Advertisement

ಗರ್ಭಿಣಿಯರ ಸ್ವಸ್ಥ ಆರೋಗ್ಯಕ್ಕಾಗಿ ಯೋಗ

07:17 AM May 07, 2019 | mahesh |

ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟ ಗರ್ಭಧಾರಣೆ. ಈ ವೇಳೆ ತಾಯಿ ತನ್ನ ಆರೋಗ್ಯದ ಕಾಳಜಿ ಮಾತ್ರವಲ್ಲ ಹೊಟ್ಟೆಯಲ್ಲಿರುವ ಮಗುವಿನ ಕಾಳಜಿಗೂ ವಿಶೇಷ ಗಮನಹರಿಸಬೇಕಾಗುತ್ತದೆ. ಆರಂಭದ ದಿನದಿಂದಲೇ ಪೋಷಕಾಂಶಯುಕ್ತ ಆಹಾರದ ಜತೆಗೆ, ಒಂದಷ್ಟು ವ್ಯಾಯಾಮಗಳನ್ನು ತಾಯಿ ಅಳವಡಿಸಿಕೊಂಡರೆ ತಾಯಿ, ಮಗು ಆರೋಗ್ಯವಾಗಿರಲು ಸಾಧ್ಯವಿದೆ. ಗರ್ಭಿಣಿಯರು ಮಾಡಬಹುದಾದ ಸರಳ ಯೋಗಾಸನಗಳು ಇಲ್ಲಿವೆ.

Advertisement

ವಿಪರೀತ ಕಾರಣಿ
ನೇರವಾಗಿ ಮಲಗಿ ಕಾಲುಗಳನ್ನು ಗೋಡೆಯ ಸಹಾಯದಿಂದ ಎತ್ತುವುದು. ಇದರಿಂದ ಕಾಲುಗಳಲ್ಲಿನ ಊತ, ಉಬ್ಬಿರುವ ರಕ್ತನಾಳಗಳನ್ನು ಸಮಸ್ಥಿತಿಗೆ ತಂದು ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ.

ಮಾರ್ಜಾರಿಯಾಸನ
ಕೈ ಮತ್ತು ಕಾಲಿನ ಸಹಾಯದಿಂದ ಬೆಕ್ಕು ಕುಳಿತುಕೊಳ್ಳುವ ಭಂಗಿಯಲ್ಲಿ ಕುಳಿತು ಕತ್ತಿನ ಚಲನೆಯನ್ನು ನಿಧಾನವಾಗಿ ಮೇಲ್ಮುಖ ಮತ್ತು ಕೆಳಮುಖವಾಗಿ ಮಾಡಬೇಕು. ನಿಧಾನವಾಗಿ ಉಸಿರನ್ನು ಒಳಕ್ಕೆ ಮತ್ತು ಹೊರಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಬೇಕು. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಬೆನ್ನೆಲುಬುಗಳಿಗೆ ಶಕ್ತಿ ತುಂಬುತ್ತದೆ, ಜೀರ್ಣ ಕ್ರಿಯೆಯ ವೃದ್ಧಿಗೂ ಇದು ಸಹಕಾರಿ. ಜತೆಗೆ, ಮಣಿಕಟ್ಟು ಮತ್ತು ಭುಜಗಳು ಬಲಯುತವಾಗುತ್ತದೆ.

ನಾಡಿ ಶೋಧನ ಪ್ರಾಣಾಯಾಮ
ನೇರವಾಗಿ ಕುಳಿತು ಎಡಗೈಯನ್ನು ಮೆಲ್ಮುಖವಾಗಿ ಎಡಕಾಲಿನ ಮೇಲೆ ಹೆಬ್ಬೆರಳು ಮತ್ತು ತೋರುಬೆರಳನ್ನು ಒಂದಕ್ಕೊಂದು ಜೋಡಿಸಿಡಬೇಕು. ಕಣ್ಣುಗಳನ್ನು ಮುಚ್ಚಿ ಬಲಗೈಯ ಹೆಬ್ಬೆರಳಿನ ಸಹಾಯದಿಂದ ಬಲ ಮೂಗು, ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹಣೆಗೆ ತಾಕುವಂತೆ ಹಾಗೂ ಉಂಗುರ ಬೆರಳು ಕಿರುಬೆರಳುಗಳನ್ನು ಎಡ ಮೂಗಿನ ಮೇಲಿಡಬೇಕು. ಪ್ರಶಾಂತ ಮನಸ್ಥಿತಿಯಿಂದ ಎಡ ಮೂಗನ್ನು ಮುಚ್ಚಿ ಬಲ ಮೂಗಿನಿಂದ ಉಸಿರನ್ನು ನಿಧಾನಕ್ಕೆ ಎಳೆದುಕೊಂಡು ಕೊಂಚ ಹೊತ್ತಿನ ಬಳಿಕ ಎಡ ಮೂಗಿನ ಮೂಲಕ ಹೊರ ಬಿಡಬೇಕು. ಹಾಗೇ ಎಡ ಮೂಗಿನಿಂದ ಉಸಿರು ತೆಗೆದುಕೊಂಡು ಬಲ ಮೂಗಿನಿಂದ ಬಿಡಬೇಕು. ಇದು ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಮತ್ತು ದೈಹಿಕ ಆಘಾತ ಹಾಗೂ ತೀರದ ಒತ್ತಡ ಇವುಗಳಿಂದಾಗುವ ದುಷ್ಪರಿಣಾಮಗಳನ್ನು ತಡೆದು ದೇಹ ಮತ್ತು ಮನಸ್ಸಿಗೆ ಉಲ್ಲಾಸ ತುಂಬುತ್ತದೆ.

ಭುವನ ಬಾಬು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next