Advertisement

Yoga; ಬಂಜೆತನ ನಿವಾರಣೆಗೆ ಯೋಗದಲ್ಲಿ ಶಕ್ತಿ ಇದೆ…

08:38 AM Jun 15, 2023 | Team Udayavani |

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಬಂಜೆತನವು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ನಿಯಮಿತ ಅಸುರಕ್ಷಿತ ಲೈಂಗಿಕ ಸಂಪರ್ಕ ಅನಂತರ ಗರ್ಭಧಾರಣೆ ಸಾಧಿಸಲು ವಿಫ‌ಲವಾದ ಸಂತಾನೋತ್ಪತ್ತಿ ವ್ಯವಸ್ಥೆಯ ಕಾಯಿಲೆಯಾಗಿದೆ.

Advertisement

ಸಮೀಕ್ಷೆ ಪ್ರಕಾರ, ಬಂಜೆತನ ಸಾಮಾನ್ಯವಾಗಿ 15:1 ದಂಪತಿಗಳಲ್ಲಿ ಕಂಡು ಬರುತ್ತದೆ. ಪ್ರತೀ 6 ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಬಂಜೆತನ ಅನುಭವಿಸುತ್ತಾರೆ ಎಂದು ಅಂಕಿಅಂಶಗಳು ದೃಢಪಡಿಸಿವೆ.

ಬಂಜೆತನವು ಪುರುಷ ಅಥವಾ ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗಳಲ್ಲಿ ಹಲವಾರು ವಿಭಿನ್ನ ಅಂಶಗಳಿಂದ ಉಂಟಾಗಬಹುದು. ಸ್ತ್ರೀಯರಲ್ಲಿ ಅಂಡಾಶಯದ ತೊಂದರೆ, ಡಿಂಬನಾಳದ ತೊಂದರೆ, ಗರ್ಭಾಶಯದ ತೊಂದರೆ, ಅಂತಃಸ್ರಾವಕ ವ್ಯವಸ್ಥೆಯ ಅಸಹಜತೆ ಬಂಜೆತನಕ್ಕೆ ಕಾರಣಗ‌ಳಾಗಿವೆ. ಪುರುಷರಲ್ಲಿ ವೀರ್ಯ ಅನುಪಸ್ಥಿತಿ, ವೀರ್ಯ ಚಲನೆ ಸಮಸ್ಯೆ, ಕಡಿಮೆ ಮಟ್ಟದ ವೀರ್ಯ, ಅಸಹಜ ಆಕಾರ, ಫ‌ಲವತ್ತತೆ ಸಮಸ್ಯೆಗಳು ಕಂಡು ಬರುತ್ತವೆ.
ಯೋಗಾಭ್ಯಾಸದಿಂದ ಹಲವು ಸಮಸ್ಯೆಗಳು ಪರಿಹಾರ ಆಗಲಿವೆ. ಯೋಗ ಎಂದರೆ ಜೋಡಿಸು ಎಂದರ್ಥ. ದೇಹದ ಜತೆ ಮನಸ್ಸು, ಬುದ್ಧಿ, ಭಾವನೆ, ಆತ್ಮಗಳನ್ನು ಕೂಡಿಸುವುದು ಯೋಗ. ಯೋಗವನ್ನು ಆಧ್ಯಾತ್ಮಿಕ ಹಾಗೂ ತಪಸ್ವಿ ಶಿಸ್ತು ಎಂದು ವ್ಯಾಖ್ಯಾನಿಸಲಾಗಿದೆ.

ಅಭಿವೃದ್ಧಿಪಡಿಸಿದ ಯೋಗ ಚಿಕಿತ್ಸೆ ಮಾದರಿಯ ಪ್ರಕಾರ, ಸಮಗ್ರ ರೋಗದ ಮೂಲ ಕಾರಣ “ಮನಸ್ಸು’ (ಮಾನಸಿಕ) ಎಂಬ ತಣ್ತೀವನ್ನು ಆಧರಿಸಿದೆ. ಈ ಮನಸ್ಸನ್ನು ನಿಯಂತ್ರಣಕ್ಕೆ ತರಲು ಒತ್ತಡ ಹಾಗೂ ಬೇಡಿಕೆಯ ಜೀವನದ ಸನ್ನಿವೇ ಶಗಳಿಂದಾದ ಅಸಮತೋಲನವನ್ನು ಸರಿಪಡಿಸಲು 5 ಹಂತಗಳ ಪಂಚಕೋಶದ ಪರಿಕಲ್ಪನೆಯ ಆಧಾರದ ಮೇಲೆ ಯೋಗದ ಅಭ್ಯಾಸಗಳನ್ನು ಸಂಯೋಜಿಸಲಾಗಿದೆ.

1.ಅನ್ನಮಯ ಕೋಶ. 2. ಪ್ರಾಣಮಯ ಕೋಶ. 3. ಮನೋಮಯ ಕೋಶ 4. ಜ್ಞಾನಮಯ ಕೋಶ. 5. ಆನಂದಮಯ ಕೋಶ. ಬಂಜೆತನ ನಿವಾರಿಸಲು ಆರಂಭದ 3 ಕೋಶಗಳು ಮುಖ್ಯ ಪಾತ್ರವಹಿಸುತ್ತವೆ.

Advertisement

ಅನ್ನಮಯಕೋಶ: ಇಲ್ಲಿ ಯೋಗದ “ಕ್ರಿಯೆ’ ಎಂದರೆ ಕಪಾಲಭಾತಿ, ಯೋಗ ಮುದ್ರೆ, ನಿಶ್ಚಿತ ಯೋಗದ ಭಂಗಿಗಳಾದ ಹಾಲಾಸನ, ಬದ್ಧಕೋನಾಸನ, ಸರ್ವಾಂಗಾಸನ, ಬಾಲಾಸನ, ವಿಪರೀತಕರಣಿ ಮತ್ತಿತರ ಆಸನಗಳಿಂದ ಶ್ರೋಣಿಯ ರಕ್ತ ಪರಿಚಲನೆ ಹೆಚ್ಚಿಸಬಹುದು. ಈ ನಿಶ್ಚಿತ ಆಸನಗಳಿಂದ ಡೋಪಾಮೈನ್‌, ಆಕ್ಸಿಟೋಸಿನಾ, ಎಂಡಾಫಿನ್‌ಗಳಂತಹ ರಾಸಾಯನಿಕಗಳ ಉತ್ಪಾ ದನೆ ಹೆಚ್ಚಿಸಲು ಸಹಾಯವಾಗುತ್ತದೆ.

ಪ್ರಾಣಮಯ ಕೋಶ: ಉಸಿರಾಟವನ್ನು “ಪ್ರಾಣ’ ಎಂದು ಕರೆಯಲಾಗುತ್ತದೆ. ಪ್ರಾಣಾಯಾಮದಲ್ಲಿ ಉಚ್ಛಾ$Ìಸ ಗಾಳಿಯು ಪ್ರಾಣ ವಾಯುವನ್ನು, ನಿಶ್ವಾಸವು ಅಪಾನ ವಾಯುವನ್ನು ಚುರುಕುಗೊಳಿಸುತ್ತದೆ. ಬೆನ್ನು ಮೂಳೆಯಿಂದ ಮೆದುಳಿನವರೆಗಿನ ಭಾಗದ ಶಕ್ತಿಯನ್ನು ಉದಾನ ವಾಯು ವು ವೃದ್ಧಿಸುತ್ತದೆ. ಪ್ರಾಣ ಹಾಗೂ ಅಪಾನ ವಾಯು ಗಳ ನಿರ್ವಹಣೆಗೆ ವ್ಯಾನ ವಾಯುವೇ ಆಧಾರ. ಈ ನಿಯಮಿತ ಪ್ರಾಣಾಯಾಮದಿಂದ (ಪೂರಕ, ಕುಂಭಕ, ರೇಚಕ) ಆಮ್ಲಜನಕದ ಪ್ರಕ್ರಿಯೆ ಹೆಚ್ಚಾಗಿ ಬಂಜೆತನಕ್ಕೆ ಸಂಬಂಧಿಸಿದ ಖನ್ನತೆ, ಆತಂಕ, ಭಯದಿಂದ ರೋಗಿ ದೂರ ವಾಗುತ್ತಾನೆ.

ಮನೋಮಯ ಕೋಶ: ಧ್ಯಾನ ಮನಸ್ಸನ್ನು ಏಕಾಗ್ರತೆಗೆ ತರುವುದು. ನಾದ ಅನುಸಂಧಾನ, ಎಂಎಸ್‌ಆರ್‌ಟಿ (ಮ ನಸ್ಸು ಶಬ್ದ ಸ್ಪಂದನದ ಧ್ಯಾನ), ಡಿಆರ್‌ಟಿ(ಡೀಪ್‌ ರಿಲ್ಯಾಕ್ಷನ್‌ ಟೆಕ್ನಿಕ್‌), ಯೋಗ ನಿದ್ರಾ ಮತ್ತಿತರ ಪ್ರಕ್ರಿ ಯೆಗಳಿಂದ ಮನಸ್ಸು ಶಾಂತಗೊಳಿಸಿ ಪುರುಷರಲ್ಲಿ ಹಾರ್ಮೋನ್‌ ಉತ್ಪಾದನೆ ಜಾಸ್ತಿಯಾಗಿ ಲೈಂಗಿಕ ಬಯಕೆ ಹೆಚ್ಚುತ್ತದೆ. ಬಂಜೆತನದ ಪೂರಕ ಚಿಕಿತ್ಸೆಯಲ್ಲಿ ನಾಲ್ಕು ಭಾಗಗಳನ್ನು ಮಾಡಲಾಗಿದೆ. ಪೂರಕ ಚಿಕಿತ್ಸೆಯ ಮೊದಲಿನ ಅವಸ್ಥೆಯಲ್ಲಿ ಸೂರ್ಯ ನಮಸ್ಕಾರ, ಎಲ್ಲ ಯೋಗ ಬಂಧಗಳು, ಕ್ರಿಯೆಗಳು ಕ್ಯೂಆರ್‌ಟಿ (ಕ್ವಿಕ್‌ ರಿಲ್ಯಾಕ್ಷನ್‌ ಟೆಕ್ನಿಕ್‌), ಡಿಆರ್‌ಟಿ, ನಿಶ್ಚಿತ ಆಸನಗಳು ತುಂಬಾ ಸಹಾಯವಾಗುತ್ತದೆ.

ಅಂಡಾಶಯದ ಪ್ರಚೋದನೆಯ ನಿಯಂತ್ರಣ: ಮೊದಲ ಅರ್ಧ ಹಂತದಲ್ಲಿ ಎಲ್ಲ ಆಸನಗಳು ಹಾಗೂ ಕ್ರಿಯೆಗಳನ್ನು ಮಾಡಬಹುದು. ಎರಡನೇ ಅರ್ಧ ಹಂತದಲ್ಲಿ ಕೇವಲ ಪ್ರಾಣಾಯಾಮ ಸಹಾಯವಾಗುತ್ತದೆ.

ಮೊಟ್ಟೆಗಳ ಸಂಗ್ರಹಣೆ: (post egg retrieval collection of eggs) ಪ್ರಾಣಾಯಾಮ ಹಾಗೂ ಎಂಎಸ್‌ಆರ್‌ಟಿ ಸಹಾಯವಾಗುತ್ತದೆ.

ಭ್ರೂಣ ವರ್ಗಾವಣೆ: ಈ ಸಮಯದಲ್ಲಿ ನಿಶ್ಚಿತ ಯೋಗಾಸನ, ಪ್ರಾಣಾಯಾಮ, ಸೆಕ್ಷನಲ್‌ ಬ್ರಿàದಿಂಗ್‌, ಎಂಎಸ್‌ಆರ್‌ಟಿ, ಯೋಗ ನಿದ್ರಾ, ಭಜನೆ, ಮಂತ್ರ ಪಠಣ ತುಂಬಾ ಸಹಾಯವಾಗುತ್ತದೆ.

ಚಿಕಿತ್ಸೆ ಫ‌ಲಿತಾಂಶ
ಪ್ರಯೋಜನಗಳನ್ನು ನಿರ್ಣಯಿಸಲು ಹಾಗೂ ಯೋಗ ಪ್ರಯೋಜನವನ್ನು ಪ್ರಾಮಾಣೀಕರಿಸಲು ಹಾಗೂ ಫ‌ಲವತ್ತತೆಯ ಮೇಲೆ ಅದರ ಪರಿಣಾಮವನ್ನು ವೀಕ್ಷಿಸಲು ಸ್ವಾಸ್ಥ ವಿ.ವಿಯಲ್ಲಿ ವಿವಿಧ ಅಧ್ಯಯನಗಳನ್ನು ನಡೆಸಲಾ ಗಿದೆ. 2019ರಲ್ಲಿ ಬಂಜೆತನಕ್ಕೆ ಚಿಕಿತ್ಸೆ ಪಡೆಯುವ 300 ಮಹಿಳೆಯರಲ್ಲಿ ನಾನು ಅಧ್ಯ ಯನ ನಡೆಸಿದ್ದೇನೆ. ಚಿಕಿತ್ಸೆಯಾಗಿ ಯೋಗವನ್ನು ಪಡೆದ ಗುಂಪು ಧನಾತ್ಮಕ ಗರ್ಭ ಧಾರಣೆಯ ಫ‌ಲಿತಾಂಶ ಸಂಭವನೀಯತೆಯನ್ನು ಶೇ.57ಕ್ಕೆ ಹೆಚ್ಚಿಸಲಾಗಿದೆ. ಇದು ಹಸ್ತಕ್ಷೇಪವಿಲ್ಲದ ಗುಂಪಿನಲ್ಲಿ ಶೇ.35ಕ್ಕೆ ಹೋಲಿಸಿದರೆ ಗೊನಾಟೋ ಟ್ರಾಫಿನ್‌ಗಳಂತಹ ಹಾರ್ಮೋನ್‌ಗಳ ಅಗತ್ಯ, ಔಷಧಗಳ ಡೋಸೇಜ್‌ ಕೂಡ ಕಡಿಮೆಯಾಯಿತು. ಇದರಿಂದ ಅಡ್ಡ ಪರಿಣಾಮಗಳು ಉಂಟಾಗಲಿಲ್ಲ. ನೈಸರ್ಗಿಕ ಪರಿಕಲ್ಪನೆಯ ದರವನ್ನು ಕೆಲವೇ ಅವಧಿಗಳೊಂದಿಗೆ ಹೆಚ್ಚಿ ‌ಲಾ ಯಿತು. ಯೋಗದ ಪ್ರಯೋಜನಗಳು ಅಸಂಖ್ಯಾತ ಹಾಗೂ ಫ‌ಲವತ್ತತೆಯ ಕ್ಷೇತ್ರದಲ್ಲಿ ಖಂಡಿತವಾಗಿಯೂ ಪ್ರಮಾಣೀಕರಿಸಲ್ಪಡುತ್ತದೆ.

ಉಪಸಂಹಾರ: ಯೋಗ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಲ್ಲಿ, ನುರಿತ ಗುರು ಗಳ ಆಶ್ರಯದಲ್ಲಿ ಪ್ರಾಣಾಯಾಮ, ಆಸನಗಳನ್ನು ಅಭ್ಯಾಸ ಮಾಡಿ.ಗರ್ಭ ಧಾರಣೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಬಂಜೆತನದಿಂದ ಬೇಗ ಮುಕ್ತವಾಗಬಹುದು.

ಶ್ರೀ ಗುರುವೇ ನಮಃ
ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು
ಯೋಗದ ಮಹತ್ವ 50 ವರ್ಷಗಳ ಹಿಂದೆ ಅಷ್ಟಾಗಿ ಜನರಿಗೆ ತಿಳಿದಿರಲಿಲ್ಲ. ಆ ಕಾಲದಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ಯೋಗವನ್ನು ತಪಸ್ವಿಯಂತೆ ಆಚರಿಸಿ, ಸಹಸ್ರಾರು ಯೋಗ ಪಟುಗಳನ್ನು ಸೃಷ್ಟಿಸಿ ಅದರ ಮಹತ್ವವನ್ನು ಪ್ರಚುರ ಪಡಿಸಿದರು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿಯಲ್ಲಿ ಆಶ್ರಮ ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಮ್ಮ ಇಡೀ ಜೀವನವನ್ನು ಸೇವೆಗೆ ಮುಡಿಪಾಗಿಟ್ಟಿದರು. ಅಲ್ಲಿನ ವಿದ್ಯಾರ್ಥಿ ಗಳು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಸೂರ್ಯ ನಮಸ್ಕಾರ ಜತೆಗೆ ಆಸನಗಳನ್ನು ಮಾಡುವುದು ಕಡ್ಡಾಯವಾಗಿತ್ತು. ಜೋಳಿಗೆ ಹಿಡಿದು ಊರು ಊರು ಸುತ್ತಿ ಸಹಸ್ರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರದ ಜತೆಗೆ ಯೋಗದ ಮೂಲಕ ಶಿಸ್ತುಬದ್ಧ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಶಿಸ್ತಿಗೆ ಮತ್ತೊಂದು ಹೆಸರಾಗಿದ್ದ ಅವರು ಐದಾರು ದಶಕಗಳ ಹಿಂದೆಯೇ ಮಲ್ಲಾಡಿಹಳ್ಳಿಯಲ್ಲಿ ಸುಂದರ, ಸ್ವತ್ಛ ನಗರಿ ರೀತಿಯ ವಾತಾವರಣ ಕಲ್ಲಿಸಿದ್ದರು. ಆಯುರ್ವೇದ ಪರಿಣಿತರಾಗಿದ್ದ ರಾಘವೇಂದ್ರ ಸ್ವಾಮಿಗಳು ಆ ಗ್ರಾಮದಲ್ಲಿ ಆಯುರ್ವೇದ ಆಸ್ಪತ್ರೆ ಹಾಗೂ ವಿಶ್ವ ಯೋಗ ಮಂದಿರವನ್ನು ಸ್ಥಾಪಿಸಿದ್ದರು. ಡಾ| ರಾಜ್‌ ಅವರನ್ನು ಕರೆಯಿಸಿ ಯೋಗ ಮಂದಿರವನ್ನು ಉದ್ಘಾಟಿಸಿದ್ದರು. ಹಳ್ಳಿ ಹಳ್ಳಿಗಳಲ್ಲಿ ಯೋಗ ಶಿಬಿರ, ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸಮಾಜಮುಖೀಯಾಗಿದ್ದರು. ತಮ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಲಕ್ಷಾಂತರ ಮಂದಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಸಾಹಿತಿ ಕೂಡ ಆಗಿದ್ದ ಅವರು ಯೋಗ ಕುರಿತು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿ ಸಿದ್ದಾರೆ. ತಿರುಕ ಎಂಬ ಕಾವ್ಯನಾಮದೊಂದಿಗೆ ಹಲವು ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ. 1890ರಲ್ಲಿ ಜನಿಸಿ ಶತಾಯುಷಿಗಳಾಗಿ ಪರಮಯೋಗಾಚಾರ್ಯ, ತಪಸ್ವಿ, ಅಭಿನವ ಧನ್ವಂತರಿ ಎಂದು ಖ್ಯಾತರಾಗಿದ್ದಾರೆ. 1996ರಲ್ಲಿ ವಿಧಿವಶರಾದ ಸ್ವಾಮಿಗಳು ತಮ್ಮ ಸಾಧನೆಗಳನ್ನು ಜನಮಾನಸದಲ್ಲಿ ಉಳಿಸಿಹೋಗಿದ್ದಾರೆ.

ಯೋಗ ಮಂತ್ರ
“ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ. ತಣ್ತೀಂ ಪೂಷನ್ನಪೂವೃಣು ಧರ್ಮಾಯ ದೃಷ್ಟಯೇ.
ಇದು ಸೂರ್ಯ ನಮಸ್ಕಾರ ಮಾಡುವ ಮುನ್ನ ಹೇಳಬೇಕಾದ ಮಂತ್ರವಾಗಿದೆ.
ಓ ಸೂರ್ಯನೇ ಪಾತ್ರೆಯ ಮುಚ್ಚಳ ದಂತೆ ನಿನ್ನ ಸ್ವರ್ಣವಲಯವು ಸತ್ಯದ ಪ್ರವೇಶದ್ವಾರವನ್ನು ಮುಚ್ಚದೆ ಕೃಪೆದೋರಿ ನನ್ನನ್ನು ಸತ್ಯದೆಡೆಗೆ ಕರೆದೊಯ್ಯಲು ನಿನ್ನ ಪ್ರವೇಶದ್ವಾರವನ್ನು ತೆರೆ.

ಪಾದಹಸ್ತಾಸನ
ಇದು ನಿಂತುಕೊಂಡು ಮಾಡುವ ಆಸನ. ನಿಮ್ಮ ಕಾಲೆºರಳುಗಳನ್ನು ಒಟ್ಟಿಗೆ ಜೋಡಿಸಿ. ನೇರವಾಗಿ ನಿಂತುಕೊಳ್ಳಬೇಕು. ಹಿಮ್ಮಡಿಗಳು ತುಸು ದೂರವಿರ ಬೇಕು. ಅಂಗೈಗಳನ್ನು ಆಯಾ ತೊಡೆಗಳ ಮೇಲೆ ಇರಿಸಿ. (ತಾಡಾಸನ ಸ್ಥಿತಿ)
ಪ್ರಥಮ ಹಂತ: ಉಸಿರನ್ನು ತೆಗೆದುಕೊಳ್ಳುತ್ತಾ (ಐnಜಚlಛಿ) ಎರಡೂ ಕೈಗಳನ್ನು ಭುಜದವರೆಗೆ ಮೇಲಕ್ಕೆ ಎತ್ತಿ.
ದ್ವಿತೀಯ ಹಂತ: ಮತ್ತೆ ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತಾ(ಐnಜಚlಛಿ) ಎರಡೂ ಕೈಗಳನ್ನು ತಲೆಯ ಮೇಲೆ ನೇರವಾಗಿಸಬೇಕು. ತೋಳುಗಳು ಕಿವಿಯನ್ನು ಸ್ಪರ್ಶಿಸಿರಬೇಕು.
ತೃತೀಯ ಹಂತ: ಉಸಿರುಬಿಡುತ್ತಾ (ಉxಜಚlಛಿ) ದೇಹವನ್ನು ಅರ್ಧ ಭಾಗಕ್ಕೆ ಬಾಗಿಸಬೇಕು.
ನಾಲ್ಕನೇ ಹಂತ: ಮತ್ತೆ ಪೂರ್ಣವಾಗಿ ಉಸಿರು ಬಿಡುತ್ತಾ(ಉxಜಚlಛಿ) ಎರಡೂ ಕೈಗಳನ್ನು ನೆಲಕ್ಕೆ ಮುಟ್ಟಿಸಬೇಕು. ಮೊಣಕಾಲು ನೇರವಾಗಿರಬೇಕು. ಸಾಧ್ಯವಾದಷ್ಟರ ಮಟ್ಟಿಗೆ ಹಣೆಯನ್ನು ಮೊಣಕಾಲಿಗೆ ಮುಟ್ಟಿಸಿ. ತೋಳುಗಳು ಕಿವಿಯನ್ನು ಸ್ಪರ್ಶಿಸಬೇಕು.
ಐದನೇ ಹಂತ: ಉಸಿರನ್ನು ತೆಗೆದುಕೊಳ್ಳುತ್ತಾ (ಐnಜಚlಛಿ) ನಿಧಾನವಾಗಿ ದೇಹವನ್ನು ಮೇಲಕ್ಕೆ ಎತ್ತುತ್ತಾ ಅರ್ಧಭಾಗಕ್ಕೆ ಬಗ್ಗಿಸಬೇಕು. (ತೃತೀಯ ಹಂತದ ರೀತಿ)
ಆರನೇ ಹಂತ: ಮತ್ತೆ ಉಸಿರು ತೆಗೆದುಕೊಳ್ಳುತ್ತಾ (ಐnಜಚlಛಿ)ದೇಹವನ್ನು ನೇರವಾಗಿಸಿ ಎರಡೂ ಕೈಗಳು ತಲೆಯ ಮೇಲೆ ನೇರವಾಗಿರಬೇಕು. (ದ್ವಿತೀಯ ಹಂತದ ರೀತಿ)
ಏಳನೇ ಹಂತ: ಉಸಿರು ಬಿಡುತ್ತಾ(ಉxಜಚlಛಿ) ನಿಧಾನವಾಗಿ ಎರಡೂ ಕೈಗಳನ್ನು ಭುಜದ ಮಟ್ಟಕ್ಕೆ ಇಳಿಸಿ.
ಎಂಟನೇ ಹಂತ: ಮತ್ತೆ ಸಂಪೂರ್ಣವಾಗಿ ಉಸಿರು ಬಿಡುತ್ತಾ(ಉxಜಚlಛಿ) ಎರಡೂ ಕೈಗಳನ್ನು ನಿಧಾನವಾಗಿ ಇಳಿಸುತ್ತಾ ತಾಡಾಸನ ಸ್ಥಿತಿಗೆ ಬರಬೇಕು.
ಉಪಯೋಗಗಳು: ಬೆನ್ನಿಗೆ ಈ ಆಸನ ಅತ್ಯುತ್ತಮ ವ್ಯಾಯಾಮ ನೀಡಲಿದೆ. ಬೆನ್ನುಮೂಳೆ ಹಾಗೂ ತೊಡೆಗಳು ಸದೃಢಗೊಳ್ಳಲಿವೆ. ಮಲಬದ್ಧತೆ, ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಹೊಟ್ಟೆಯಲ್ಲಿನ ಬೊಜ್ಜು ಕರಗುತ್ತದೆ.
ವಿಶೇಷ ಸೂಚನೆ: ಬೆನ್ನುಹುರಿ ಹಾಗೂ ಉದರದ ಸಮಸ್ಯೆ ಇರುವವರು ಈ ಆಸನ ಮಾಡಬಾರದು.

-ಡಾ| ಮಂಜುಷಾ ನಂದಕುಮಾರ್‌,
ಬಿಎಎಂಎಸ್‌, ಎಂಎಸ್ಸಿ(ಯೋಗ), ಹೋಲಿಸ್ಟಿಕ್‌ ಥೆರಪಿಸ್ಟ್‌ ಇನ್‌ ಇನ್‌ಫ‌ರ್ಟಿಲಿಟಿ

Advertisement

Udayavani is now on Telegram. Click here to join our channel and stay updated with the latest news.

Next