Advertisement

ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನಲ್ಲಿ ಯೋಗ ದಿನಾಚರಣೆ

06:35 AM Jun 23, 2018 | Team Udayavani |

ಬೆಂಗಳೂರು: ಮೈಸೂರಿನ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಂಸ್ಥೆಯ ಎಲ್ಲ ಉದ್ಯೋಗಿಗಳಿಗೆ ಯೋಗಾಭ್ಯಾಸ ಆಯೋಜಿಸಲಾಗಿತ್ತು.

Advertisement

ಜಿಆರ್‌ಎಸ್‌ನ ಉದ್ಯೋಗಿಯೂ ಆದ ಯೋಗ ಶಿಕ್ಷಕ ಶಂಕರ್‌ ಬಾಬು ನೇತೃತ್ವದಲ್ಲಿ ಸಂಸ್ಥೆಯ ಉದ್ಯೋಗಿಗಳು ಯೋಗದಲ್ಲಿ ತೊಡಗಿಕೊಂಡಿದ್ದರು. ಉದ್ಯೋಗಿಗಳ ಆರೋಗ್ಯ ಸುಧಾರಣೆ ಹಾಗೂ ಯೋಗದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸಂಸ್ಥೆಯ ಆರ್ಥಿಕ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಕಿಣಿ ಮಾತನಾಡಿ, ಜಿಆರ್‌ಎಸ್‌ ಸದಾ ಗ್ರಾಹಕರ ಸಂತೋಷ ಹಾಗೂ ಕಾಳಜಿಯನ್ನು ಬಯಸುತ್ತದೆ. ಯೋಗ ನಮ್ಮ ಸಂಸ್ಕೃತಿಯಾಗಿರುವುದರಿಂದ ನಾವು ಯೋಗ ಮತ್ತು ಧ್ಯಾನವನ್ನು ನಮ್ಮ ತರಬೇತಿ ಮತ್ತು ಅಭಿವೃದ್ಧಿಯ ಅವಿಭಾಜ್ಯಅಂಗವಾಗಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದರು. ಈ ವೇಳೆ ಸಂಸ್ಥೆಯ ನಿರ್ದೇಶಕ ದಯಾನಂದ ಕುಡ್ವ, ವಹಿವಾಟು ಮುಖ್ಯಸ್ಥ ಅಶ್ವಿ‌ನ್‌ ಡಾಂಗೆ ಹಾಗೂ ಪ್ರಧಾನ
ವ್ಯವಸ್ಥಾಪಕ ಕೆ.ಟಿ.ಶ್ರೀನಿವಾಸನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next