“ಯೆಲ್ಲೋ ಬೋರ್ಡ್’- ಹೀಗೊಂದು ಸಿನಿಮಾ ಬಗ್ಗೆ ನೀವುಕೇಳಿರಬಹುದು. ಪ್ರದೀಪ್ ನಾಯಕರಾಗಿರುವ ಈ ಚಿತ್ರ ಈಗ ಪ್ರೀ-ಪ್ರೊಡಕ್ಷನ್‌ಕೆಲಸಗಳ ಮುಗಿಸಿ ತೆರೆಗೆ ಬರಲು ರೆಡಿಯಾಗಿದೆ. ಇತ್ತೀಚೆಗೆ ಮಾಧ್ಯಮದ ಮುಂದೆ ಬಂದು ಚಿತ್ರದ ಹಾಡು ಹಾಗೂ ಕೆಲವು ಝಲಕ್ ಅನ್ನು ತೋರಿಸಿತು. “ವಿಂಟೇಜ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ತ್ರಿಲೋಕ್ ರೆಡ್ಡಿ ನಿರ್ದೇಶಿಸಿದ್ದಾರೆ.
ಚಿತ್ರದ ಬಗ್ಗೆ ಬಗ್ಗೆ ಮಾತನಾಡುವ ನಿರ್ದೇಶಕ ತ್ರಿಲೋಕ್ ರೆಡ್ಡಿ, “ನಾನು ಮೂಲತಃ ಐಟಿ ಕ್ಷೇತ್ರದವನಾಗಿದ್ದರಿಂದ, ಮೊದಲಿನಿಂದಲೂ ಕ್ಯಾಬ್-ಟ್ಯಾಕ್ಸಿಗಳಲ್ಲಿ ಹೆಚ್ಚಾಗಿ ಟ್ರಾವೆಲ್ ಮಾಡುತ್ತಿದ್ದೆ. ಪ್ರತಿ ಬಾರಿ ಟ್ರಾವೆಲ್ ಮಾಡುವಾಗಲೂ, ಅದರ ಡ್ರೈವರ್‌ಗಳ ಜೊತೆ ಮಾತನಾಡುವಾಗ ಅವರು ಹೊಸಥರದ ಎಕ್ಸ್‌ಪೀರಿಯನ್ಸ್‌ಗಳನ್ನ ಹೇಳಿಕೊಳ್ಳುತ್ತಿದ್ದರು. ಹೀಗೆ ಹತ್ತಾರು ಡ್ರೈವರ್‌ಗಳು ಹೇಳಿದ ಅವರ ಅನುಭವ, ನಾನು ಕಣ್ಣಾರೆ ಕಂಡ ಘಟನೆಗಳೇ “ಯೆಲ್ಲೋ ಬೋರ್ಡ್’ಕಥೆ ಹುಟ್ಟಲು, ಸಿನಿಮಾ ಮಾಡಲು ಕಾರಣವಾಯ್ತು’ ಎನ್ನುತ್ತಾರೆ.
ಕನ್ನಡದಲ್ಲಿ “ಜಾಲಿಡೇಸ್’, “ಟೈಗರ್’ ಚಿತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ಪ್ರದೀಪ್ “ಯೆಲ್ಲೋ ಬೋರ್ಡ್’ ಚಿತ್ರದಲ್ಲಿ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಡ್ರೈವರ್ ಪಾತ್ರ ಮಾಡಿರುವ ಪ್ರದೀಪ್ ಪಾತ್ರಕ್ಕಾಗಿ ಸಾಕಷ್ಟು ಬಾರಿ ಕ್ಯಾಬ್-ಟ್ಯಾಕ್ಸಿಗಳಲ್ಲಿ ಓಡಾಡಿದ್ದಾರಂತೆ. ಇಡೀ ಸಿನಿಮಾದ ಕಥೆ ಡ್ರೈವರ್ ಒಬ್ಬನ ಸುತ್ತ ನಡೆಯಲಿದೆಯಂತೆ. ಹಾಗಾಗಿ ಡ್ರೈವರ್‌ಗಳ ಲೈಫ್ಸ್ಟೈಲ್, ಅವರ ಮಾತುಕತೆ, ಬಾಡಿ ಲಾಂಗ್ವೇಜ್, ಮ್ಯಾನರಿಸಂ ತಿಳಿದುಕೊಳ್ಳುವ ಸಲುವಾಗಿ ಪ್ರದೀಪ್ ಅನೇಕ ಬಾರಿ ಕ್ಯಾಬ್-ಟ್ಯಾಕ್ಸಿಗಳಲ್ಲಿ ಓಡಾಟ ಮಾಡುತ್ತಿದ್ದರು. ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡಿದ್ದ ಪ್ರದೀಪ್‌ಗೆ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ:ಇಂದು ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಮರುಬಿಡುಗಡೆ
ಚಿತ್ರದಲ್ಲಿ ಅಹಲ್ಯಾ ಸುರೇಶ್ ನಾಯಕಿ. ಉಳಿದಂತೆ ಸ್ನೇಹಾ, ಸಾಧುಕೋಕಿಲ, ಅಮಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಅಹಲ್ಯಾ ಚಿತ್ರೀಕರಣದ ವೇಳೆ ಕಾರು ಓಡಿಸುವ ದೃಶ್ಯ ಹಾಗೂ ಆ ಸಮಯದಲ್ಲಾದ ಟೆನÒನ್ ಬಗ್ಗೆ ಹೇಳಿಕೊಂಡರು
ಚಿತ್ರಕ್ಕೆ ಪ್ರವೀಣ್ ಎಸ್. ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅಧ್ವಿಕ್ ಸಂಗೀತ ಸಂಯೋಜಿಸಿದ್ದಾರೆ. ರಘು ದೀಕ್ಷಿತ್, ಸಂಜಿತ್ ಹೆಗ್ಡೆ, ಪುನೀತ್ ರಾಜಮಾರ್, ಸೊನು ನಿಗಮ್, ವಿಜಯ ಪ್ರಕಾಶ್, ಪಾಲಕ್ ಮುಚ್ಚಲ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ರವಿ ಪ್ರಕಾಶ್ ರೈ