Advertisement

ನಿಮ್ಮ ಪ್ರಶ್ನೆಗೆ ಯೋಗ ತಜ್ಞರ ಉತ್ತರ

11:57 PM Feb 10, 2020 | Sriram |

ಯೋಗದ ಕುರಿತಾಗಿರುವ ಗೊಂದಲ ನಿವಾರಿಸಲು ಈ ಅಂಕಣ. ಪ್ರಶ್ನೆಗಳಿಗೆ ತಜ್ಞರ ಉತ್ತರಗಳ ಮೂಲಕ ತೆರೆ ಎಳೆ ಯುವ ಪ್ರಯತ್ನ ಇದು. ಓದುಗರು ಕೇಳಿದ ಪ್ರಶ್ನೆಗಳಿಗೆ ಈ ಬಾರಿ ಯೋಗ ತಜ್ಞ ಗೋಪಾಲಕೃಷ್ಣ ದೇಲಂಪಾಡಿ ಅವರು ಉತ್ತರಿಸಿದ್ದಾರೆ.

Advertisement

ಯೋಗ ಯಾವಾಗ ಮಾಡಬೇಕು? ಬೆಳಗ್ಗೆ ಮಾಡಿದರೆ ಉತ್ತಮವೇ?
ಯೋಗವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿಯೇ ಮಾಡಬೇಕು. ಸೂರ್ಯೋದಯ ಅಥವ ಪ್ರಾತಃ ಕಾಲದಲ್ಲೇ (ಮುಂಜಾನೆ 5ರಿಂದ 7) ಯೋಗ ಮಾಡಬೇಕು.ಇನ್ನು ಸಂಜೆಯೂ ಯೋಗ ಮಾಡಬಹುದು. ಆದರೆ ಬೆಳಗ್ಗೆ ಮಾಡಿದರೆ ಅದರ ಪ್ರಯೋಜನ ಹೆಚ್ಚು. ಸೂರ್ಯೋದಯದ ಸಂದರ್ಭ ಬರುವ ಸೂರ್ಯನ ಕಿರಣಗಳು ನಮ್ಮ ದೇಹದಲ್ಲಿ ನವ ಚೈತನ್ಯವನ್ನು ಮೂಡಿಸಲು ನೆರವಾಗುತ್ತವೆ.

50 ವರ್ಷ ದಾಟಿದವರು ಯಾವ ಯೋಗ ಮಾಡಬೇಕು?
ಯೋಗವನ್ನು ಎಲ್ಲರೂ ಮಾಡಬಹುದು. ಆದರೆ ಆರೋಗ್ಯ ಸಮಸ್ಯೆ ಇದ್ದವರು ಮಾತ್ರ ಮುಂದಕ್ಕೆ ಬಾಗಬಾ ರದು. ಉದಾ: ಬಿಪಿ, ಸೊಂಟ ನೋವು, ಹೃದಯ ಸಂಬಂಧಿ ಕಾಯಿಲೆ ಇದ್ದವರು ಮುಂದಕ್ಕೆ ಬಾಗಲೇಬಾರದು. ಸಾಮಾನ್ಯ ವಾಗಿ 50 ವರ್ಷ ಮೇಲ್ಪಟ್ಟವರು ತಾಡಾಸನ, ಅರ್ಧ ಚಕ್ರಾ ಸನ, ಅರ್ಧಕಟಿ ಚಕ್ರಾಸನ, ಶವಾಸನ, ತ್ರಿಕೋನಾ ಸನ, ವಜ್ರಾಸನ, ಪಶ್ಚಿಮೋತ್ತಾಸನ, ಶಶಾಂಕಾಸನವನ್ನು ಮಾಡ ಬಹುದು. ಕಡೆಗೆ ಕಡ್ಡಾಯವಾಗಿ ಶವಾಸನ ಮಾಡಲೇಬೇಕು.

ಮಕ್ಕಳಿಗೆ ಯಾವ ವಯಸ್ಸಿನಿಂದ ಯೋಗ ಮಾಡಿಸಬಹುದಾಗಿದೆ?
ಮಕ್ಕಳಿಗೆ ಸಾಮಾನ್ಯವಾಗಿ 8ರಿಂದ 12ನೇ ವರ್ಷದ ವರೆಗೆ ತೀರಾ ಸರಳ ಆಸನಗಳನ್ನು ಮಾಡಿಸಬಹುದಾಗಿದೆ. ಮಕ್ಕಳಿಗೆ ಯೋಗವನ್ನು ಅಟದ ರೂಪದಲ್ಲಿ ಹೇಳಿಕೊಡಬೇಕು. ಯೋಗಾಭ್ಯಾಸದ ಸಂದರ್ಭ ಮಕ್ಕಳಲ್ಲಿ ಯಾವುದೇ ಒತ್ತಡವನ್ನು ಹೇರಬಾರದು.

ಯೋಗ ಮಾಡಿ ಬಿಟ್ಟರೆ ಏನಾಗುತ್ತದೆ?
ಯಾವುದೇ ಕಾರಣಕ್ಕೆ ಯೋಗ ಮಾಡುತ್ತಿರುವವರು ಅದನ್ನು ನಿಲ್ಲಿಸಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯೋಗದಲ್ಲಿ ನಿರತವಾಗಿದ್ದ ದೇಹದಲ್ಲಿ ಸಕರಾತ್ಮಕ ಬದಲಾವಣೆ ಕಂಡುಬರುತ್ತವೆೆ. ಆದರೆ ಒಮ್ಮೆ ಯೋಗದಿಂದ ಹೊರಬಂದರೆ ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಬೇಡಿ. ಸುಲಭ ಆಸನಗಳನ್ನಾದರೂ ಮಾಡುತ್ತಾ ಮುಂದುವರಿಯಿರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next