ಗಿಯೂ ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಪಠ್ಯದ ಒಂದು ಭಾಗವಾಗಿ ಪರಿಗಣಿಸಲಾಗುತ್ತಿದೆ. ಪೇಟೆ-ಪಟ್ಟಣಗಳಲ್ಲಿ ಉದ್ಯೋಗ ಪಡೆದಿರುವ ಮಂದಿ, ಬೆಳಗೆದ್ದು, ಜಾಗಿಂಗ್, ಸ್ವಿಮ್ಮಿಂಗ್ ಅಂತ ಹೊರಡುವ ಯುವ ಜನತೆ ಯೋಗ ಶಿಕ್ಷಣದಿಂದಲೂ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಕೊಂಚ ಗಮನ ಹರಿಸಿದರೆ, ಇಲ್ಲಿಯೂ ಹಲವಾರು ಅವಕಾಶಗಳ ಬಾಗಿಲು ತೆರೆದಿರುತ್ತದೆ.
Advertisement
2015ನೇ ಸಾಲಿನಲ್ಲಿ ಮಧ್ಯಪ್ರದೇಶದಲ್ಲಿ ಎಲ್ಲ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ 35 ಸೀಟ್‌ಗಳು ಮಾತ್ರವೇ ಇದ್ದವು. ಯೋಗ ಕಲಿಯಲು ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾ ಗಿತ್ತು. ಅನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಇತ್ತೀಚೆಗೆ ಸುಮಾರು ಶೇ. 100 ರಷ್ಟು ಹೆಚ್ಚಾಗಿದೆ ಎನ್ನುವುದು ವಿಶೇಷ. ಹೆಚ್ಚಿನ ಕಾಲೇಜು, ಹೈಸ್ಕೂಲ್‌ಗಳಲ್ಲಿ ಯೋಗ ಕಲಿಸಲು ಅಧ್ಯಾಪಕರನ್ನು ಹುಡುಕುತ್ತಿದ್ದಾರೆ. ಇದರಿಂದ ಯೋಗ ಕೋರ್ಸ್ ಗಳ ಅಗತ್ಯ ಹೆಚ್ಚಾಗಿದೆ.
ಯೋಗದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಿಸಿಕೊಳ್ಳಲು ಈಗ ಹಲವಾರು ಶಿಕ್ಷಣ ಸಂಸ್ಥೆಗಳು ಇವೆ. ಅಕೌಂಟೆನ್ಸ್, ಬಿಜಿನೆಸ್ ಇನ್ನಿತರ ಕೆಲಸದಲ್ಲಿ ತೊಡಗಿಸಿಕೊಂಡವರು ದಿನದ ಒಂದು ಹೊತ್ತು ಅಥವಾ ದಿನದಲ್ಲಿ ಕನಿಷ್ಟ ಅಂದರೆ ಒಂದು ತಾಸು ಯೋಗ ಕಲಿತರೆ, ಕಾಯಿಲೆಗಳಿಂದ ದೂರವಿರಬಹುದು. ನಾವಿಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ನೋಡಬಹುದು. ಹರಿದ್ವಾರದಲ್ಲಿ ಯೋಗ ಸಂಬಂಧಿತ ಸ್ನಾತಕೋತ್ತರ ಕೋರ್ಸ್‌ಗಳಿವೆ. ಇಲ್ಲಿ 2009ನೇ ಇಸವಿಯಲ್ಲಿ ಕೇವಲ 40 ಸೀಟ್ ಗಳು ಮಾತ್ರವಿದ್ದವು. ಆದರೆ, ಈಗ 10 ಜನ ಒಂದು ಸೀಟಿಗಾಗಿ ಕಾಯುತ್ತಿದ್ದಾರೆ ಎಂದು ಇಲ್ಲಿನ ಉಪನ್ಯಾಸಕ ಗಿರೀಶ್ ಮಿಶ್ರ ತಿಳಿಸಿದ್ದಾರೆ. ಯೋಗ ತರಗತಿಗಳ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಅಲ್ಲಿನ ಉಪನ್ಯಾಸಕ ವೃಂದದವರು.ಯೋಗ ವಿಶ್ವಾದ್ಯಂತ ಗಮನ ಸೆಳೆಯುತ್ತಿದೆ.
Related Articles
ಇಂದಿನ ಯುವ ಪೀಳಿಗೆ ಯೋಗದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಮಾನಸಿಕ ನೆಮ್ಮದಿ ಜತೆಗೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಯೋಗ ಟ್ರೆçನರ್ಗಳ ಸಂಖ್ಯೆಯೂ ಹೆಚ್ಚಾಗಿದೆ. ತಿಂಗಳಿಗೆ 40 ಸಾವಿರ ರೂ.ಆದಾಯ ಗಳಿಸಬಹುದು. ಆರಾಮದಾಯಕ ಜೀವನವನ್ನು ಕೇವಲ ಒಂದು ಯೋಗದಿಂದ ನಿಮ್ಮದಾಗಿಸಿಕೊಳ್ಳಬಹುದು.
Advertisement
ಯೋಗ ಮಾರ್ಗದರ್ಶಕರುಯೋಗದ ಬಗ್ಗೆ ಕೊಂಚ ತಿಳಿದುಕೊಂಡಿರಾದರೆ ಪದವಿ ಶಿಕ್ಷಣದಲ್ಲಿ ಯೋಗ ತರಗತಿಗಳಿಗೆ ಸೇರಿಕೊಂಡ ಅನಂತರ, ಎಂಎಸ್ಸಿ ಇನ್ ಯೋಗ ಪೂರ್ತಿಗೊಳಿಸಿ, ಯೋಗ ಮಾರ್ಗದರ್ಶಕರಾಗಿ ವೃತ್ತಿ ಕ್ಷೇತ್ರಕ್ಕೆ ಕಾಲಿಡಬಹುದು. ಬೆಂಗಳೂರು, ಮೈಸೂರು, ಕರಾವಳಿಯಾದ್ಯಂತ ಯೋಗ ಕೋರ್ಸ್‌ಗಳು ಇವೆ. ಆದಾಯವನ್ನು ಗಳಿಸಲು ಯೋಗವೂ ಒಂದು ದಾರಿಯಾಗುತ್ತದೆ. ಫಿಟ್ನೆಸ್ ತರಬೇತುದಾರರಾಗಿ
ಆಧುನಿಕ ಯುಗದಲ್ಲಿ ಆಫೀಸು, ಕೆಲಸ ಕಾರ್ಯ ಅಂತ ಮನುಷ್ಯ ನೆಮ್ಮದಿಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಫಿಟ್ನೆಸ್ ಬಗ್ಗೆ ಒಂದಿಷ್ಟು ಕಾಳಜಿಯ ಅಗತ್ಯ ಇರುತ್ತದೆ. ರಜಾ ದಿನಗಳಲ್ಲಿ ಜಿಮ್‌ಗೆ ಹೋಗಿ ದೇಹ ದಂಡಿಸಲು ಸಮಯನೂ ಸಿಗುವುದಿಲ್ಲ. ಆದ್ದರಿಂದ ಬಿಡುವಿನ ಸಮಯದಲ್ಲಿ μಟೆ°ಸ್ ಕೇಂದ್ರಗಳಿಗೆ ಹೋಗಿ ಕಲಿತು, ಹೊಸದಾದ ಫಿಟ್ನೆಸ್ ಕೇಂದ್ರವನ್ನು ಶುರುಮಾಡಿ, ಆದಾಯ ಗಳಿಸಬಹುದು. ಪಬ್ಲಿಕ್ ಹೆಲ್ತ್ ಸೆಂಟರ್, ಕಾಲೇಜು, ಆಸ್ಪತ್ರೆಗಳಲ್ಲಿಯೂ ಸೇರಿಕೊಂಡು ವೃತ್ತಿ ನಿರ್ವಹಿಸಬಹುದು ವಿವಿಧ ಕೋರ್ಸ್
ಸ್ನಾತಕೋತ್ತರ ಪದವಿಯಲ್ಲಿ ಯೋಗಿಕ್ ಸೈನ್ಸ್, ಡಿಪ್ಲೊಮಾ ಇನ್ ಯೋಗ ಮತ್ತು ಮೆಡಿಟೇಷನ್, ನ್ಯಾಚುರೋಪತಿಗೆ ಸಂಬಂಧಿಸಿದ ಥೆರಪಿಗಳನ್ನು ಅಧ್ಯಯನ ಮಾಡಬಹುದು. ದಕ್ಷಿಣ ಕನ್ನಡದ ಉಜಿರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾರೆ. ಉಡುಪಿ ಹತ್ತಿರದ ಮಣಿಪಾಲದಲ್ಲಿಯೂ ಪ್ರಕೃತಿ ಚಿಕಿತ್ಸಾ ಕೇಂದ್ರವಿದೆ. ಶ್ರುತಿ ನೀರಾಯ