ಮುಂಬಯಿ: ಬ್ರಹ್ಮಕುಮಾರೀಸ್ ವತಿಯಿಂದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಜೂ. 23ರಂದು ಬೊರಿವಲಿ ಪಶ್ಚಿಮದ ಶಿಂಪೋಲಿಯ ಅಂತಾರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ಸ್ ಖ್ಯಾತಿಯ ಕನ್ನಡಿಗ ಚೀತಾ ಯಜ್ಞೆàಶ್ ಶೆಟ್ಟಿ ಅವರ ಯೋಗಶಾಲೆಯಲ್ಲಿ ನಡೆಯಿತು.
ಬ್ರಹ್ಮಕುಮಾರೀಸ್ ಸಂಸ್ಥೆಯ ಸಿಸ್ಟರ್ ಬಿಂಧು ಮತ್ತು ಭಾರತ ಮಹಿಳಾ ಕ್ರಿಕೆಟ್‌ಪಟು ಶ್ರೇಯಾ, ಪದ್ಮಶ್ರೀ ಪುರಸ್ಕೃತ ಡೈನಾ ಇಡುಲ್‌ಜೀ, ಚಲನಚಿತ್ರ ನಿರ್ದೇಶಕ ಅಭಿನವ್ ಕಶ್ಯಾಪ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಲ್ಮಾನ್ ಖಾನ್, ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಗಣ್ಯರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮಾರ್ಷಲ್ ಆರ್ಟ್ಸ್ ಖ್ಯಾತಿಯ ಚೀತಾ ಯಜ್ಞೆàಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಚಾಲನೆ ನೀಡಿ ಶುಭಹಾರೈಸಿದರು. ಪ್ರಸನ್ನ ಸಿ. ಸಂತ್ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಚೀತಾ ಯಜ್ಞೆàಶ್ ಶೆಟ್ಟಿ ಅವರು ಅತಿಥಿಗಳನ್ನು ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾರ್ಷಲ್ ಆರ್ಟ್ಸ್ ಹಾಲ್ ಆಫ್ ಫೇಮ್ ಅವಾರ್ಡ್ ಪುರಸ್ಕೃತ ಚೀತಾ ಯಜ್ಞೆàಶ್ ಶೆಟ್ಟಿ ಅವರು ಫಿಲ್ಮ್ ಇಂಡಸ್ಟ್ರೀಯಲ್ಲಿ ತಮ್ಮ ಮಾರ್ಷಲ್ ಆರ್ಟ್ಸ್ ತರಬೇತಿಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಯೋಗ ಮತ್ತು ಮಾರ್ಷಲ್ ಆರ್ಟ್ಸ್ಗೆ ಇರುವ ಸಂಬಂಧ, ಇದರ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಅಲ್ಲದೆ ಯೋಗ ಮತ್ತು ಧ್ಯಾನದ ಹಲವಾರು ಬಗೆಗಳನ್ನು ಕಲಿಸಿಕೊಟ್ಟರು. ಧ್ಯಾನ, ಯೋಗದಿಂದ ಆರೋಗ್ಯದ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ದಿನಂಪ್ರತಿ ಯೋಗ, ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿನಂತಿಸಿದರು.
ಬ್ರಹ್ಮಕುಮಾರೀಸ್ ಸಂಸ್ಥೆಯ ಸಿಸ್ಟರ್ ಬಿಂಧು ಅವರು ಚೀತಾ ಯಜ್ಞೆàಶ್ ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ ವಂದಿಸಿದರು. ಪದ್ಮಶ್ರೀ ಪುರಸ್ಕೃತರಾದ ಡೈನಾ ಇದುಲ್‌ಜೀ ಮಾರ್ಷಲ್ ಆರ್ಟ್ಸ್ ಕ್ಷೇತ್ರ ದಲ್ಲಿ ಚೀತಾ ಯಜ್ಞೆàಶ್ ಶೆಟ್ಟಿ ಅವರು ಮಾಡಿರುವ ಸಾಧನೆಗಳನ್ನು ವಿವರಿಸಿ ಅವರಿಗೆ ಶುಭಹಾರೈಸಿ ದರು. ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಸೇರಿದಂತೆ ವಿವಿಧ ಭಾಷಿಗರು, ಹಿರಿಯರು, ಕಿರಿ ಯರು ನೂರಾರು ಮಂದಿ ಪಾಲ್ಗೊಂಡು ಯೋಗಭ್ಯಾಸ ಮಾ ಡಿದರು.