Advertisement

ಕುಷ್ಟಗಿ: ನರೇಗಾ ಕಾಮಗಾರಿ ಸ್ಥಳದಲ್ಲಿ ಯೋಗ ದಿನಾಚರಣೆ

11:56 AM Jun 21, 2022 | Team Udayavani |

ಕುಷ್ಟಗಿ: 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕುಷ್ಟಗಿ ತಾಲೂಕಿನ ಮಾಲಗಿತ್ತಿ, ಕಾಟಾಪುರ, ಮುದೆನೂರು, ಹಿರೇಬನ್ನಿಗೋಳ, ಹೂಲಗೇರಾ, ಹಾಬಲಕಟ್ಟಿ, ಮಣೆಧಾಳ  ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಮಹಾತ್ಮಾ ಗಾಂಧಿ ನರೇಗಾ ಕಾಮಗಾರಿಯ ಕೆರೆ ಹೂಳೆತ್ತುವ, ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಯೋಗ ಅಭ್ಯಾಸ ಮಾಡಿದರು.

Advertisement

ಗ್ರಾಮ ಪಂಚಾಯತಿ ಬೇರ್ ಪೂಟ್ ಟೆಕ್ನಿಷಿಯನ್ ಗಳಾದ ಮಹಾಂತೇಶ್, ಯಮನೂರಪ್ಪ, ಬಸವರಾಜ, ಷಣ್ಮುಖಪ್ಪ, ಬಸಟ್ಟೆಪ್ಪ‌ ರಾಠೋಡ ಮತ್ತು ಗ್ರಾಮ ಕಾಯಕ ಮಿತ್ರರಾದ ರೇಣುಕಾ ಚಳಗೇರಿ, ಹಂಪಮ್ಮ ನಿಲೋಗಲ್ಲ ನೇತೃತ್ವದಲ್ಲಿ ಯೋಗ ಅಭ್ಯಾಸ ಜರುಗಿತು. ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.

ಯೋಗ ಅಭ್ಯಾಸವನ್ನು ಬೇರ್ ಪೂಟ್ ಟೆಕ್ನಿಷಿಯನ್ ಗಳು ಹಾಗು ಗ್ರಾಮ ಕಾಯಕ ಮಿತ್ರರು ನೆರವೆರಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರು, ಕಾಮಗಾರಿ ನಡೆಯುವ ಸ್ಥಳದಲ್ಲಿ ಯೋಗ ದಿನದ ಮಹತ್ವದ ಹಿನ್ನೆಲೆಯಲ್ಲಿ ಯೋಗ ಅಭ್ಯಾಸ ಮಾಡಿರುವುದು ಗಮನಾರ್ಹ ಎನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next