Advertisement

ಪ್ರತಿದಿನ ಯೋಗ, ಧ್ಯಾನ ಮಾಡಿ: ಕೋವಿಡ್ ನಿಂದ ಚೇತರಿಸಿಕೊಂಡವರಿಗೆ ಮಾರ್ಗಸೂಚಿ ಬಿಡುಗಡೆ !

07:31 PM Sep 13, 2020 | Mithun PG |

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 47 ಲಕ್ಷಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ಪ್ರತಿದಿನ 70 ಸಾವಿರಕ್ಕಿಂತ ಹೆಚ್ಚು ಜನರು ಸೊಂಕಿನಿಂದ ಗುಣಮುಖರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಂದ ಗುಣಮುಖರಾದವರಿಗೆಂದು ಆರೋಗ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Advertisement

ಕೋವಿಡ್ ನಿಂದ ಚೇತರಿಸಿಕೊಂಡವರ  ಯೋಗಕ್ಷೇಮಕ್ಕಾಗಿ ಸಮಗ್ರ ಆರೋಗ್ಯ ವಿಧಾನದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಾತ್ರವಲ್ಲದೆ ಪ್ರತಿದಿನ ಯೋಗಾಸನ, ಪ್ರಾಣಾಯಾಮ, ಧ್ಯಾನ, ಉಸಿರಾಟದ ವ್ಯಾಯಾಮ, ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮುಂತಾದ ಕ್ರಮಗಳನ್ನು ಅನುಸರಸುವಂತೆ ತನ್ನ ಮಾರ್ಗ ಸೂಚಿಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 78,399 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ಒಟ್ಟಾರೆ ಚೇತರಿಸಿಕೊಂಡವರ ಪ್ರಮಾಣ 37,02,595ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ 77.88% ರಷ್ಟಿದೆ.

ಆರೊಗ್ಯ ಅಧಿಕಾರಿಗಳ ಪ್ರಕಾರ ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಜನರು ಹೆಚ್ಚು ಸುರಕ್ಷಿತಾ ವಿಧಾನ ಅಳವಿಡಿಕೊಳ್ಳಬೇಕು. ಪೂರ್ಣ ಪ್ರಮಾಣದ ಚೇತರಿಕೆ ಈ ದಿನಗಳಲ್ಲಿ ಸಾಕಷ್ಟು ಸವಾಲಾಗಲಿದೆ ಎಂದು ತಿಳಿಸಿದ್ದಾರೆ.

Advertisement

ಚೇತರಿಸಿಕೊಂಡ ರೋಗಿಗಳಿಗೆ ಸಾಮಾನ್ಯವಾಗಿ ಆಯಾಸ ಹೆಚ್ಚಾಗಿ ಕಂಡುಬರುತ್ತಿದೆ.  ಸಾಮಾನ್ಯ ಜೀವನಕ್ಕೆ ಮರಳಲು ಹಲವರಿಗೆ ಇಂದಿಗೂ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸರ್ಕಾರ ತಿಳಿಸಿದೆ.

ಚೇತರಿಸಿಕೊಂಡ ರೋಗಿಗಳು ಕೂಡ ನಂತರದ ದಿನಗಳಲ್ಲಿ ತಲೆನೋವು, ಸುಸ್ತು, ದೇಹದಲ್ಲಿ ಸಣ್ಣ ಮಟ್ಟಿಗಿನ ನೋವು, ಕಡಿಮೆ ಪ್ರಮಾಣದ ಜ್ವರ ಎಂದು ಬರುವುದನ್ನು ಗಮನಿಸಿದ್ದೇವೆ. ಈ ಕಾರಣದಿಂದ ಕೆಲವೊಂದು ಆರೋಗ್ಯ ಕ್ರಮಗಳನ್ನು ತಿಳಿಸಲಾಗಿದೆ ಎಂದು ಸಫ್ದರ್ ಜಂಗ್ ಹಾಸ್ಪತ್ರೆಯ ವೈದ್ಯ ಡಾ. ಅನೂಪ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next