ಮೈಸೂರು: ಕೋವಿಡ್-19 ಹಿನ್ನೆಲೆ ಜೂ.21ರಂದು ಯೋಗ ದಿನವನ್ನು ಮನೆಯಲ್ಲಿಯೇ ಆಚರಿಸ ಬೇಕು. ಒಂದು ವೇಳೆ ಉದ್ಯಾನಗಳಲ್ಲಿ ಯೋಗ ಮಾಡಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಸಾಮೂಹಿಕ ಯೋಗ ರದ್ದು ಮಾಡಿ, ಅವರವರ ಮನೆ ಟೆರೇಸ್ ಮೇಲೆ, ಖಾಲಿ ಜಾಗದಲ್ಲಿ ಯೋಗ ಮಾಡಲು ಸೂಚಿಸಲಾಗಿದೆ. ಚಿಕ್ಕ ಮಕ್ಕಳು, ಗರ್ಭಿಣಿ ಯರು, ವಯಸ್ಸಾದವರು ಮನೆಯೊಳಗೇ ಇದ್ದರೆ ಉತ್ತಮ ಎಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲಕ್ಷ ಮಂದಿ ಭಾಗಿ: ನಗರದ ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ 1 ಲಕ್ಷ ಮಂದಿ ಯೋಗ ದಿನಾಚರಣೆಯಲ್ಲಿ ಭಾಗವಹಿ ಸುವ ನಿರೀಕ್ಷೆ ಇದೆ. ಯೋಗ ಮಾಡಿದ ಬಳಿಕ ಫೋಟೋವನ್ನು yoga.ayush.gov.in-yoga ವೆಬ್‌ಸೈಟ್‌ಗೆ ಅಪ್ಲೋಡ್ ಮಾಡ ಬೇಕು. ಹಾಗೆ ಮಾಡಿದವರಿಗೆ ಸರ್ಟಿಫಿಕೇಟ್ ನೀಡಲಾಗುವುದು ಎಂದು ಹೇಳಿದರು.
ಡ್ರೋನ್ ಬಳಕೆ: ನಗರಾದ್ಯಂತ ಟೆರೇಸ್ ಮೇಲೆ, ಖಾಲಿ ಜಾಗಗಳಲ್ಲಿ ಯೋಗ ಮಾಡುವುದನ್ನು ಸೆರೆಹಿಡಿಯಲು ಹೆಲಿಕಾಪ್ಟರ್ ಬದಲು ಡ್ರೋನ್ ಬಳಸಿ ಯೋಗ ಮಾಡುವ ಚಿತ್ರಣ ಸೆರೆ ಹಿಡಿಯ ಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಸೀತಾಲಕ್ಷ್ಮೀ, ಜಿಎಸ್‌ಎಸ್ ಯೋಗಾ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಆಷಾಢದಲ್ಲಿ ಬೆಟ್ಟಕ್ಕೂ ನಿರ್ಬಂಧ: ಆಷಾಢ ಶುಕ್ರವಾರಗಳಲ್ಲಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಆಷಾಢ ಮಾಸದಲ್ಲಿ ದೇವಸ್ಥಾನಗಳಲ್ಲಿ ಹೆಚ್ಚು ಜನ ಸೇರುವುದು, ಪ್ರಸಾದ ಹಂಚು ವುದು ನಿಷೇಧಿಸಲಾಗಿದೆ. ಭಕ್ತರು ಅಂತರ ಕಾಪಾಡಿಕೊಂಡು ದೇವರ ದರ್ಶನ ಮಾಡಿಕೊಳ್ಳಬೇಕು. ನಿಯ ಮ ಉಲ್ಲಂ ಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡೀಸಿ ಅಭಿರಾಂ ಶಂಕರ್ ಎಚ್ಚರಿಸಿದರು.