Advertisement

ಶ್ರೀಧರ ಮುರಡಿ ಹಿರೇಮಠದಲ್ಲಿ ನಿತ್ಯ ಯೋಗ

08:31 PM Jun 21, 2021 | Team Udayavani |

ವರದಿ: ಮಲ್ಲಪ್ಪ ಮಾಟರಂಗಿ

Advertisement

ಯಲಬುರ್ಗಾ: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ 10 ವರ್ಷಗಳಿಂದ ತಮ್ಮ ಮಠದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಆರಂಭಿಸಿದ್ದಾರೆ. ಈ ಮೂಲಕ ಭಕ್ತರಿಗೆ ನಿತ್ಯ ಯೋಗಾಸನ ಮಾಡಿಸುತ್ತಿದ್ದಾರೆ.

ಸ್ವಂತ ಖರ್ಚಿನಲ್ಲಿ ಯೋಗಾಭ್ಯಾಸಕ್ಕೆ ಬೇಕಾಗುವ ಎಲ್ಲ ಸಾಮಗ್ರಿ ನೀಡುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಬೆಳಗಿನ ಜಾವ 4:30ಕ್ಕೆ ಕರೆ ಮಾಡಿ ಎಲ್ಲರನ್ನೂ ಒಗ್ಗೂಡಿಸಿ ಯೋಗಾಭ್ಯಾಸ ಕಲಿಸುತ್ತಿದ್ದಾರೆ. ಇವರ ಶಿಬಿರದಲ್ಲಿ ಪಳಗಿದ ಅನೇಕರು ಯೋಗ ಶಿಕ್ಷಕರಾಗಿ ವಿವಿಧೆಡೆ ಸೇವೆ ಮಾಡುತ್ತಿದ್ದಾರೆ. 100ಕ್ಕೂ ಅಧಿ ಕ ಆಸನಗಳನ್ನು ಶಿಬಿರಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ. ಆರೋಗ್ಯ ಹಾಗೂ ಒತ್ತಡದ ಬದುಕಿನಲ್ಲಿ ಕಾಲಕಳೆಯುವ ಜನತೆಯಲ್ಲಿ ಮಾನಸಿಕ ನೆಮ್ಮದಿ,ದೈಹಿಕ ಸದೃಢತೆ ಹೊಂದಲಿ ಎಂಬ ಉದ್ದೇಶದಿಂದ ಯೋಗ ಕಲಿಸಲು ಮುಂದಾಗಿದ್ದಾರೆ. ಇವರ ಬಳಿ ಯೋಗ ಕಲಿತ ಹಲವಾರು ವಿದ್ಯಾರ್ಥಿಗಳು, ಯುವಕರು, ಜಿಲ್ಲಾ- ರಾಜ್ಯಮಟ್ಟದಲ್ಲಿ ನಡೆಯುವ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಸಹ ಮುಡಿಗೇರಿಸಿಕೊಂಡಿದ್ದಾರೆ.

ಪೌಷ್ಟಿಕ ಆಹಾರ ವಿತರಣೆ: ಬೆಳಗ್ಗೆ ಶಿಬಿರಾರ್ಥಿಗಳಿಗೆ ಪೌಷ್ಟಿಕ ಆಹಾರಗಳಾದ ಮೊಳಕೆ ಕಾಳು, ಹಣ್ಣುಗಳನ್ನು ನೀಡುತ್ತಿದ್ದಾರೆ. ಬರೀ ವಿಶ್ವ ಯೋಗ ದಿನಾಚರಣೆ ಸಮಯದಲ್ಲಿ ಅಷ್ಟೇ ಅಲ್ಲ ಶ್ರೀಮಠದಲ್ಲಿ ನಿತ್ಯ ಯೋಗ ಶಿಬಿರ ನಡೆಯುತ್ತದೆ. ಶಿಬಿರದಲ್ಲಿ ಪಟ್ಟಣ ವ್ಯಾಪ್ತಿಯ 120ಕ್ಕೂ ಹೆಚ್ಚು ಜನತೆ ಪಾಲ್ಗೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next