್ಲಿ
ಹಲವು ಬಗೆಯ ಭೇದ, ಪ್ರಭೇದಗಳಿವೆ. ಹಟಯೋಗ, ಲಯಯೋಗ, ರಾಜಯೋಗ, ಶಿವಯೋಗ ಮುಂತಾದ ಯೋಗಗಳಿವೆ. ಪತಂಜಲಿ ಋಷಿಗಳಿಂದ ಆರಂಭವಾದ ಈ ಯೋಗ ಸಂಸ್ಕೃತಿಗೆ ಮಹಾತ್ಮರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ತಾಲೂಕಿನ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ| ಬಸವರಾಜ ಸ್ವಾಮಿ ಯೋಗಾಸನ ಕುರಿತು ಜನರಿಗೆ ಮಾರ್ಗದರ್ಶನ ನೀಡಿದರು. ಜತೆಗೆ ಯೋಗದ ಮಹತ್ವ ಅದರಿಂದ ಆರೋಗ್ಯಕ್ಕೆ ಆಗುವ ಲಾಭ ಕುರಿತು ವಿವರಿಸಿದರು. ಜಿಪಂ ಸದಸ್ಯ ರಾಜಶೇಖರ್‌ ಮೇತ್ರೆ, ಆನಂದ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪಾ ಗುದಗೆ,
ಮುಖಂಡರಾದ ಬಾಬುಹೊನ್ನಾ ನಾಯಕ, ರಾಜಕುಮಾರ ಪಾಟೀಲ ಸಿರಗಾಪುರ, ಪ್ರದೀಪ ವಾತಡೆ, ನಾರಾಯಣರಾವ್‌ ಬುನ್ನಾ, ಶಾಂತಲಿಂಗ ಮಠಪತಿ, ಡಾ| ಅಮರನಾಥ ಜಮಾದಾರ, ಬಕ್ಕಯ್ನಾ ಸ್ವಾಮಿ, ಮಲ್ಲಿನಾಥ ಹಿರೇಮಠ, ಬಾಬು ಚಾಕೂರೆ, ವಿಠಲ ಹೂಗಾರ ಇದ್ದರು.

ಯೋಗ ದಿನಾಚರಣೆ ನಿಮಿತ್ತ ಹಾರಕೂಡನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಯೋಗ  ಶಿಬಿರದಲ್ಲಿ ಗಣ್ಯರು, ಸಂಘ ಸಂಸ್ಥೆ ಪದಾಧಿ ಕಾರಿಗಳು,ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next