Advertisement
ವಿಪರೀತ ಕಾರಣಿನೇರವಾಗಿ ಮಲಗಿ ಕಾಲುಗಳನ್ನು ಗೋಡೆಯ ಸಹಾಯದಿಂದ ಎತ್ತುವುದು. ಹೀಗೆ ಮಾಡುವುದರಿಂದ ಕಾಲುಗಳಲ್ಲಿನ ಊತ, ಉಬ್ಬಿರುವ ರಕ್ತನಾಳಗಳನ್ನು ಸಮಸ್ಥಿತಿಗೆ ತಂದು ರಕ್ತ ಪರಿಚಲನೆ ಸರಾಗವಾಗುತ್ತದೆ.
ಕೈ ಮತ್ತು ಕಾಲಿನ ಸಹಾಯದಿಂದ ಬೆಕ್ಕು ಕುಳಿತುಕೊಳ್ಳುವ ಭಂಗಿಯಲ್ಲಿ ಕುಳಿತು ಕತ್ತಿನ ಚಲನೆಯನ್ನು ನಿಧಾನವಾಗಿ ಮೇಲ್ಮುಖ ಮತ್ತು ಕೆಳಮುಖವಾಗಿ ಮಾಡಬೇಕು. ನಿಧಾನವಾಗಿ ಉಸಿರನ್ನು ಒಳಕ್ಕೆ ಮತ್ತು ಹೊರಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಬೇಕು. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಬೆನ್ನೆಲುಬುಗಳಿಗೆ ಶಕ್ತಿ ತುಂಬುತ್ತದೆ, ಜೀರ್ಣ ಕ್ರಿಯೆಯ ವೃದ್ಧಿಗೂ ಇದು ಸಹಕಾರಿ. ಜತೆಗೆ, ಮಣಿಕಟ್ಟು ಮತ್ತು ಭುಜಗಳು ಬಲಯುತವಾಗುತ್ತದೆ. ಕೋನಾಸನ
ಕಾಲುಗಳನ್ನು ಕೊಂಚ ಅಗಲವಾಗಿರಿಸಿ ನೇರವಾಗಿ ನಿಂತುಕೊಳ್ಳಬೇಕು. ಎರಡೂ ಕೈಗಳನ್ನು ಒಂದಕ್ಕೊಂದು ಜೋಡಿಸಿ ತಲೆಯಿಂದ ಮೇಲಕ್ಕೆ ಚಾಚಬೇಕು. ಅನಂತರ ನಿಧಾನವಾಗಿ ಉಸಿರನ್ನು ಒಳ ಎಳೆದುಕೊಂಡು ಹೊರಕ್ಕೆ ಬಿಡುತ್ತಾ ಬಲಬದಿಗೆ, ಅನಂತರ ಎಡಬದಿಗೆ ನಿಧಾನವಾಗಿ ವಾಲಬೇಕು. ಇದರಿಂದ ದೇಹ ಸಡಿಲವಾಗಿ, ವಿಶ್ರಾಂತ ಸ್ಥಿತಿಯಲ್ಲಿರಿಸಲು ಸಹಾಯಕವಾಗುತ್ತದೆ. ಬೆನ್ನು ಮೂಳೆಗೂ ಹೆಚ್ಚು ಬಲತುಂಬುತ್ತದೆ. ಬೆನ್ನು ನೋವು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
Related Articles
ಮಹತ್ವದ್ದಾಗಿರುತ್ತದೆ. ಈ ವೇಳೆ ಯೋಗ, ವ್ಯಾಯಾಮದಲ್ಲಿ ಹೊಸ ಪ್ರಯೋಗ ಮಾಡಲು ಹೋಗಬಾರದು. ಅಲ್ಲದೇ ಯಾವುದೇ ಯೋಗ ಭಂಗಿಯನ್ನು ಮಾಡುವ ಮೊದಲು ಆರೋಗ್ಯ ಸ್ಥಿತಿಯನ್ನು ಗಮನ ದಲ್ಲಿರಿಸಿಕೊಂಡು ವೈದ್ಯರ, ತಜ್ಞರ ಸಲಹೆ ಪಡೆದು ಮಾಡುವುದು ಉತ್ತಮ.
Advertisement
ನಾಡಿ ಶೋಧನ ಪ್ರಾಣಾಯಾಮನೇರವಾಗಿ ಕುಳಿತು ಎಡಗೈಯನ್ನು ಮೆಲ್ಮುಖವಾಗಿ ಎಡಕಾಲಿನ ಮೇಲೆ ಹೆಬ್ಬೆರಳು ಮತ್ತು ತೋರುಬೆರಳನ್ನು ಒಂದಕ್ಕೊಂದು ಜೋಡಿಸಿಡಬೇಕು. ಕಣ್ಣುಗಳನ್ನು ಮುಚ್ಚಿ ಬಲಗೈಯ ಹೆಬ್ಬೆರಳಿನ ಸಹಾಯದಿಂದ ಬಲ ಮೂಗು, ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹಣೆಗೆ ತಾಕುವಂತೆ ಹಾಗೂ ಉಂಗುರ ಬೆರಳು ಕಿರುಬೆರಳುಗಳನ್ನು ಎಡ ಮೂಗಿನ ಮೇಲಿಡಬೇಕು. ಪ್ರಶಾಂತ ಮನಸ್ಥಿತಿಯಿಂದ ಎಡ ಮೂಗನ್ನು ಮುಚ್ಚಿ ಬಲ ಮೂಗಿನಿಂದ ಉಸಿರನ್ನು ನಿಧಾನಕ್ಕೆ ಎಳೆದುಕೊಂಡು ಕೊಂಚ ಹೊತ್ತಿನ ಬಳಿಕ ಎಡ ಮೂಗಿನ ಮೂಲಕ ಹೊರ ಬಿಡಬೇಕು. ಹಾಗೇ ಎಡ ಮೂಗಿನಿಂದ ಉಸಿರು ತೆಗೆದುಕೊಂಡು ಬಲ ಮೂಗಿನಿಂದ ಬಿಡಬೇಕು. ಇದು ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಮತ್ತು ದೈಹಿಕ ಆಘಾತ ಹಾಗೂ ತೀರದ ಒತ್ತಡ ಇವುಗಳಿಂದಾಗುವ ದುಷ್ಪರಿಣಾಮಗಳನ್ನು ತಡೆದು ದೇಹ ಮತ್ತು ಮನಸ್ಸಿಗೆ ಉಲ್ಲಾಸ ತುಂಬುತ್ತದೆ.