ಯಳಂದೂರು: ಜಿಲ್ಲೆಯಲ್ಲಿ ನಾಲ್ಕು ದಿನಗಳ ಸಂಪೂರ್ಣ ಲಾಕ್‌ಡೌನ್‌ನ ತರುವಾಯಸೋಮವಾರ ದಿನಸಿ ಸೇರಿದಂತೆ ಅಗತ್ಯ ವಸ್ತು ಗಳನ್ನುಕೊಂಡೊಕೊಳ್ಳಲು ತಾಲೂಕಿನಾದ್ಯಂತ ಸಾರ್ವಜನಿಕರು ಅಂಗಡಿಗಳಿಗೆ ಮುಗಿಬಿದ್ದರು.
ಜಿಲ್ಲೆಯಲ್ಲಿ ಸೋಮವಾರದಿಂದ ಬುಧವಾರದ ವರೆಗೆ ವಾರದ ಮೂರು ದಿನಗಳುಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ರವರೆಗೆ ಅನುಮತಿ ನೀಡಲಾಗಿದೆ. ಹಾಗಾಗಿಮೊದಲನೆ ದಿನವಾದ ಸೋಮವಾರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅಂಗಡಿಗಳನ್ನು ತೆರೆಯಲಾಗಿತ್ತು. ಸಾರ್ವಜನಿಕರು ಬೆಳಗ್ಗೆಯಿಂದಲೇ ಖರೀದಿಗೆ ಮುಗಿಬಿದ್ದರು.
ದಿನಸಿ ಅಂಗಡಿ, ಬೇಕರಿ, ತರಕಾರಿ, ಅಂಗಡಿಗಳ ಜನ ದಟ್ಟಣೆ ಅಧಿಕವಾಗಿತ್ತು.ಪಟ್ಟಣದ ಬಳೇಪೇಟೆ, ದೊಡ್ಡ ಅಂಗಡಿಬೀದಿ,ಬಸ್ ನಿಲ್ದಾಣ, ಹಳೆ ಅಂಚೆಕಚೇರಿ ರಸ್ತೆಗಳಲ್ಲಿ ಜನಜಂಗುಳಿ ಅಧಿಕವಾಗಿತ್ತು. ಅಲ್ಲದೆಮದ್ಯದ ಅಂಗಡಿಗಳಿಗೂ ಪಾನಪ್ರಿಯರು ಮುಗಿಬಿದ್ದುಮದ್ಯ ಖರೀದಿ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿಕಾಣಸಿಗುತ್ತಿತ್ತು. ಜನರು ಗುಂಪುಗೂಡು ವುದನ್ನು ತಡೆಯಲು ಪೊಲೀಸರು ಹಾಗೂಪಟ್ಟಣ ಪಂಚಾಯಿತಿ ಇಲಾಖೆಯ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ಅಲ್ಲಲ್ಲಿ ಜಾಗೃತಿಮೂಡಿಸುತ್ತಿದ್ದರು.
ಇದರ ನಡುವೆಯೂ ಜನರು ಗುಂಪುಗೂಡುತ್ತಿರುವುದನ್ನು ಕಂಡ ಪೊಲೀಸರು ಇವರನ್ನು ಚದುರಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು.ಕೆಲ ಅಂಗಡಿಗಳು 10 ಗಂಟೆಯ ನಂತರವೂ ಬಾಗಿಲು ತೆರೆದಿರುವುದನ್ನು ಕಂಡುಕೆಂಡಾಮಂಡಲವಾದ ಪೊಲೀಸರು ತಮ್ಮಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯವರ ಸಹಯೋಗದೊಂದಿಗೆ ಬಾಗಿಲುಗಳನ್ನು ಮುಚ್ಚಿಸುತ್ತಿದ್ದರು. ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೂ ಸಹಪೊಲೀಸರು ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಕ್ಕಿತು