ಮುಂಜಾನೆ ಆಯೋಜಿಸಲಾಗುವ ರಾಷ್ಟ್ರಮಟ್ಟದ ಯೋಗ ಶಿಬಿರಕ್ಕಾಗಿ ಐದು ನಗರಗಳನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು, ಮೈಸೂರು ಸೇರಿದೆ. ಉಳಿದಂತೆ, ದಿಲ್ಲಿ, ಶಿಮ್ಲಾ, ಅಹ್ಮದಾಬಾದ್ ಮತ್ತು ರಾಂಚಿಯಲ್ಲಿ ಆಯೋಜಿಸುವ ಕುರಿತು ಪಿಎಂಒಗೆ ಆಯುಷ್ ಸಚಿವಾಲಯವು ಶಿಫಾರಸು ಮಾಡಿದೆ. ಈ 5 ನಗರಗಳ ಪೈಕಿ ಒಂದರಲ್ಲಿ ಜೂ. 21ರಂದು ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಕಾರ್ಯಾಲಯವೇ ಈ ಪೈಕಿ ಒಂದು ನಗರವನ್ನು ಅಂತಿಮಗೊಳಿಸಲಿದೆ.
ಮೋದಿ- 2 ಸರಕಾರ ರಚನೆಯಾದ ಅನಂತರದ ಮೊದಲ ರಾಷ್ಟ್ರೀಯ ಕಾರ್ಯಕ್ರಮ ಇದು. ಕಳೆದ ವರ್ಷವೂ 5 ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿತ್ತು. ಆದರೆ ಅಂತಿಮವಾಗಿ ಕಾರ್ಯಕ್ರಮ ಡೆಹ್ರಾಡೂನ್‌ನಲ್ಲಿ ನಡೆದಿತ್ತು.
Advertisement