Advertisement

ರಾಜ್ಯದಲ್ಲಿ ಮುಂದಿನ ವರ್ಷದಿಂದ ಪಠ್ಯದಲ್ಲಿ ಯೋಗ ಶಿಕ್ಷಣ: ಸಿಎಂ ಬಸವರಾಜ ಬೊಮ್ಮಾಯಿ

12:38 AM May 30, 2022 | Team Udayavani |

ಆನೇಕಲ್‌: ರಾಜ್ಯದಲ್ಲಿ ಮುಂದಿನ ವರ್ಷದಿಂದ ಪಠ್ಯದಲ್ಲಿ ಯೋಗ ಶಿಕ್ಷಣವನ್ನು ಅಳವಡಿಸಿ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

Advertisement

ಜಾಗತಿಕ ಯೋಗ ಕೇಂದ್ರವಾಗಿರುವ ಜಿಗಣಿಯ ಎಸ್‌. ವ್ಯಾಸ ವಿವಿ ಸಿದ್ಧಪಡಿಸಿರುವ ಆರೋಗ್ಯ ತಂತ್ರ ಜ್ಞಾನ ಕುರಿತ ನೂತನ ಆ್ಯಪ್‌ ಅನ್ನು ರಾಜ್ಯಕ್ಕೆ ಸಮರ್ಪಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಯೋಗ ಕುರಿತ ಪಾಠವನ್ನು ಅಳವಡಿಸಿ, ವಿದ್ಯಾರ್ಥಿಗಳಿಗೆ ಹೇಳಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿ ಯೋಗ ತರಗತಿ ಮೂಲಕ ಶಿಕ್ಷಣದಲ್ಲಿ ಕ್ರಾಂತಿ ತಂದು ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಎಸ್‌. ವ್ಯಾಸ ವಿವಿ ವತಿಯಿಂದ ಇತ್ತೀಚೆಗೆ ರೋಗಮುಕ್ತ ಭಾರತ ಪರಿಕಲ್ಪನೆಯಡಿ ಆರೋಗ್ಯ ಸಮಸ್ಯೆಗಳ ನಿವಾರಣೆಗೆ 90 ದಿನಗಳ ಸ್ವಸ್ಥ ಶಕ್ತಿ ಕಾರ್ಯಕ್ರಮಕ್ಕೆ ರಾಜ್ಯಪಾಲರು ಚಾಲನೆ ನೀಡಿದ್ದರು. ಆಯು ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆ ಯಂತಹ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದು, ಎಸ್‌. ವ್ಯಾಸ ವಿವಿ ವೈದ್ಯರು 750ಕ್ಕೂ ಹೆಚ್ಚು ಸಂಶೋಧನ ಗ್ರಂಥಗಳ ಆಧಾರದ ಮೇಲೆ ಇದನ್ನು ಸಿದ್ಧಪಡಿಸಿದ್ದಾರೆ ಎಂದರು. ಶಾಸಕ ಎಂ. ಕೃಷ್ಣಪ್ಪ, ಎಸ್‌. ವ್ಯಾಸ ವಿವಿ ಕುಲಪತಿ ಡಾ| ಎಚ್‌.ಆರ್‌.ನಾಗೇಂದ್ರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next