Advertisement
ರವಿವಾರ ಬೆಂಗಳೂರಿನಲ್ಲಿ ಮಾತ ನಾಡಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗ ಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗ ಳೂರು ಜಿಲ್ಲೆ ಗಳು ಈ ಯೋಜನೆ ಯನ್ನು ಎದುರು ನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಹಲವು ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ ಎಂದರು.
Related Articles
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಜುಲೈ 2024ರ ಅಂತ್ಯದವರೆಗೆ ಒಟ್ಟು 16,152.05 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 2027ರ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸುವ ಗುರಿ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
Advertisement
ಯೋಜನೆ ಅಡಿ ಹಾಸನದ ಸಕಲೇಶಪುರ ತಾಲೂಕಿನ, ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರನ್ನು ಏಳು ಜಿÇÉೆಗಳ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ (ಅಂದಾಜು ಜನಸಂಖ್ಯೆ) ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.
ಜತೆಗೆ ಈ ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿಎಂಸಿ ನೀರು ತುಂಬಿಸಲಾಗುತ್ತದೆ. ಯೋಜನಾ ವೆಚ್ಚ 23,251.66 ಕೋಟಿ ರೂ. ಆಗಿದೆ ಎಂದರು.
ಏನಿದು ಯೋಜನೆ?-ಸಕಲೇಶಪುರ ತಾಲೂಕಿನ 4 ಹೊಳೆಗಳಿಂದ ಮುಂಗಾರಿನ 139 ದಿನ ನೀರು ಪೂರೈಕೆ
-29 ತಾಲೂಕಿನ 38 ಪಟ್ಟಣಗಳ 6,657 ಗ್ರಾಮಗಳಿಗೆ ನೀರು ಪೂರೈಕೆ
-75.59 ಲಕ್ಷ ಜನ, ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರು
-ಈ ಯೋಜನೆ ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೂ 10 ಟಿಎಂಸಿ ನೀರು
-ಕಾಮಗಾರಿಗಾಗಿ 23,251.66 ಕೋಟಿ ರೂ. ನಿಗದಿಪಡಿಸಿದ್ದ ರಾಜ್ಯ ಸರಕಾರ
-ಈ ಪೈಕಿ ಇದುವರೆಗೆ ಖರ್ಚಾಗಿರುವ ಮೊತ್ತ 16,152.05 ಕೋಟಿ ರೂ.
-2014ರಲ್ಲಿ ಆರಂಭವಾಗಿದ್ದ ಎತ್ತಿನಹೊಳೆ ನೀರಾವರಿ ಯೋಜನೆ
-2027ರ ಡಿಸೆಂಬರ್‌ನಲ್ಲಿ ಯೋಜನೆ ಪೂರ್ತಿಗೊಳಿಸುವ ಗುರಿ ಯಾವ್ಯಾವ
ಜಿಲ್ಲೆಗಳಿಗೆ ನೀರು?
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು 7 ಜಿಲ್ಲೆಗಳ ಜೀವನಾಡಿಯಾದ ಎತ್ತಿನಹೊಳೆ ಏತನೀರಾವರಿ ಯೋಜನೆಯನ್ನು ಒಂದು ವರ್ಷದಿಂದ ಸವಾಲಾಗಿ ಸ್ವೀಕರಿಸಿದ್ದೆ . ಮೊನ್ನೆಯಷ್ಟೇ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆಗೆ ಚಾಲನೆ ನೀಡಿದ್ದೆ . ಗೌರಿ ಹಬ್ಬದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ