Advertisement

ಕಳಶ ಹೊತ್ತು ಶಾಲೆಗೆ ಬಂದ ಚಿಣ್ಣರು   

02:12 PM Oct 26, 2021 | Team Udayavani |

ಯಳಂದೂರು: ಕೋವಿಡ್‌ ನಂತರ ಸೋಮವಾರ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳು ಆರಂಭಗೊಂ ಡಿದ್ದು ತಾಲೂಕಿನಲ್ಲೂ ಉತ್ತಮ ಸ್ಪಂದನೆ ದೊರಕಿದೆ.

Advertisement

ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗೆ ಭೌತಿಕ ತರಗತಿಗಳನ್ನು ಕೋವಿಡ್‌ ನಿಯಮಾನುಸಾರ ಆರಂಭಿಸಲಾಗಿದೆ. ಮೊದಲನೆ ದಿನವಾರ ಸೋಮವಾರ ವಿವಿಧ ಶಾಲೆಗಳಲ್ಲಿ ಆತ್ಮೀಯವಾಗಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡರು. ತಾಲೂಕಿನ ಹೊನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಕಳಶ ಹೊತ್ತು ಮೆರವಣಿಗೆ ಮೂಲಕ ಶಾಲೆಗೆ ಬಂದರು.

ದಾಸನಹುಂಡಿ ಶಾಲೆಯಲ್ಲಿ ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು. ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಸಿಹಿ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡರು.

ವಾರ ಶಾಲಾ ಸಮಯ ಬದಲು: ಈಗ 1 ರಿಂದ 5 ನೇ ತರಗತಿ ಆರಂಭಗೊಂಡಿದ್ದು ಮಕ್ಕಳು ಇಲ್ಲಿಗೆ ಒಗ್ಗಿಕೊಳ್ಳುವ ಸಲುವಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಭೌತಿಕ ತರಗತಿ ನಡೆಯಲಿವೆ.

ವಾರದವರೆಗೆ ಮಾತ್ರ ಈ ಸಮಯ ನಿಗದಿಯಾಗಿದ್ದು ಮುಂದಿನ ವಾರದಿಂದ ಪೂರ್ಣ ತರಗತಿ ಆರಂಭಗೊಳ್ಳಲಿವೆ. ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ಇದನ್ನು ಹೊರತುಪಡಿಸಿ 6 ರಿಂದ 10 ನೇ ತರಗತಿವಿದ್ಯಾರ್ಥಿಗಳಿಗೆ ಪೂರ್ತಿ ತರಗತಿ ನಡೆಯಲಿದ್ದು ಮಧ್ಯಾಹ್ನದ ಬಿಸಿಯೂಟವೂ ನೀಡಲಾಗುತ್ತಿದೆ.

Advertisement

ಶೇ.64.62 ಹಾಜರಾತಿ: ಸೋಮವಾರದಿಂದ ಆರಂಭವಾದ ತರಗತಿಗಳಿಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ 4,582 ಇದ್ದು ಇದರಲ್ಲಿ 2,961ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಇವರ ಹಾಜರಾತಿ ಶೇ.64.62 ರಷ್ಟಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರಿ ಮಾತ ನಾಡಿ, ಕೋವಿಡ್‌ ನಿಯಮಾನುಸಾರ ಪ್ರತಿ ಶಾಲಾ ಕೊಠಡಿಯನ್ನು ಸ್ಯಾನಿಟೈಜ್‌ ಮಾಡಿ ವಿದ್ಯಾರ್ಥಿಗಳಿಗೆಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗಿದೆ. ಇವರಿಗೆ ತರಗತಿಯಲ್ಲಿ ಒಂದು ವಾರದ ತನಕ ಪಠ್ಯೇತರ ಚಟುವಟಿಕೆ ನಡೆಯಲಿದೆ. ಶಾಲೆಗೆ ಮಕ್ಕಳನ್ನು ಒಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ವಹಿಸಲಾಗಿದ್ದು ಮುಂದಿನ ವಾರದಿಂದ ಪಠ್ಯ ಚಟುವಟಿಕೆ ನಡೆಯಲಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next