Advertisement

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

06:38 PM May 16, 2024 | Team Udayavani |

ಯಲ್ಲಾಪುರ : ಪಟ್ಟಣದಲ್ಲಿರುವ ವೈಟಿಎಸ್ಸೆಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮೇಲೆ ಬೃಹತ್ ಮರವೊಂದು‌ ಬಿದ್ದು ಕಟ್ಟಡ ಜಖಂಗೊಂಡಿದೆ. ಕಟ್ಟಡದ ಹಿಂಭಾಗದಲ್ಲಿದ್ದ ಶೌಚಾಲಯವೂ ಸಂಪೂರ್ಣ ಜಖಂಗೊಂಡಿದೆ.

Advertisement

ಶಾಲಾ ಕೊಠಡಿಯೊಂದರ ಗೋಡೆ ಕುಸಿದಿದೆ.ಮೇಲ್ಛಾವಣಿ ನೆಲಕಪ್ಪಳಿಸಿದೆ.ಕೊಠಡಿಯೊಳಗಿದ್ದ ಪೀಠೋಪಕರಣಗಳು ಜಖಂಗೊಂಡಿದೆ.ಕಟ್ಟಡದ ಮಧ್ಯಭಾಗದ ಮೇಲೆ ಬಿದ್ದಿರುವುದರಿಂದ ಆಚೆ ಈಚೆ ಹೊಂದಿಕೊಂಡಿರುವ ಕೊಠಡಿಗಳಿಗೂ ಹಾನಿಯಾಗಿದೆ. ರಜೆಯಾಗಿದ್ದರಿಂದ ಅದೃಷ್ಟವಶಾತ್  ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next