Advertisement

ಉಪಚುನಾವಣೆ ಮುಗಿದ  ನಂತರ ನಾಯಕತ್ವ ಬದಲಾವಣೆ: ಯತ್ನಾಳ

09:50 PM Apr 08, 2021 | Team Udayavani |

ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಮುಗಿದ ಬಳಿಕ ಫಲಿತಾಂಶ ಬರುವುದರೊಳಗೆ ಅಂದರೆ ಏ. 30 ರೊಳಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ನಗರದ ಗಾಂಧಿ ಭವನದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಶರಣು ಶರಣಾರ್ಥಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮತ್ತೆ ದಿಲ್ಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಏ. 17 ರ ನಂತರ ನಾಯಕತ್ವವೇ ಬದಲಾಗುವುದರಿಂದ ದಿಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಏ.17 ಚುನಾವಣೆ ಮುಗಿಯುತ್ತಿದ್ದಂತೆಯೇ ನಾಯಕತ್ವ ಬದಲಾವಣೆ ಕೆಲಸ ಆರಂಭಗೊಳ್ಳಲಿದೆ. ನಿಗಮ, ಮಂಡಳಿಗಳಿಗೆ ನಿರ್ದೇಶಕರಾಗಲೂ ಅರ್ಹತೆ ಇಲ್ಲದವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವರು ಮುಖ್ಯಮಂತ್ರಿ ಆಗುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಆಡಳಿತ ನೀಡುತ್ತೇನೆ ಎಂದರು.

ನಾನೇ ರಾಜಾ ಹುಲಿ. ನನ್ನನ್ನು ಬಿಟ್ಟರೆ ಬೇರಾರೂ ನಾಯಕರೇ ಇಲ್ಲ ಎನ್ನುವವರಿಗೂ ಪಾದಯಾತ್ರೆ ಚಳಿ ಬಿಡಿಸಿದೆ.ಕರ್ನಾಟಕದಲ್ಲಿ ರಾಜಾ ಹುಲಿ ಒಂದೇ ಅಲ್ಲ. ಬಹಳಷ್ಟು ಹುಲಿ ಇವೆ ಎನ್ನುವ ಸಂದೇಶ ನೀಡಿದ್ದೇವೆ ಎಂದರು.

Advertisement

ಅಭಿಮಾನಿಯೊಬ್ಬರು ಪಂಚಾಕ್ಷರಿ ಎಂಬ ಕುದರೆ ಕೊಡುಗೆಯಾಗಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸದ ಬಸನಗೌಡ ಪಾಟೀಲ ಯತ್ನಾಳ, ಕುದರೆ ರಾಜನ ಸಂಕೇತ.  ಶುಭಸೂಚಕ ಕುದರೆ ಮೂಲಕ ನನಗೂ ಶುಭ ಸಿಕ್ಕಿದೆ. ಅಭಿಮಾನಿ ಮಾತ್ರ ಅಲ್ಲ. ಪಕ್ಷವೂ ನನಗೆ ಕುದರೆ ನೀಡಬೇಕಿದೆ. ಪ್ರಾಮಾಣಿಕತೆಯಿಂದ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ ಎಂದರು.

ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ 712 ಕಿ.ಮೀ ಪಾದಯಾತ್ರೆ ನಡೆಸಿ ಸಮಾಜದ ಸ್ವಾಮೀಜಿ ಎನಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಗೋಡಂಬಿ ತಿನ್ನುವ ಶ್ರೀಗಳು ನಮಗೆ ಬೇಕಿಲ್ಲ ಎಂದರು.

ನಿರಾಣಿ ನಾಲಾಯಕ್ ರಾಜಕಾರಣಿ: ಯತ್ನಾಳ :

ಚುನಾವಣೆಯಲ್ಲಿ ಗದ್ದಿಗೌಡ್ರನ ಸೋಲಿಸಲು ನನ್ನ ವಿರುದ್ಧ ಬೆಳ್ಳುಬ್ಬಿನ ನಿಲ್ಲಿಸಿ ಕೊಟ್ಯಾಟಂತರ ರೂ. ಖರ್ಚು ಮಾಡಿದ್ದ ಸಚಿವ ಮುರಗೇಶ ನಿರಾಣಿ ಪಕ್ಷ ವಿರೋಧಿ ಚಟುವಟಿಕೆ ಜೊತೆಗೆ ರಾಜಕಾರಣದಲ್ಲಿ ನಾಲಾಯಕ್ ಕೆಲಸ ಮಾಡಿದ್ದಾರೆ ಎಂದು ಬಸನಗೌಡಪಾಟೀಲ ಯತ್ನಾಳ ತಿರುಗೇಟು ನೀಡಿದರು.

ಪಾದಯಾತ್ರೆ ಸಂದರ್ಭದಲ್ಲಿ ಸಮುದಾಯವನ್ನು ಬೆಂಬಲಿಸಿದ್ದ ನಿರಾಣಿ ಸಚಿವ ಸ್ಥಾನ ಸಿಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next