Advertisement
ಕುಡಾಲುಮೇರ್ಕಳದ ಚನ್ನಿಕುಡಾಲು ಶ್ರೀನಾಗಬ್ರಹ್ಮ ಮಲರಾಯಿ ಮತ್ತು ಪರಿವಾರ ದೈವಗಳ ಮತ್ತು ಪರಿವಾರ ದೈವಗಳ ಮೂಲಸ್ಥಾನದಲ್ಲಿ ತುಳುನಾಡ ಇತಿಹಾಸದಲ್ಲಿ ಪ್ರಥಮವಾಗಿ ಸಹಸ್ರ ತಂಬಿಲ ಸೇವೆಯು ಜಾನಪದ ಸಿರಿ ಸಂಭ್ರಮದೊಂದಿಗೆ ಜರಗಿದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಮಾತಾಜಿಯವರು ಮಹಿಳೆ ಯರು ಮೌಲ್ಯಯುತವಾದ ಬದುಕು ನಿರ್ವಹಣೆಗೆ ಮತ್ತು ಧರ್ಮ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸ ಬೇಕೆಂದರು.
Related Articles
Advertisement
ಸಂಜೆ ಜಾನಪದ ಸಿರಿ ಸಂಭ್ರಮದ ಉದ್ಘಾಟನೆಯನ್ನು ಶಶಿಧರನ್ ಮಾಂಗಾಡ್ ನೆರವೇರಿಸಿರು. ಸವೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಯೋಗೀಶ್ ಭಟ್ ಚಿಂತನೆ,ರೆ| ಫಾ| ವಿಕ್ಟರ್ ಡಿ’ಸೋಜ, ಮೆಟ್ರೋ ಮಹಮ್ಮದ್ ಹಾಜಿ, ಎಸ್.ಆರ್. ಲಕ್ಷ್ಮಣ ಅವರು ಪಾರಿವಾಳ ಹಾರಿಸಿ ಶಾಂತಿಯ ಸಾಮರಸ್ಯ ಸಂದೇಶ ಸಾರಿದರು.
ಶಾಸಕ ಪಿ.ಬಿ. ಅಬ್ದುಲ್ ರಝಾಕ್, ಕರ್ನಾಟಕ ರಾಜ್ಯಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕೊಳತ್ತೂರು ದಾಮೋದರನ್, ವಿನೀಶ್ ತಳಿಪರಂಬ, ಪ್ರದೀಪ್ ಕುಮಾರ್ ಕಲ್ಕೂರ, ಕೇಶವ ಪ್ರಸಾದ್ ನಾಣಿತ್ತಿಲು, ನ್ಯಾಯವಾದಿ ಸುಬ್ಬಯ್ಯರೈ, ಮಂಜುನಾಥ ಉಡುಪ, ಬಿ.ಕೆ. ಖಾದರ್ ಹಾಜಿ, ಪುರುಷೋತ್ತಮ ಚೆಂಡ್ಲಾ, ಡಿ.ಎಂ. ಕುಲಾಲ್, ಕುಡಾಲು ಬಾಲಕೃಷ್ಣ ಶೆಟ್ಟಿ, ಡಾ| ಶ್ರೀನಿಧಿ ಸರಳಾಯ, ಚಂದ್ರಶೇಖರ ಸುವರ್ಣ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಚಲನ ಚಿತ್ರ ನಟರಾದ ಸತೀಶ್ ಬಂದಲೆ ಮತ್ತು ರಿಯಾ ಮೇಘನಾ ಭಾಗವಹಿಸಿದರು.ಸಮಾರಂಭದಲ್ಲಿ ವಿವಿಧ ದೈವಸ್ಥಾನಗಳ ಸೇವಕರನ್ನು ಮತ್ತು ದಾನಿಗಳನ್ನು ಸಮ್ಮಾನಿಸಲಾಯಿತು. ಪರಿವಾರ ದೈವಗಳಿಗೆ ಸಹಸ್ರ ತಂಬಿಲ ಸೇವೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸನ್ನಿಧಿ ರೈ ಶಾಂತಿಗೀತೆ ಹಾಡಿದರು. ಹರೀಶ್ ಸುಲಾಯ ಸ್ವಾಗತಿಸಿದರು. ಚೆನ್ನಪ್ಪ ಎರ್ಗಲ್ಲು ವಂದಿಸಿದರು. ಜಯ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಶಸ್ವಿ ಕಲಾನಿಕೇತನ ಮೊಂಟೆಪದವು ತಂಡದಿಂದ ವೀರಗಾಸೆ, ಕಂಸಾಳೆ, ನವಿಲು ನೃತ್ಯ, ಸುಗ್ಗಿ ಕುಣಿತ,ಬೊಳಿಕೆ ಜಾನಪದ ಕಲಾತಂಡ ಕನ್ಯಪ್ಪಾಡಿ ತಂಡದಿಂದ ಆದಿವಾಸಿ ನೃತ್ಯ, ಪುದ ನಲಿಕೆ, ಕಂಗೀಲು ನೃತ್ಯ, ಗೋಪಾಲಕೃಷ್ಣ ಕುಡಾಲು ಬಳಗದಿಂದ ಕನ್ಯಾಪು ಮತ್ತು ಮಾದಿರ, ತೇಜಸ್ವಿನಿ ಪೈವಳಿಕೆಯವರಿಂದ ಜಾದೂ ನೃತ್ಯ, ಸಾಕ್ಷಿ ವಾಂತಿಚ್ಚಾಲು ಬಳಗದಿಂದ ಭಕ್ತಿ ನೃತ್ಯ ವೈವಿಧ್ಯ, ತಲಕಳ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಕೊಳಂಬೆ ಮೇಳದಿಂದ “ತಿರುಮಲೆತ ತೀರ್ಥ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.