Advertisement

ಒತ್ತಡದಿಂದ ಪಾರಾಗಲು ಯೋಗ ಸಹಕಾರಿ

06:41 AM Jul 06, 2019 | Team Udayavani |

ದೊಡ್ಡಬಳ್ಳಾಪುರ: ಪೊಲೀಸ್‌ ಇಲಾಖೆ ಸಿಬ್ಬಂದಿ ಸದಾ ಒತ್ತಡದಲ್ಲಿ ಕೆಲಸ ಮಾಡುವಾಗ ಮಾನಸಿಕವಾಗಿ ಒಂದಿಷ್ಟು ವಿಚಲಿತ ರಾಗುವುದು ಸಾಮಾನ್ಯ. ಆದರೆ ಮಾನಸಿಕ ಒತ್ತಡದಿಂದ ಹೊರಬರುವ ಸುಲಭ ವಿಧಾನ ಯೋಗದ ಅಭ್ಯಾಸ ಮಾಡುವುದು ಎಂದು ಮಾನಸಿಕ ರೋಗ ತಜ್ಞೆ ಡಾ.ಸಹೇನಬೇಗಂ ಹೇಳಿದರು.

Advertisement

ನಗರದ ಕನ್ನಡ ಜಾಗೃತ ಭವನದಲ್ಲಿ ಪೊಲೀಸ್‌ ಸಿಬ್ಬಂದಿಗಾಗಿ ನಡೆದ ಮಾನಸಿಕ ಒತ್ತಡ ನಿವಾರಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಪೊಲೀಸ್‌ ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ. ಆದರೆ ಸದಾ ಕೆಲಸದ ಒತ್ತಡದಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಾಗುತ್ತಿದೆ ಎಂದರು.

ಕೌಟುಂಬಿಕ ಸಮಸ್ಯೆಗಳು ಹಾಗೂ ಬಿಡುವಿಲ್ಲದ ಕೆಲಸಗಳು ನಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಇದರಿಂದಾಗಿ ಕೆಲಸದಲ್ಲಿ ನಿರಾಸಕ್ತಿ, ಕ್ರಿಯಾಶೀಲತೆ ಕಳೆದುಕೊಳ್ಳುವುದು, ಕುಟುಂಬದಲ್ಲಿ ಸದಾ ಕಿರಿಕಿರಿ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಹೊರಬಂದು ನೆಮ್ಮದಿಯಾಗಿದ್ದರೆ ಮಾತ್ರ ದೈಹಿಕವಾಗಿಯೂ ಆರೋಗ್ಯವಾಗಿರಲು ಸಾಧ್ಯ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಪೊಲೀಸ್‌ ಸಿಬ್ಬಂದಿ ಮಾನಸಿಕ ಕಿನ್ನತೆಗಳಿಂದ ಹೊರಬರುವ ಸರಳ ವ್ಯಾಯಾಮ, ಯೋಗಗಳನ್ನು ತಿಳಿಸಲಾಗುತ್ತಿದೆ. ಸಿಬ್ಬಂದಿ ಇವುಗಳನ್ನು ನಿಯಮಿತವಾಗಿ ಪಾಲಿಸಿಕೊಂಡು ಬಂದರೆ ವೃತ್ತಿ ಜೀವನದಲ್ಲಷ್ಟೇ ಅಲ್ಲದೇ ತಮ್ಮ ಕೌಟುಂಬಿಕ ಬದುಕಿನಲ್ಲೂ ನೆಮ್ಮದಿ ಕಂಡುಕೊಳ್ಳಬಹುದಾಗಿದೆ. ನಿವೃತ್ತಿ ನಂತರವೂ ಸಹ ಸುಖಕರ ಬದುಕು ನಡೆಸಲು ಸಾಧ್ಯ ಎಂದರು.

Advertisement

ಸರ್ಕಲ್‌ ಇನ್ಸ್‌ಪೆಕ್ಟರ್‌ ಜಿ.ಸಿದ್ದರಾಜು, ನಗರ ಪೊಲೀಸ್‌ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಕೆ.ವೆಂಕಟೇಶ್‌, ಅಪರಾಧ ವಿಭಾಗದ ಸಬ್‌ ಇನ್ಸ್‌ಪೆಕ್ಟರ್‌ ರಂಗನಾಥ್‌, ರಾಜಾನುಕುಂಟೆ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಪ್ರದೀಪ್‌ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next