Advertisement
ಈ ಬಾರಿ ಇತ್ತಂಡಗಳಲ್ಲಿಯೂ ಕೆಲವು ಆಟಗಾರರು ಬದಲಾವಣೆಯಾಗಿದ್ದು ಕಳೆದ ಬಾರಿ ತೋರಿದ ಪ್ರದರ್ಶನದ ಮೇಲೆ ತಂಡದ ಬಲವನ್ನು ಹೇಳಲು ಸಾಧ್ಯವಿಲ್ಲ. ಆದರೂ ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು ಸಮಾನ ಆಟಗಾರರನ್ನು ಹೊಂದಿದ್ದು ಬಲಿಷ್ಠವಾಗಿವೆ.
ನಾಯಕ ಮಣಿಂದರ್ ಸಿಂಗ್ ಅವರ ರೈಡಿಂಗ್ ಸ್ಕಿಲ್ ಬೆಂಗಾಲ್ ವಾರಿಯರ್ಗೆ ಹೆಚ್ಚಿನ ಬಲ ನೀಡಲಿದೆ. ನೀಲ ಕಾಲಿನ ಮಣಿಂದರ್ ಎದುರಾಳಿ ಕೋಟೆಯಿಂದ ಅಂಕ ಕದಿಯುದರಲ್ಲಿ ಬಲು ಫೇಮಸ್. ಕಳೆದ ಋತುವಿನಲ್ಲಿ ಬೆಂಗಾಲ್ ಪರ ಆಡಿದ್ದ ಅವರು ಸೂಪರ್ ರೈಡ್ ಮೂಲಕ ಹಲವು ಬಾರಿ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ತಂಡ ಇವರ ರೈಡಿಂಗ್ ಬಲವನ್ನೇ ನಂಬಿಕೊಂಡಿದೆ. ಕಳೆದ ಬಾರಿ ತಮಿಳ್ ತಲೈವಾಸ್ ಪರ ಆಡಿದ್ದ ಕನ್ನಡಿಗ ಸುಕೇಶ್ ಹೆಗ್ಡೆ ಬೆಂಗಾಲ್ ತಂಡದಲ್ಲಿದ್ದಾರೆ. ಕೆ. ಪ್ರಪಂಚನ್ ಕೂಡ ಬೆಂಗಾಲ್ ತಂಡದಲ್ಲಿದ್ದು ರೈಡಿಂಗ್ ವಿಭಾಗದಲ್ಲಿ ಹೆಚ್ಚಿನ ಬಲ ತುಂಬಿ ದಂತಾಗಿದೆ. ಪ್ರೊ ಕಬಡ್ಡಿ ಕೂಟದ ಸೂಪರ್ ಟ್ಯಾಕಲ್ ಸ್ಪೆಶಲಿಸ್ಟ್‌ಗಳಲ್ಲಿ ಒಬ್ಬರಾದ ಜೀವ ಕುಮಾರ್ ಬೆಂಗಾಲ್ ತಂಡದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
Related Articles
ಯುಪಿ ಯೋಧಾ ಬೆಂಗಾಲ್ ತಂಡಕ್ಕಿಂತ ಎಲ್ಲ ವಿಭಾಗದಲ್ಲೂ ಸಮರ್ಥ ಎನ್ನಲಡ್ಡಿಯಿಲ್ಲ. ರೈಡಿಂಗ್, ಡಿಫೆಂಡಿಂಗ್ ವಿಭಾಗದಲ್ಲಿ ಸಮರ್ಥ ಆಟಗಾರರನ್ನು ಹೊಂದಿದೆ. ಕಳೆದ ಬಾರಿ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಮೋನು ಗೋಯತ್ ಈ ಬಾರಿ ಯುಪಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರೈಡಿಂಗ್ ವಿಭಾಗದಲ್ಲಿ ರಿಷಾಂಕ್ ದೇವಾಡಿಗ, ಮೋನು ಗೋಯತ್ ತಂಡಕ್ಕೆ ಆಸರೆಯಾದರೆ ನಾಯಕ ನಿತೇಶ್ ಕುಮಾರ್ ಡಿಫೆಂಡಿಂಗ್‌ನಲ್ಲಿ ಎದುರಾಳಿ ರೈಡರ್‌ಗಳನ್ನು ರೈಟ್ ಕಾರ್ನರ್‌ನಲ್ಲಿ ಕಟ್ಟಿಕಾಕುವ ತಂತ್ರಗಾರಿಕೆ ಹೊಂದಿದ್ದಾರೆ.
Advertisement
ಗೆಲುವಿನ ಶುಭಾರಂಭಕ್ಕೆ ಡೆಲ್ಲಿ ಕಾತುರಆಡಿದ ಎರಡು ಪಂದ್ಯಗಳಲ್ಲಿ ಸೋತಿರುವ ಟೈಟಾನ್ಸ್ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಬಲಿಷ್ಠ ಡಿಫೆಂಡಿಂಗ್ ತಂಡವಾದ ದಬಾಂಗ್ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಡೆಲ್ಲಿ ತಂಡದ ಬಲವೇ ಡಿಫೆಂಡಿಂಗ್, ಜೋಗಿಂದರ್ ಶರ್ಮಾ, ವಿಶಾಲ್ ಮಾನೆ, ಡೈವಿಂಗ್ ಆ್ಯಂಕಲ್ ಹೋಲ್ಡ್ ಸ್ಪೆಶಲಿಸ್ಟ್ ರವೀಂದ್ರ ಫೆಹಲ್ ಅವರ ಡಿಫೆಂಡಿಂಗ್ ತಂತ್ರಗಾರಿಕೆಯ ಮುಂದೆ ಎಷ್ಟೇ ಸ್ಟಾರ್ ರೈಡರ್‌ಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಡೆಲ್ಲಿ ಪರ ಈ ಬಾರಿ ಸ್ಟಾರ್ ರೈಡರ್ ಕಾಣಿಸಿಕೊಂಡಿಲ್ಲ. ಮಿರಾಜ್ ಶೇಖ್ ಹೊರತುಪಡಿಸಿದರೆ ಮತ್ತೆಲ್ಲ ರೈಡರ್ ಹೊಸಬರು. ಕಳೆದ ಬಾರಿಯು ಮುಂಬಾ ತಂಡದಲ್ಲಿದ್ದ ಸ್ಟಾರ್ ರೈಡರ್ ಸಿದ್ಧಾರ್ಥ್ ದೇಸಾಯಿ ಈ ಬಾರಿ ಟೈಟಾನ್ಸ್ ತಂಡದಲ್ಲಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಆಡಿದ 2 ಪಂದ್ಯದಲ್ಲಿಯೂ ಅವರು ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ಇದರಿಂದ ಇತರ ಸದಸ್ಯರೂ ಧೈರ್ಯ ಕಳೆದುಕೊಳ್ಳುವಂತಾಗಿದೆ.ವಿಶಾಲ್ ಭಾರದ್ವಾಜ್, ರಜನೀಸ್ ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಕನ್ನಡಿಗರ ಮುಖಾಮುಖೀ
ಕನ್ನಡಿಗರಾದ ರಿಷಾಂಕ್ ದೇವಾಡಿಗ ಮತ್ತು ಸುಕೇಶ್ ಹೆಗ್ಡೆ ಪಂದ್ಯದ ಪ್ರಮುಖ ಆಕರ್ಷಣೆ. ಇಬ್ಬರೂ ರೈಡಿಂಗ್‌ನಲ್ಲಿ ಎದುರಾಳಿ ಕೋಟೆಗೆ ನುಗ್ಗಿ ಅಂಕ ಪಡೆಯುವುದರಲ್ಲಿ ನಿಸ್ಸೀಮರು. ಆದರೆ ಇವರಲ್ಲಿ ಯಾರು ಹೆಚ್ಚು ಅಂಕ ಗಳಿಸುತ್ತಾರೆ ಎಂಬುದನ್ನು ನೋಡಬೇಕಿದೆ.