Advertisement

Train ಯಶವಂತಪುರ-ಮಂಗಳೂರು ಸೆಂಟ್ರಲ್‌ ರೈಲು: ಕಣ್ಣೂರಿನಿಂದ ಕೋಯಿಕ್ಕೋಡ್‌ ವರೆಗೆ ವಿಸ್ತರಣೆ

12:40 AM Jan 31, 2024 | Team Udayavani |

ಮಂಗಳೂರು: ಯಶವಂತಪುರ – ಮಂಗಳೂರು ಸೆಂಟ್ರಲ್‌ (ಕಣ್ಣೂರು) ರಾತ್ರಿ ರೈಲು ಕೇರಳದಲ್ಲಿ ಎರಡನೇ ಬಾರಿಗೆ ವಿಸ್ತರಣೆಗೊಂಡಿದ್ದು, ಇದೀಗ ಕಣ್ಣೂರಿನಿಂದ ಕೋಯಿಕ್ಕೋಡ್‌ ವರೆಗೆ ವಿಸ್ತರಣೆಯಾಗಿದೆ.

Advertisement

ನಂ. 16511/512 ಬೆಂಗಳೂರು – ಕಣ್ಣೂರು – ಬೆಂಗಳೂರು ರಾತ್ರಿ ರೈಲನ್ನು ಕೋಯಿಕ್ಕೋಡ್‌ ವರೆಗೆ ವಿಸ್ತರಿಸುವ ಕುರಿತ ದಕ್ಷಿಣ ರೈಲ್ವೇಯ ಪ್ರಸ್ತಾವನೆಗೆ ರೈಲ್ವೇ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈಗ ಇರುವ ವೇಳಾಪಟ್ಟಿಯಂತೆ ರೈಲು ಸಂಚರಿಸಲಿದ್ದು, ನಂ. 16511 ರೈಲು ಕೋಯಿಕ್ಕೋಡ್‌ಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಈ ರೈಲು ತಲಶ್ಶೇರಿ, ವಡಕರ ಮತ್ತು ಕ್ವಿಲಾಂಡಿಯಲ್ಲಿ ನಿಲುಗಡೆಯಾಗಲಿದೆ. 16512 ರೈಲು ಸಂಜೆ 3.30ಕ್ಕೆ ಕೋಯಿಕ್ಕೋಡ್‌ನಿಂದ ಹೊರಡಲಿದೆ.

ರೈಲನ್ನು ವಿಸ್ತರಿಸುವುದಿಲ್ಲ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ಸಂಸದ ನಳಿನ್‌ ಕುಮಾರ್‌ ಅವರಿಗೆ ನೀಡಿರುವ ಭರವಸೆಯ ಹೊರತಾಗಿಯೂ ಈ ವಿಸ್ತರಣೆ ಪ್ರಕ್ರಿಯೆ ನಡೆದಿದೆ.

2007ರಲ್ಲಿ ಆರಂಭವಾಗಿದ್ದು, ಯಶವಂತಪುರ – ಮಂಗಳೂರು ಸೆಂಟ್ರಲ್‌ ರೈಲು ಮೊದಲನೇ ಬಾರಿ ರೈಲು 2009ರಲ್ಲಿ ಮಂಗಳೂರಿನಿಂದ ಕಣ್ಣೂರು ವರೆಗೆ ವಿಸ್ತರಣೆಯಾಗಿತ್ತು. ಕಾರವಾರಕ್ಕೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಹೊರತಾಗಿಯೂ ಈ ರೈಲನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು.

ವಿಸ್ತರಣೆಗೆ ವಿರೋಧ
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಸಮಿತಿ ಈ ವಿಸ್ತರಣೆಯನ್ನು ವಿರೋಧಿಸಿದ್ದು, ಇದು ಕರಾವಳಿಯ ಪ್ರಯಾಣಿಕರಿಗೆ ಸೀಟ್‌ ಅಲಭ್ಯತೆಗೆ ಕಾರಣವಾಗಲಿದೆ. ಕೇರಳಿಗರು ಬೆಂಗಳೂರಿಗೆ ತೆರಳಲು ಇದೇ ರೈಲನ್ನು ಅವಲಂಬಿಸುವ ಕಾರಣ, ಕಾದಿರಿಸದ ಸೀಟ್‌ಗಳಿರುವ ಬೋಗಿಗಳು ಮಂಗಳೂರು ತಲುಪುವಾಗಲೇ ಭರ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next