Advertisement

ಜೀವನದ ಚೈತನ್ಯಕ್ಕೆ ಸನಾತನ ಯೋಗ ಪೂರಕ

10:47 PM Jun 21, 2021 | Team Udayavani |

ತುಮಕೂರು: ಹಿಂದೂ ಧರ್ಮದ ಸನಾತನ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ನಮ್ಮಯೋಗ ಪಟುಗಳು ವಿಶ್ವದ ಹಲವಾರು ದೇಶಗಳಲ್ಲಿ ಯೋಗ ಕಲಿಸುತ್ತಿದ್ದು, ಜೂ.21ರಂದುಆಚರಿಸುವ ವಿಶ್ವ ಯೋಗ ದಿನವನ್ನು ಕೊರೊನಾ ಸೋಂಕು ಹಿನ್ನೆಲೆ ಸಾರ್ವಜನಿಕವಾಗಿಆಚರಿಸದೇ ಮನೆಯಲ್ಲಿ ಇದ್ದು ಯೋಗ ಮಾಡುವಂತೆ ಸರ್ಕಾರ ಸೂಚಿಸಿದೆ.

Advertisement

ಅದರಂತೆ ಎಲ್ಲಕಡೆಯೋಗ ದಿನ ಆಚರಣೆಗೆ ಸಿದ್ಧತೆ ನಡೆದಿದೆ.ಭಾರತೀಯ ಸನಾತನ ಧರ್ಮದಲ್ಲಿ ಯೋಗಕ್ಕೆ ಹೆಚ್ಚುಮಹತ್ವವಿದೆ. ಯೋಗ ಮಾಡಿ ತಮ್ಮ ಆರೋಗ್ಯವನ್ನು ನಮ್ಮಪೂರ್ವಿಕರು ಕಾಪಾಡಿ ಕೊಳ್ಳುತ್ತಿದ್ದರು. ಈಗ ಈ ಯೋಗ ವಿಶ್ವದಎಲ್ಲ ರಾಷ್ಟ್ರಗಳ ಜನರು ಅಳವಡಿಸಿ ಕೊಂಡಿದ್ದಾರೆ. ಮನುಷ್ಯನಿಗೆಆಹಾರ, ನೀರು, ಗಾಳಿ ಎಷ್ಟು ಮುಖ್ಯವೋ ಆರೋಗ್ಯವನ್ನುಉತ್ತಮವಾಗಿಟ್ಟು ಕೊಳ್ಳಲು ಯೋಗವೂ ಮುಖ್ಯ. ದಿನದಒತ್ತಡಗಳ ನಡುವೆ ಇಂದು ಹಲವಾರು ಕಾಯಿಲೆಕಾಣಿಸಿಕೊಳ್ಳುತ್ತಿವೆ. ಅಂತಹ ಕಾಯಿಲೆಗಳನ್ನು ಔಷಧ ಇಲ್ಲದೆಗುಣ ಮಾಡುವ ಶಕ್ತಿ ಯೋಗಕ್ಕೆ ಇದೆ. ಭಾರತದಲ್ಲಿ ಯೋಗಕ್ಕೆ 6ಸಾವಿರ ವರ್ಷಗಳ ಇತಿಹಾಸವಿದೆ.

ಋಷಿಮುನಿ ಗಳಾದಿಯಾಗಿಅನೇಕ ಮಹನೀಯರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಯೋಗಾಭ್ಯಾಸ ಮಾಡುತ್ತಿದ್ದರು. ಇಂತಹ ಯೋಗಕ್ಕೆ ಇಂದು ವಿಶ್ವಮಾನ್ಯತೆ ದೊರೆತಿದೆ.ಯೋಗಕ್ಕೆ ವಿಶ್ವ ಮಾನ್ಯತೆ: ವಿಶ್ವದ 214 ದೇಶಗಳಲ್ಲಿ ಇಂದು ವಿಶ್ವ ಯೋಗದಿನವನ್ನು ಆಚರಿಸಲಾಗುತ್ತಿದೆ. ಭಾರತದ ಯೋಗದ ಮಹತ್ವವನ್ನು ವಿದೇಶಿಯರೂ ಅರ್ಥಮಾಡಿಕೊಂಡಿದ್ದಾರೆ.ಯೋಗಕ್ಕೆ ಯಾವುದೇ ಜಾತಿ, ಮತ, ಪಂಥ, ಧರ್ಮ ಬೇಧವಿಲ್ಲ ಆರೋಗ್ಯವನ್ನುಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಯೋಗ ಮಾಡಬೇಕು. ಪ್ರತಿಯೊಬ್ಬರೂ ದಿನನಿತ್ಯದಒತ್ತಡಗಳ ನಡುವೆ ಇರುತ್ತಾರೆ. ಇದರಿಂದ ಅನಾರೋಗ್ಯದಿಂದ ಹಲವರು ಬಳಲುತ್ತಾರೆ.

ಉತ್ತಮಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತಿಮುಖ್ಯವಾದುದು. ನಮ್ಮ ಋಷಿಮುನಿಗಳುಯೋಗದ ಮೂಲಕ ಆರೋಗ್ಯವನ್ನೂ ಕಾಪಾಡಿಕೊಂಡುಬಂದಿದ್ದಾರೆ. ಇದನ್ನೆಲ್ಲಾಗಮನಿಸಿ ಪ್ರಧಾನಿ ಮೋದಿಭಾರತದ ಯೋಗಕೆ R ವಿಶ್ವಮಾನ್ಯತೆ ದೊರಕಿಸಿದ್ದು, ಕಳೆ¨ ‌ಏಳು ವರ್ಷಗಳಿಂ¨ ‌ ವಿಶ್ವಯೋಗ ‌ ದಿನಾಚರಣೆನಡೆಸಿಕೊಂಡು ಬಂದಿದೆ.ಯೋಗದಿನದಂದು ಮ® ೆಯಲ್ಲಿಯೇ ಸಾಮೂಹಿಕ ವಾಗಿಸೂರ್ಯ ನಮಸ್ಕಾರ,ಪ್ರಾಣಾಯಾಮ, ಮಕರಾಸನ,ಉತ್ತುಂಗಾಸನ, ಅರ್ಧಕಟಿಚಕ್ರಾಸನ ಸೇರಿದಂತೆ ವಿವಿಧಆಸನಗಳನ್ನು ಮಾಡಿ. ಉತ್ತಮಆರೋಗ್ಯಕೆ R ಯೋಗ ‌ ಮುಖ್ಯಎನ್ನುತ್ತಾರೆ ಯೋಗಾಚಾರ್ಯಪೊ›.ಕೆ.ಚಂದ್ರಣ್ಣ.

ಚಿ.ನಿ.ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next