Advertisement

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

11:24 PM May 28, 2020 | Hari Prasad |

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದವರು ಎ.ಒ ಹ್ಯೂಮ್ ಎನ್ನುವ ವಿದೇಶಿ ವ್ಯಕ್ತಿ, ಹೀಗಾಗಿ ಕಾಂಗ್ರೆಸ್ ಇನ್ನೂ ಹೊರ ದೇಶದವರ ದಾಸ್ಯದಲ್ಲೇ ಇದೆ.

Advertisement

ಹೀಗೆಂದು ಲೇವಡಿ ಮಾಡಿದವರು ಯಲಹಂಕ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ಎಸ್ ಆರ್ ವಿಶ್ವನಾಥ್ ಅವರು.

ಯಲಹಂಕ ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಮಾತಿನ ಸಮರ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ.

‘ಈ ಹಿಂದೆ ಇಂದಿರಾ ಕ್ಯಾಂಟೀನ್ ಅಂತ ಹೆಸರಿಟ್ಟಾಗ ನಾವು ವಿರೋಧ ಮಾಡಿದ್ದೆವಾ? ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸೇನಾನಿಯ ಹೆಸರಿಡಬಾರದೇ? ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದೆ ಹೋಗಿದೆ ಅಷ್ಟೆ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟೇ ತೀರುತ್ತೇವೆ. ಲಾಕ್ ಡೌನ್ ಇರೋ ಕಾರಣ ಹಾಗೂ ಕಾರ್ಯಕ್ರಮಕ್ಕೆ ಜಾಸ್ತಿ ಜನ ಸೇರಬಹುದು ಎಂಬ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ’ ಎಂದು ವಿಶ್ವನಾಥ್ ತಿಳಿಸಿದರು.

ಈ ಕುರಿತಾಗಿ ಈಗಾಗಲೇ ಬಿಬಿಎಂಪಿಯಲ್ಲಿ ಇದು ಅನುಮೋದನೆಗೊಂಡಿದೆ. ಕುಮಾರಸ್ವಾಮಿಯವರು ವೀರ ಸ್ವಾತಂತ್ರ್ಯ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ. ನಿಮ್ಮ ಮನೆಯವರದ್ದೇನಾದ್ರೂ ಹೆಸರಿಡಬೇಕು ಅಂದರೆ ಹೇಳಿ ಮುಂದೆ ಅವರ ಹೆಸರನ್ನೂ ಇಡ್ತೀವಿ

Advertisement

ಮಣ್ಣಿನ ಮಕ್ಕಳ ಮೇಲೆ ನಮಗೆ ಗೌರವ ಇದೆ ನೀವು ಎಷ್ಟೆ ಹೋರಾಟ ಮಾಡಿದರೂ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡೋದು ತಡೆಯೋಕೆ ಆಗಲ್ಲ, ಅದೇನು ಹೋರಾಟ ಮಾಡ್ಕೊತಿರೋ ಮಾಡ್ಕೊಳ್ಳಿ’ ಎಂದು ವಿಶ್ವನಾಥ್ ಅವರು ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.

‘ಕುಮಾರಸ್ವಾಮಿಯವರಿಗೆ ಮೊದಲಿಂದಲೂ ಹಿಟ್ ಆಂಡ್ ರನ್ ಮಾಡಿ ರೂಢಿಯಾಗಿದೆ. ಕೋವಿಡ್ ವಿಚಾರದಲ್ಲಿ ಬರೀ ಹೇಳಿಕೆಗಳನ್ನು ನೀಡ್ತಾ ಬಂದಿದ್ದೀರಿ, ಸರಕಾರಕ್ಕೆ ಎಲ್ಲಿ ಸಹಕಾರ ಕೊಟ್ಟಿದ್ದೀರಿ? ಕೋವಿಡ್ ಭಯದಿಂದ ಕುಮಾರಸ್ವಾಮಿ ಹೊರಗೆ ಬಂದೇ ಇಲ್ಲ. ಆದರೆ ನಮ್ಮ ಇಡೀ ಸರ್ಕಾರ ಹಾಗೂ ಸಂಪೂರ್ಣ ಮಂತ್ರಿ ಮಂಡಲ ಈ ಮಾರಕ ವೈರಸ್ ವಿರುದ್ಧ ಹೋರಾಟಕ್ಕೆ ನಿಂತಿದೆ ಎಂದು ಕುಮಾರಸ್ವಾಮಿ ವಿರುದ್ದ ಎಸ್ ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next