Advertisement

ಯೋಗ ಭವನ ಲೋಕಾರ್ಪಣೆ

12:12 PM Mar 08, 2018 | Team Udayavani |

ಕೆಂಗೇರಿ: ನಗರದ ಒತ್ತಡದ ಜೀವನದ ಪರಿಣಾಮ ಮಹಿಳೆಯರು, ಮಕ್ಕಳು ಹಾಗೂ ಎಲ್ಲ ವಯೋಮಾನದವರಿಗೆ ಅನಾರೋಗ್ಯ ಸಾಮಾನ್ಯವಾಗಿದ್ದು, ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಸಲಹೆ ನೀಡಿದರು.

Advertisement

ಉಲ್ಲಾಳು ವಾರ್ಡ್‌ನ ದೊಡ್ಡಗೊಲ್ಲರಹಟ್ಟಿಯಲ್ಲಿ ನಿರ್ಮಿಸಿರುವ ಯೋಗ ಭವನವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜತೆಗೆ ಪ್ರತಿ ದಿನ ವ್ಯಾಯಾಮ ಮಾಡುವ ಮೂಲಕ ದೇಹ ಹಾಗೂ ಮನಸನ್ನು ಸದೃಢವಾಗಿಸಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ವಾರ್ಡ್‌ ವ್ಯಾಪ್ತಿಯ ಉದ್ಯಾನಗಳಲ್ಲಿ ನಡಿಗೆ ಪಥ, ಬಯಲು ಜಿಮ್‌ ಕೇಂದ್ರಗಳನ್ನು ನಿರ್ಮಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು. 

ಕೆಪಿಸಿಸಿ ಸದಸ್ಯೆ ಕಲ್ಪನಾ ಎಲಿಗಾರ್‌, ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ವೆಂಕಟೇಶ್‌, ಹೇರೋಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ತಿಮ್ಮಯ್ಯ, ಉಲ್ಲಾಳು ವಾರ್ಡ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ್‌ ಗೌಡ, ಟೊಯೋಟಾ ಪರಮೇಶ್‌, ಗೌರೀಶ್‌, ಪ್ರಕಾಶ್‌, ಭಾಗ್ಯರಾಜ್‌ ಸೊನ್ನದ್‌, ಶೇಖರ್‌ ಮೇಸಿ, ಉತ್ತರ ಕರ್ನಾಟಕ ಚಾರಿಟೆಬಲ್‌ ಟ್ರಸ್ಟ್‌ ಪಧಾದಿಕಾರಿಗಳು, ರಾಣಿ ಚೆನ್ನಮ್ಮ ಮಹಿಳಾ ಟ್ರಸ್ಟ್‌ ಪಧಾದಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next