Advertisement

ಎತ್ತಿನಹೊಳೆ ಯೋಜನೆ ಕೈಬಿಡಲು ಧರಣಿ: ಆಗ್ರಹ

02:42 AM Apr 25, 2019 | Sriram |

ಮಂಗಳೂರು: ಎತ್ತಿನ ಹೊಳೆ ಯೋಜನೆಯನ್ನು ಕೈಬಿಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು ಮತ್ತು ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಬೇಕು ಎಂದು ಸಹ್ಯಾದ್ರಿ ಸಂಚಯ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Advertisement

ಜಿಲ್ಲೆ ಬರ ಎದುರಿಸುತ್ತಿರುವಾಗ ಯೋಜನೆಯಡಿ ನೀರು ಹರಿಸುವುದು ಹೇಗೆ ಎಂಬ ಬಗ್ಗೆ ಜಿಲ್ಲೆಯ ಸಚಿವರು ಮತ್ತು ಶಾಸಕರು ಧ್ವನಿ ಎತ್ತಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಮತ್ತು ಸಹ್ಯಾದ್ರಿ ಸಂಚಯದ ವಕ್ತಾರ ದಿನೇಶ್‌ ಹೊಳ್ಳ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಜನಪ್ರತಿನಿಧಿಗಳು ಹೋರಾಟ ನಡೆಸದಿದ್ದರೆ ಅವರು ಹೋದಲ್ಲೆಲ್ಲ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ ವ್ಯಕ್ತ ಪಡಿಸಲಾಗುವುದು ಎಂದು ಶಶಿಧರ ಶೆಟ್ಟಿ ತಿಳಿಸಿದರು.

ಬರಪೀಡಿತ ದ. ಕನ್ನಡದಿಂದ ಇತರ ಜಿಲ್ಲೆಗಳಿಗೆ ನೀರು ಹಾಯಿಸು ವುದೆಂದರೆ ಏನರ್ಥ? ನೀರಿನ ಕೊರತೆ, ಬರ ನಾಲ್ಕೈದು ವರ್ಷಗಳಲ್ಲಿ ತೀವ್ರಗೊಂಡಿರುವುದೇಕೆ ಎಂಬ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕ ವರದಿ ತಯಾರಿಸಿದ್ದಾರೆಯೇ ಎಂಬುದನ್ನು ತಿಳಿಸಬೇಕು.

ತುಂಬೆ ಡ್ಯಾಂ ಮರುನಿರ್ಮಾಣವಾದ ಒಂದೂವರೆ ವರ್ಷದಲ್ಲೇ ಬರ ಕಾಡಲು ಏನು ಕಾರಣ ಎಂಬುದನ್ನು ತಿಳಿದು ಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕು. ಉತ್ತರ ಸಿಗುವವರೆಗೆ ನಾವು ಹೋರಾಟ ನಡೆಸಲಿದ್ದೇವೆ ಎಂದು ಶಶಿಧರ ಶೆಟ್ಟಿ ವಿವರಿಸಿದರು.

Advertisement

ಪಶ್ಚಿಮ ಘಟ್ಟದಲ್ಲಿ ಎಳನೀರಿನಿಂದ ಪುಷ್ಪಗಿರಿಯ ವರೆಗೆ ನೇತ್ರಾವತಿಯ 9 ಉಪನದಿ ಮೂಲಗಳನ್ನೂ ಅತಿ ಕ್ರಮಿಸಲಾಗಿದೆ. ರಾಜ್ಯದಲ್ಲಿ ಕೆರೆಗಳ ಒತ್ತುವರಿಗೆ ಸಂಬಂಧಿಸಿ ಪ್ರತ್ಯೇಕ ಪ್ರಾಧಿಕಾರವೇ ಇಲ್ಲ. ಕಳೆದ ಬಾರಿ ಎತ್ತಿನಹೊಳೆಯಲ್ಲಿ ಕಾಮಗಾರಿಗೆ ನೀರಿಲ್ಲದೆ ಹೇಮಾವತಿ ನದಿಯಿಂದ ಕದ್ದು ಮುಚ್ಚಿ ತರಲಾಗಿತ್ತು. ಕಾಮ ಗಾರಿಗೇ ನೀರಿಲ್ಲದ ಯೋಜನೆಯಿಂದ ನೀರು ಕೊಡುವುದಾದರೂ ಹೇಗೆ ಎಂದು ದಿನೇಶ್‌ ಹೊಳ್ಳ ಪ್ರಶ್ನಿಸಿದರು.

ಜಲವಿದ್ಯುತ್‌: 3 ಕಡೆ ವಿಫ‌ಲ!
ನೇತ್ರಾವತಿಯುದ್ದಕ್ಕೂ 26 ಕಡೆ ಜಲವಿದ್ಯುತ್‌ ಯೋಜನೆಗಳನ್ನು ಸ್ಥಾಪಿಸಲು ಮಂಜೂರಾತಿ ದೊರಕಿದೆ. ನಿಡ್ಲೆ, ಮೃತ್ಯುಂಜಯ, ಗುಂಡ್ಯದಲ್ಲಿ ಯೋಜನೆ ಪೂರ್ಣಗೊಂಡರೂ ನೀರಿಲ್ಲದೆ ವಿಫ‌ಲವಾಗಿವೆೆ. ಇದೆಲ್ಲವೂ ತೆರಿಗೆ ಹಣ ಪೋಲು ಮಾಡುವುದರ ಜತೆಗೆ ಪ್ರಕೃತಿಯ ಮೇಲೆ ಮಾಡುವ ಮಾರಣಾಂತಿಕ ಹಲ್ಲೆ ಎಂದು ದಿನೇಶ್‌ ಹೊಳ್ಳ ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next