ಸಕಲೇಶಪುರ: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಶನಿವಾರ ಯಶಸ್ವಿಯಾಗಿ ನೀರು ಮೇಲೆತ್ತಲಾಗಿದ್ದು, ಈ ಮೂಲಕ ಬಯಲು ಸೀಮೆಗೆ ಈ ಬಾರಿ ನೀರು ಹರಿಯುವುದು ನಿಶ್ಚಿತವಾಗಿದೆ.
2023 ನವೆಂಬರ್‌ನಲ್ಲಿ ಕಾಡುಮನೆ ಹೊಳೆಗೆ ನಿರ್ಮಿಸಲಾಗಿರುವ ಕಿರು ಅಣೆಕಟ್ಟು 4 ಹಾಗೂ 5ರಿಂದ ಪ್ರಾಯೋಗಿಕವಾಗಿ ತಾಲೂಕಿನ ನಾಗರ ಗ್ರಾಮದ ವಿತರಣ ತೊಟ್ಟಿ 3ಕ್ಕೆ ನೀರೆತ್ತುವ ಪ್ರಯತ್ನ ನಡೆಸ ಲಾಗಿ ತ್ತಾದರೂ ಹಲವೆಡೆ ಪೈಪ್‌ಗ್ಳಲ್ಲಿ ಸೋರಿಕೆ ಹೆಚ್ಚಿದ್ದರಿಂದ ಸಾಕಷ್ಟು ಜಮೀನುಗಳು ಹಾನಿಗೊಂಡಿತ್ತು. ಈ ಘಟನೆ ಬಳಿಕ ಎಚ್ಚೆತ್ತ ಇಲಾಖೆ, ಪೈಪ್‌ಲೈನ್‌ನಲ್ಲಿರುವ
ಕೀ ಹೋಲ್‌ಗಳನ್ನು ಪತ್ತೆಹಚ್ಚಿ ದುರಸ್ತಿ ನಡೆಸಿದ್ದಲ್ಲದೆ, ಹೈಡ್ರೋಟೆಸ್ಟ್ ಹಾಗೂ ಆಲೊóàಜನಿಕ್ ತಪಾಸಣೆ ಮೂಲಕ ಪೈಪ್‌ನಲ್ಲಿ ದೋಷಗಳಿಲ್ಲದ ಬಗ್ಗೆ ಖಾತ್ರಿ ಪಡಿಸಿಕೊಂಡು ಬಾಕಿ ಉಳಿದಿರುವ ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಗಮನ ಹರಿಸಿತ್ತು.
ಸದ್ಯ 2 ಚೆಕ್ ಡ್ಯಾಮ್‌ನಿಂದ ನೀರೆತ್ತ ಲಾಗಿದ್ದು, ವಿತರಣ ತೊಟ್ಟಿ ಸಂಪೂರ್ಣ ತುಂಬಿದ್ದರೂ ನಾಗರ ಗ್ರಾಮದ ವಿತರಣ ತೊಟ್ಟಿಯಿಂದ ನೀರು ಮೇಲೆತ್ತಿ 8 ಕಿ.ಮೀ. ದೂರದ ಹೆಬ್ಬನಹಳ್ಳಿವರಗೆ ನೀರು ಸಾಗಿಸಬೇಕಿದೆ. ಆದರೆ ಈ ತೊಟ್ಟಿಯಿಂದ ನೀರು ಮೇಲೆತ್ತಲು ಇನ್ನೂ ಹೆಚ್ಚಿನ ನೀರಿನ ಅಗತ್ಯ ವಿದ್ದು, ಅಣೆಕಟ್ಟು ಒಂದರಿಂದ ನೀರು ಮೇಲೆತ್ತಿದ ಬಳಿಕ ತೊಟ್ಟಿಯಿಂದ ನೀರು ಮೇಲೆತ್ತಿ ಹೆಬ್ಬನಹಳ್ಳಿ ಗ್ರಾಮದವರಗೆ ಸಾಗಿಸಲು ಯೋಜನೆ ರೂಪಿಸಲಾಗಿದೆ. ಹೆಬ್ಬನಹಳ್ಳಿ ತಲುಪಿದ ಬಳಿಕ ಗುರುತ್ವಾಕರ್ಷಣ ಬಲದಿಂದ ಎತ್ತಿನಹೊಳೆ ಕೇಂದ್ರ ಸ್ಥಾನದಿಂದ 44 ಕಿ.ಮೀ. ದೂರದಲ್ಲಿರುವ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಲಿದೆ.