Advertisement

ಯಶ್‍ಗೆ “ವೈಜಿಎಫ್’ಸಂಭ್ರಮ

04:02 PM Nov 18, 2018 | Team Udayavani |

ರಾಕಿಂಗ್ ಸ್ಟಾರ್ ಯಶ್ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ನಗರದ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು. ಗೌಡರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ ಶಾಸ್ತ್ರ ನಡೆದಿದ್ದು, ಸೀಮಂತದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್‍ನ ಕಲಾವಿದರು ಭಾಗಿ ಆಗಿದ್ದರು.

Advertisement

ಯಶ್ ಹಾಗೂ ರಾಧಿಕಾ ಡಿಸೆಂಬರ್ 9ರಂದು ಮದುವೆ ಆಗಿದ್ದರು. ಸಂತಸದ ವಿಷಯವೆಂದರೆ ಅದೇ ದಿನವೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುವ ಸಾಧ್ಯತೆ ಇದೆ. ಇನ್ನು ತಾಜ್ ವೆಸ್ಟೆಂಡ್ ಹೋಟೆಲ್ ಯಶ್ ಮತ್ತು ರಾಧಿಕಾರ ಫೇವರಿಟ್ ಸ್ಥಳವಾಗಿದ್ದು, ಈ ಸಮಾರಂಭದಲ್ಲಿ ಕನ್ನಡ ತಾರಾ ಬಳಗವೇ ಸೇರಿದೆ.

ಹಿರಿಯ ನಟ ಅಂಬರೀಷ್ ಅವರ ಪತ್ನಿ ಸುಮಲತಾ, ನಟ ಪುನೀತ್​ ರಾಜಕುಮಾರ್​ ಹಾಗೂ ಅವರ ಪತ್ನಿ, ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಪತ್ನಿ, ವಿನಯ್ ರಾಜಕುಮಾರ್,  ಹಿರಿಯ ನಟಿ ಶ್ರುತಿ, ನಂದಿನಿ ಗೌಡ, ರಾಕಲೈನ್ ವೆಂಕಟೇಶ್​, ಬಿ ಸರೋಜಾ ದೇವಿ, ಅಮೂಲ್ಯ ಹಾಗೂ ಅವರ ಪತಿ ಜಗದೀಶ್, ನಟ ಅಜಯ್ ರಾವ್, ನಿರ್ದೇಶಕ ಶಶಾಂಕ್, ರಾಜೇಂದ್ರ ಸಿಂಗ್ ಬಾಬು,

ವಿಯಲಕ್ಷ್ಮೀ ಸಿಂಗ್, ಮಾಳವಿಕಾ ಅವಿನಾಶ್, ಲವ್ಲಿ ಸ್ಟಾರ್ ಪ್ರೇಮ್, ಶಿಲ್ಪಾ ಗಣೇಶ್, ನಿರ್ದೇಶಕರಾದ ಯೋಗರಾಜ್​ಭಟ್, ಎಪಿ ಅರ್ಜುನ್, ಇಮ್ರಾನ್ ಸರ್ದಾರಿಯಾ ಅವರ ಕುಟುಂಬ, ಮಾಲಾಶ್ರೀ ಸೇರಿದಂತೆ ಇಡೀ ಚಿತ್ರರಂಗದ ಗಣ್ಯರೇ ಆಗಮಿಸಿದ್ದಾರೆ. ಇಷ್ಟೇ ಅಲ್ಲದೇ ಹಲವು ರಾಜಕೀಯ ದಿಗ್ಗಜರು ಕೂಡಾ ಸಮಾರಂಭಕ್ಕೆ ಆಗಮಿಸಿ ರಾಧಿಕಾ ಪಂಡಿತ್ ಮತ್ತು ಯಶ್‍ಗೆ ಹಾರೈಸಿ ಶುಭಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next