Advertisement

ಇನ್ನೆರಡು ದಿನಗಳಲ್ಲಿ ಯೆಸ್ ಬ್ಯಾಂಕ್ ಮೇಲಿನ ಆರ್.ಬಿ.ಐ. ನಿರ್ಬಂಧ ತೆರವು

10:16 AM Mar 17, 2020 | Hari Prasad |

ಮುಂಬಯಿ: ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದೆಣಿಸಿಕೊಂಡಿದ್ದ ಯೆಸ್ ಬ್ಯಾಂಕ್ ನ ಆರ್ಥಿಕ ಚಟುವಟಿಕೆಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿರ್ಬಂಧವನ್ನು ಮಾರ್ಚ್ 18ರ ಸಾಯಂಕಾಲ 6 ಗಂಟೆಗೆ ತೆರವುಗೊಳಿಸಲಾಗುವುದು ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ತಿಳಿಸಿದ್ದಾರೆ.

Advertisement

ಈ ಬ್ಯಾಂಕಿನಲ್ಲಿ ಠೇವಣಿದಾರರು ಇರಿಸಿರುವ ಠೇವಣಿ ಹಣದ ಕುರಿತಾಗಿ ಯಾವುದೇ ಭಯ ಬೇಡ ಎಂದು ರಿಸರ್ವ್ ಬ್ಯಾಂಕಿನ ಗವರ್ನರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲು ಕೆಲವೊಂದು ಸೂತ್ರಗಳನ್ನು ಈಗಾಗಲೇ ರೂಪಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮಾರ್ಚ್ 26ರಂದು ಯೆಸ್ ಬ್ಯಾಂಕಿನ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಕೊಳ್ಳಲಿದೆ ಎಂಬ ಮಾಹಿತಿಯನ್ನೂ ಸಹ ರಿಸರ್ವ್ ಬ್ಯಾಂಕ್ ಗವರ್ನರ್ ಇದೇ ಸಂದರ್ಭದಲ್ಲಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next