Advertisement

ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಸೇವೆ ನಾಳೆಯಿಂದ ಪುನಾರಂಭ

06:25 AM Oct 11, 2018 | |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಸಕಲೇಶಪುರ-ಸುಬ್ರಮಣ್ಯ ಮಾರ್ಗದ ಘಾಟ್‌ ವಲಯದಲ್ಲಿ ಭೂಕುಸಿತದ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲುಗಳ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

Advertisement

ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16512/16514) ರೈಲು ಸೇವೆ ಪುನಾರಂಭಗೊಳ್ಳಲಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ (16515) ರೈಲು ಸೇವೆ ಅ.12ರಿಂದ, ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ (16516) ರೈಲು ಅ.13ರಿಂದ, ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌ (16575) ರೈಲು ಅ.11ರಿಂದ ಮತ್ತು ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌ (16576) ರೈಲು ಅ.14ರಿಂದ ಪುನಾರಂಭವಾಗಲಿದೆ. ಬೆಂಗಳೂರು ನಗರ-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ (16517/16523) ರೈಲು ಅ.14ರಿಂದ ಹಾಗೂ ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16518/16524) ರೈಲು ಅ.11ರಿಂದ ಸೇವೆ ಆರಂಭಿಸಲಿದೆ.

ಸಮಯ ಪರಿಷ್ಕರಣೆ: ಬೆಂಗಳೂರು-ಮೈಸೂರು ಟಿಪ್ಪು ಎಕ್ಸ್‌ಪ್ರೆಸ್‌ (12614) ರೈಲಿನ ಸಮಯವನ್ನು ಅ.13ರಿಂದ ಪರಿಷ್ಕರಿಸಲಾಗಿದೆ. ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ (ಮುಂಚೆ 3:00) ಹೊರಡಲಿದ್ದು, ಮೈಸೂರಿಗೆ ಸಂಜೆ 5:45ಕ್ಕೆ (ಮುಂಚೆ ಸಂಜೆ 5:30) ಬಂದು ಸೇರಲಿದೆ.

ರೈಲು ಸಂಚಾರ ರದ್ದು: ಕೇಂದ್ರೀಯ ರೈಲ್ವೆಯ ಸೊಲ್ಲಾಪುರ-ವಾಡಿ ವಲಯಗಳ ಮಧ್ಯೆ ನಾಗನ್ಸೂರ-ಬರೋಟಿ ನಿಲ್ದಾಣಗಳ ಮಧ್ಯೆ ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಪ್ರಯುಕ್ತ ಕೆಲ ರೈಲುಗಳ ಸೇವೆ ರದ್ದುಪಡಿಸಲಾಗಿದೆ. ಅ.11ರಂದು ಹೈದರಾಬಾದ್‌-ವಿಜಯಪುರ ಪ್ಯಾಸೆಂಜರ್‌ (57130), ಅ.11 ಹಾಗೂ 12ರಂದು ವಿಜಯಪುರ-ಹೈದರಾಬಾದ್‌ ಪ್ಯಾಸೆಂಜರ್‌ (57129), ಅ.11ರಿಂದ 15ರವರೆಗೆ ರಾಯಚೂರು-ಹೈದರಾಬಾದ್‌ ಪ್ಯಾಸೆಂಜರ್‌ (57134), ಅ.11ರಿಂದ 15ರವರೆಗೆ ವಿಜಯಪುರ-ರಾಯಚೂರ ಪ್ಯಾಸೆಂಜರ್‌ (57133) ರೈಲುಗಳ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next