Advertisement
ಪರ್ವತಾಸನಪದ್ಮಾಸನದ ಮಾದರಿಯಲ್ಲಿ ಎರಡೂ ಕೈಯನ್ನು ಮೇಲೆತ್ತಿ ಹಸ್ತಗಳನ್ನು ಜೋಡಿಸಬೇಕು. ಇದರಿಂದ ಕಾಲುಗಳಿಗೆ ರಕ್ತಪರಿಚಲನೆ ಸರಾಗವಾಗಿ ಎಲುಬುಗಳು ಗಟ್ಟಿಯಾಗುತ್ತವೆ. ಈ ವೇಳೆ ಬೆನ್ನು ನೇರವಾಗುವುದರಿಂದ ಹೊಟ್ಟೆಯ ಬೊಜ್ಜು ಕರಗುವುದು.
ನೆರವಾಗಿ ನಿಂತು ಎರಡು ಕೈಗಳನ್ನು ನಮಸ್ಕಾರ ಭಂಗಿಯಲ್ಲಿ ಜೋಡಿಸಬೇಕು. ಈ ಆಸನದಲ್ಲಿ ಶರೀರದಲ್ಲಿ ಎಲ್ಲೂ ಸಡಿಲತೆ ಇಲ್ಲದೆ ನಿಧಾನವಾಗಿ ಉಸಿರಾಟದ ಪ್ರಕ್ರಿಯೆ ಪ್ರಾರಂಭವಾಗಬೇಕು. ಇದರಿಂದ ಕಾಲುಗಳ ವಕ್ರತೆ ದೂರವಾಗುವುದರ ಜತೆಗೆ ಬೆನ್ನು ನೋವಿನ ನಿವಾರಣೆ ಸಾಧ್ಯ. ಶಲಭಾಸನ
ನೆಲದ ಮೇಲೆ ಕೆಳಮುಖವಾಗಿ ಮಲಗಿ ಎರಡು ಕೈಗಳನ್ನು ಮುಷ್ಠಿಕಟ್ಟಿ ತೊಡೆಗಳ ಕೆಳಗೆ ಇಡಬೇಕು. ಕಾಲನ್ನು ಮೇಲೆ ಮಾಡಿ ಮುಖವನ್ನು ನಿಧಾನಕ್ಕೆ ಮೇಲೆತ್ತಬೇಕು. ಇದರಿಂದ ಕಾಲಿನ ಬಲ ಹೆಚ್ಚುತ್ತದೆ ಮತ್ತು ಬೆನ್ನು ನೋವು ದೂರವಾಗುತ್ತದೆ.
Related Articles
ಈ ಆಸನದಲ್ಲಿ ಪಾದ ಮತ್ತು ಅಂಗೈ ಸಂಪೂರ್ಣವಾಗಿ ನೆಲದ ಮೇಲೆ ತಾಗಿರುತ್ತದೆ. ಸೂರ್ಯ ನಮಸ್ಕಾರದ ಮೂರನೇ ಭಂಗಿಯಲ್ಲಿ ಈ ಪಾದಹಸ್ತಾಸನವನ್ನು ಕಾಣಬಹುದಾಗಿದ್ದು ಇದನ್ನು ಬೆಳಗ್ಗೆ ಮಾಡುವುದು ಉತ್ತಮ. ಇದರಿಂದ ಬೆನ್ನಿಗೆ ವಿಶೇಷ ವ್ಯಾಯಾಮ ದೊರೆತಂತಾಗುತ್ತದೆ. ಹಟ್ಟೆಯ ಬೊಜ್ಜು ಕರಗಿಸಲು, ಜೀರ್ಣಕ್ರಿಯೆ ಉತ್ತಮವಾಗಲು ಮತ್ತು ಸೊಂಟ, ತೊಡೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ದಿನಕ್ಕೆ 10ರಿಂದ 15 ಬಾರಿ ಮಾಡುವುದರಿಂದ ಗೂನು ಬೆನ್ನಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
Advertisement
ಮಕರಾಸನಮೊದಲು ಬೋರಲಾಗಿ ಮಲಗಿ ಬಳಿಕ ಕೈಗಳನ್ನು ಮಡಚಿ ಒಂದು ಕೆನ್ನೆಯನ್ನು ಕೈಗೆ ಒರೆಗಿಸಿಕೊಂಡು ವಿಶ್ರಾಂತಿ ಪಡೆಯಬೇಕು. ಬಹುತೇಕರಿಗೆ ಇದು ಆಸನವೆಂದು ತಿಳಿಯದಿದ್ದರೂ ದೈನಿಕವಾಗಿ ಮಲಗುವಾಗ ಈ ಭಂಗಿಯನ್ನು ತಮಗರಿವಿಲ್ಲದಂತೆ ಮಾಡುತ್ತಾರೆ. ಇದರಿಂದ ಶರೀರಕ್ಕೆ ವಿಶ್ರಾಂತಿ ಜತೆಗೆ ಗೂನು ಬೆನ್ನಿನ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತದೆ. ಧನುರಾಸನ
ನೆಲದ ಮೇಲೆ ಬೋರಲಾಗಿ ಮಲಗಿ ಬಳಿಕ ಎರಡು ಕಾಲನ್ನು ಮಂಡಿಗಳ ಬಳಿ ಹಿಂದಕ್ಕೆ ಬಗ್ಗಿಸಿ ಕೈಗಳಿಂದ ಕಾಲನ್ನು ಹಿಡಿದಿಟ್ಟು ಉಸಿರನ್ನು ಸಂಪೂರ್ಣವಾಗಿ ಹೊರಬಿಡಬೇಕು. ಧನುರಾಸನದಲ್ಲಿ ದೇಹವು ಬಿಲ್ಲಿನಂತೆ ಬಗ್ಗಿರುತ್ತದೆ. ಇದನ್ನು ಮಾಡುವುದರಿಂದ ಹೃದಯ, ಹೊಟ್ಟೆನೋವು ಸಮಸ್ಯೆ ನಿವಾರಣೆಯಾಗುವುದರೊಂದಿಗೆ ಶ್ವಾಸಕೋಶವು ಬಲಿಷ್ಠವಾಗುತ್ತದೆ. ಜೀರ್ಣ ಶಕ್ತಿಯೂ ಹೆಚ್ಚುವುದರ ಜತೆಗೆ ಬೆನ್ನಿನ ಮೂಳೆಯೂ ಹೆಚ್ಚು ಬಲವಾಗುವ ಜತೆಗೆ ಗೂನುಬೆನ್ನು ಸಮಸ್ಯೆ ನಿವಾರಣೆಯಾಗಲಿದೆ. ಸೂಚನೆ: ಈ ಎಲ್ಲ ಆಸನಗಳನ್ನು ತರಬೇತಿ ಪಡೆದು ಮಾಡುವುದು ಒಳಿತು. ಯೋಗಾತ್ಮಕವಾಗಿ ಮಾಡಲು ಹೊರಟರೆ ಬೆನ್ನು ನೋವು, ಇತರ ಶಾರೀರಿಕ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.