Advertisement

ಅಧಿಕ ‌ರಕ್ತದೊತ್ತಡ ‌ಯೋಗದಲ್ಲಿದೆ ಪರಿಹಾರ

11:34 AM Dec 14, 2020 | Nagendra Trasi |

ಅಧಿಕ ರಕ್ತದೊತ್ತಡ ಎನ್ನುವುದು ಆಧುನಿಕ ಜಗತ್ತಿನಲ್ಲಿ ಜನರಿಗೆ ಬಳುವಳಿಯಾಗಿ ಬಂದಿರುವಂತಹ ಕಾಯಿಲೆ. ಅತಿಯಾದ ಒತ್ತಡ, ಅನಾರೋಗ್ಯಕರ ಆಹಾರ ಹಾಗೂ ಜೀವನಶೈಲಿಯಿಂದಾಗಿ ಬರುವ ಆರೋಗ್ಯ ಸಮಸ್ಯೆ ಇದು. ಅಧಿಕ ರಕ್ತದೊತ್ತಡದೊಂದಿಗೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವುದರಿಂದ ಇದನ್ನು ನಿಯಂತ್ರಣದಲ್ಲಿರಿಸಲು ಹೆಚ್ಚಿನವರು ಹರಸಾಹಸ ಪಡುತ್ತಾರೆ. ಔಷಧ, ಆಹಾರ ಕ್ರಮ, ಜೀವನ ಶೈಲಿಯಲ್ಲಿ ಪರಿವರ್ತನೆ ಮಾಡಿಕೊಂಡರೆ ಮಾತ್ರ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು.ಇದಕ್ಕೆ ಯೋಗದಲ್ಲೂ ದಾರಿಯಿದೆ.

Advertisement

ಉತ್ಥಾನಾಸನ
ಮುಂದೆ ಬಾಗಿ ನಿಲ್ಲುವ ಈ ಭಂಗಿಯಿಂದ ರಕದೊತ್ತಡ ಸಮಸ್ಯೆ ನಿವಾರಣೆಯಾಗಲಿದ್ದು, ಇದರೊಂದಿಗೆ ದಣಿವು, ಸುಸ್ತು ಕಡಿಮೆಯಾಗುತ್ತದೆ. ಮುಟ್ಟು ನಿಂತ ನಂತರ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಇದು ಒಳ್ಳೆಯದು.

ಮೊದಲ ಹಂತ: ಒಂದು ಕುರ್ಚಿ ಇಟ್ಟುಕೊಂಡು ಅದರ ಮುಂದೆ ಕಾಲುಗಳು ಹಾಗೂ ತೊಡೆ ಅಗಲವಾಗಿ ಇಟ್ಟುಕೊಂಡು ನೇರವಾಗಿ ನಿಲ್ಲಿ. ಕೈಗಳು ದೇಹದ ಎರಡು ಭಾಗದಲ್ಲಿ ಇರಲಿ.

ಎರಡನೇ ಹಂತ: ಉಸಿರನ್ನು ಎಳೆದುಕೊಳ್ಳಿ ಮತ್ತು ಎರಡು ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ.

ಮೂರನೇ ಹಂತ: ಉಸಿರನ್ನು ಬಿಡಿ ಮತ್ತು ಮುಂದಕ್ಕೆ ಬಾಗಿಕೊಂಡು ಕೈಗಳನ್ನು ಮಡಚಿ ಹಾಗೆ ಕುರ್ಚಿಯಲ್ಲಿಡಿ ಮತ್ತು ಹಣೆಯನ್ನು ಕೈಗಳ ಮೇಲಿಡಿ.

Advertisement

ನಾಲ್ಕನೇ ಹಂತ: 10-15 ಉಸಿರಿನ ತನಕ ನೀವು ಇದೇ ಭಂಗಿಯಲ್ಲಿ ಇರಿ. ಮೂಳೆ ತುದಿಯನ್ನು ಹಾಗೆ ಒತ್ತಿ ಮತ್ತು ಹೊಟ್ಟೆಯ ಭಾಗದ ಸ್ನಾಯಗಳನ್ನು ಸಂಕುಚಿತಗೊಳಿಸಿ ನಿಧಾನವಾಗಿ ಬಿಡುಗಡೆ ಮಾಡಿ.

ಅಧೋಮುಖ ಶ್ವಾನಾಸನ
ನಾಯಿಯ ಭಂಗಿಯಲ್ಲಿ ಕೆಳಮುಖವಾಗಿ ಮಾಡುವ ಈ ಆಸನ ತಲೆಗೆ ಹೆಚ್ಚಿನ ರಕ್ತಸಂಚಾರ ನೀಡುತ್ತದೆ,ಇದು ಸೈನಸ್‌ ಮತ್ತು ಸಾಮಾನ್ಯ ನೆಗಡಿ ಹೋಗಲಾಡಿಸಲು ಸಹಾಯಕ.ಮಾನಸಿಕವಾಗಿ ಬಳಲಿದವರಿಗೆ, ನಿದ್ರಾಹೀನತೆ, ಖಿನ್ನತೆ ಹೋಗಲಾಡಿಸಲು ಕೂಡ ಸಹಾಯಕವಾಗುತ್ತದೆ.

ಮೊದಲ ಹಂತ: ಪಾದಗಳು ಹಾಗೂ ಕೈಗಳನ್ನು ಅಗಲವಾಗಿಸಿಕೊಂಡು ಅಂಗೈ ಹಾಗೂ ಪಾದಗಳನ್ನು ನೆಲದ ಮೇಲಿಡಿ.

ಎರಡನೇ ಹಂತ:
ಉಸಿರನ್ನು ಎಳೆದುಕೊಳ್ಳಿ ಮತ್ತು ಇದೇ ವೇಳೆ ನಿಧಾನವಾಗಿ ಸೊಂಟವನ್ನು ಮೇಲಕ್ಕೆ ಎತ್ತಿ ಹಾಗೂ ಮೊಣಕೈ ಹಾಗೂ ಮೊಣಕಾಲುಗಳು ವಿಆಕಾರಕ್ಕೆ ಬರಲಿ.

ಮೂರನೇ ಹಂತ: ಕೈಗಳನ್ನು ನೆಲಕ್ಕೆ ಹಾಗೆ ಒತ್ತಿ ಮತ್ತು ಕುತ್ತಿ ನೇರವಾಗಿಸಿ ಮತ್ತು ತಲೆದಿಂಬಿನ ಮೇಲೆ ತಲೆಗೆ ವಿಶ್ರಾಂತಿ ನೀಡಿ.

ನಾಲ್ಕನೇ ಹಂತ: ಕೈಗಳಿಂದ ಕಿವಿಗಳನ್ನು ಸ್ಪರ್ಶಿಸಿ, ನಾಭಿಯತ್ತ ದೃಷ್ಟಿಯಿಟ್ಟು ಉಸಿರಾಡಿ.

ಐದನೇ ಹಂತ: 15-30 ಸೆಕೆಂಡು ಕಾಲ ಹೀಗೆ ಇರಿ. ಇದರ ಬಳಿಕ ಮೊಣಕಾಲುಗಳನ್ನು ಮಡಚಿ ಮತ್ತು ಟೇಬಲ್‌ ಭಂಗಿಗೆ ಬನ್ನಿ.

Advertisement

Udayavani is now on Telegram. Click here to join our channel and stay updated with the latest news.

Next