Advertisement

ಎಲ್ಲೂರು  ಶಕ್ತಿಕೇಂದ್ರ ರಚನೆಧಿಬಿಜೆಪಿ ಕಾರ್ಯಕಾರಿಣಿ ಸಭೆ

03:59 PM Mar 18, 2017 | Team Udayavani |

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಬಡಾ, ಎಲ್ಲೂರು, ಬೆಳಪು, ಮುದರಂಗಡಿ, ಕುತ್ಯಾರು, ಮಜೂರು ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡ ಎಲ್ಲೂರು ಶಕ್ತಿಕೇಂದ್ರದ ಸಮಿತಿ ರಚನೆ ಬಗ್ಗೆ ಬಿಜೆಪಿ ಕಾರ್ಯಕಾರಿಣಿ ಸಭೆಯು ಕ್ಷೇತ್ರ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

Advertisement

ಎಲ್ಲೂರು ಶಕ್ತಿಕೇಂದ್ರದ ನೂತನ ಅಧ್ಯಕ್ಷರಾಗಿ ನಾಗೇಶ್‌ ಭಟ್‌ ಎಲ್ಲೂರು, ಪ್ರ. ಕಾರ್ಯದರ್ಶಿಯಾಗಿ ಚಂದ್ರಶೇಖರ್‌ ಕೋಟ್ಯಾನ್‌ ಉಚ್ಚಿಲ, ಮಹಿಳಾ ಮೋರ್ಛಾ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಲತಾ ಆಚಾರ್ಯ ಕುತ್ಯಾರು, ಪ್ರ. ಕಾರ್ಯದರ್ಶಿಯಾಗಿ ಶಕುಂತಳಾ ಉಚ್ಚಿಲ, ಯುವ ಮೋರ್ಚಾ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪ್ರಕಾಶ್‌ ಶೆಟ್ಟಿ ಮುದರಂಗಡಿ, ಪ್ರ. ಕಾರ್ಯದರ್ಶಿಯಾಗಿ ನವೀನ್‌ ಪುತ್ರನ್‌ ಉಚ್ಚಿಲ ಮತ್ತು ಹಿಂದುಳಿದ ಮೋರ್ಛಾ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸುರೇಶ್‌ ದೇವಾಡಿಗ ಬೆಳಪು, ಪ್ರಧಾನ ಕಾರ್ಯದರ್ಶಿಯಾಗಿ ರಘುರಾಮ ನಾಯಕ್‌ ಮುದರಂಗಡಿ ಇವರನ್ನು ನೇಮಕ ಮಾಡಲಾಯಿತು.

ಕ್ಷೇತ್ರ ಪ್ರಭಾರಿ ಸುರೇಶ್‌ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿಲ್ಲಾ ಪ್ರ. ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ ಸಂಘಟನಾತ್ಮಕ ವಿಷಯಗಳ ಬಗ್ಗೆ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ರಮಾಕಾಂತ ದೇವಾಡಿಗ, ಕ್ಷೇತ್ರ ಪ್ರ. ಕಾರ್ಯದರ್ಶಿ ಕೆ. ಮುರಲೀಧರ ಪೈ, ಜಿ. ಪಂ. ಸದಸ್ಯೆ ಶಿಲ್ಪ ಜಿ. ಸುವರ್ಣ, ಹಿಂದುಳಿದ ಮೋರ್ಛಾ ಕ್ಷೇತ್ರಾಧ್ಯಕ್ಷ ನಿತಿನ್‌ ವಿ. ಶೇರಿಗಾರ್‌, ಯುವ ಮೋರ್ಛಾ ಕ್ಷೇತ್ರಾಧ್ಯಕ್ಷ ಪ್ರವೀಣ್‌ ಕುಮಾರ್‌, ಗ್ರಾ. ಪಂ. ಅಧ್ಯಕ್ಷರಾದ ನಾಗರತ್ನ ಕರ್ಕೇರ, ವಸಂತಿ ಮಧ್ವರಾಜ್‌, ಜಯಂತ್‌ ಭಟ್‌, ಸಂದೀಪ್‌, ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರತೀಕ್‌ ಶೆಟ್ಟಿ, ಉದಯ ಕುಮಾರ್‌, ಕರುಣಾಕರ ಶೆಟ್ಟಿ, ಹರಿಣಾಕ್ಷ ಶೆಟ್ಟಿ, ಶಿವರಾಮ ಭಂಡಾರಿ, ಚಂದ್ರಶೇಖರ್‌ ಶೆಟ್ಟಿ, ರವೀಂದ್ರ ಪ್ರಭು, ಇಂದಿರಾ ಶೆಟ್ಟಿ, ರೂಪಾ ಆಚಾರ್ಯ, ಪ್ರಸಾದ್‌ ಶೆಟ್ಟಿ ವಳದೂರು, ಪ್ರಸನ್ನ ಶೆಟ್ಟಿ ಮಜೂರು, ಸುರೇಂದ್ರ ಪಣಿಯೂರು, ಕೊರಗ ಬೆಳಪು, ಶಂಕರ ಬೆಳಪು, ಎಲ್ಲೂರು ರವಿ ಕೋಟ್ಯಾನ್‌, ವಸಂತ ದೇವಾಡಿಗ, ವಸಂತ ದೇಜಾಡಿ ಮೊದಲಾದವರು ಉಪಸ್ಥಿತರಿದ್ದರು.ಎಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ಸತೀಶ್‌ ಶೆಟ್ಟಿ ಗುಡ್ಡೆಚಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next