Advertisement
“ಹೌದು ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೇವೆ. ಅದರ ಬಗ್ಗೆ ಗಮನಿಸಬೇಕಿದ್ದು, ತಪ್ಪನ್ನು ಸರಿಪಡಿಸಬೇಕಿದೆ’ ಎಂದು ಹೇಳಿದ್ದಾರೆ. ಇದುವರೆಗೂ ಕೇಜ್ರಿವಾಲ್ ಅವರು ಎಲ್ಲ ವೇದಿಕೆಗಳಲ್ಲೂ ಪಕ್ಷದ ಸೋಲಿಗೆ ಮತಯಂತ್ರ (ಇವಿಎಂ)ವೇ ಕಾರಣ ಎಂದು ದೂರುತ್ತಾ ಬಂದಿದ್ದರು. ಆದರೆ, ಸೋಲಿನ ಬಳಿಕ ಕೇಜ್ರಿವಾಲ್ ಅವರು ಪ್ರತಿ ಕ್ಷೇತ್ರದ ಶಾಸಕರನ್ನು, ಕಾರ್ಯಕರ್ತರನ್ನು ಭೇಟಿಧಿಯಾಗಿದ್ದು, ಆ ಬಳಿಕ ಅವರಿಂದ “ತಪ್ಪು ಮಾಡಿದ್ದೇವೆ’ ಎಂಬ ಹೇಳಿಕೆ ಬಂದಿದೆ. ಸಿಸೋಡಿಯಾ ಟ್ವಿಟರ್ ಖಾತೆ ಹ್ಯಾಕ್: ಏತನ್ಮಧ್ಯೆ, ದಿಲ್ಲಿ ಉಪ ಮುಖ್ಯಮಂತ್ರಿ, ಮನೀಶ್ ಸಿಸೋಡಿಯಾ, ತಮ್ಮ ಟ್ವೀಟರ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರ ವಿರುದ್ಧ ಪೋಸ್ಟ್ಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. ಅಣ್ಣಾ ವಿರುದ್ಧ ಅಂತಹ ಹೇಳಿಕೆಗಳನ್ನು ನಾನು ನೀಡಿಲ್ಲ. ಅವರ ಬಗ್ಗೆ ಅಪಾರ ಗೌರವವಿದೆ ಎಂದಿದ್ದಾರೆ.