Advertisement
ಇಲ್ಲಿನ ದೇವಸ್ಥಾನದ ಹೆಣ್ಣಾನೆ ಗಂಗಾ (76) ಅನಾರೋಗ್ಯದಿಂದ ಇಹಲೋಕ ತ್ಯಜಿಸಿದೆ.
Related Articles
Advertisement
ಮಗು ಬಲಿ ಪಡೆದ ಆನೆ : ದೇವಾಲಯದ ಸಮೀಪದಲ್ಲಿ ಪ್ರತ್ಯೇಕವಾಗಿ ಶೆಡ್ ನಿರ್ಮಾಣ ಮಾಡಿ ಗಂಗಾಳನ್ನು ಪೋಷಣೆ ಮಾಡಲಾಗುತ್ತಿತ್ತು. ಆದರೆ ಹಾಸನ ಜಿಲ್ಲೆ ಅರಕಲುಗೂಡು ತಾಲೂಕಿನ ಬಾಲಕ ಸಚಿನ್ ಗಂಗಾಳಿಗೆ ಬಾಳೇಹಣ್ಣು ತಿನ್ನಿಸಲು ಮುಂದಾದ ವೇಳೆಯಲ್ಲಿ ಆನೆ ಗಂಗಾ ಬಾಲಕನನ್ನು ಸೊಂಡಲಿನಲ್ಲಿ ಎಳೆದುಕೊಂಡು ಬಲಿ ತೆಗೆದುಕೊಂಡಳು.
ದೇವಾಲಯದ ಬಳಿ ಅಂತ್ಯಸಂಸ್ಕಾರಕ್ಕೆ ಆಗ್ರಹ : ಗಂಗಾ ಕಳೆದ 28 ವರ್ಷಗಳಿಂದ ಎಡೆಯೂರಿನ ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರನ್ನು ಆಕರ್ಷಿಸುತ್ತಾ ತನ್ನದೆಯಾದ ಸೇವೆ ಸಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಹೆಸರುಗಳಿಸಿದ್ದಳು.
ಗಂಗಾಳನ್ನು ಕಂಡರೇ ಇಲ್ಲಿನ ಭಕ್ತಾಧಿಗಳಿಗೆ ಎಲ್ಲಿಲ್ಲದ ಪ್ರೀತಿ ಇತ್ತು ಆದರೆ ಗಂಗಾ ಮೃತಪಟ್ಟ ಸುದ್ದಿ ತಿಳಿದ ಇಲ್ಲಿನ ದೇವಾಲಯದ ಅರ್ಚಕರು, ಸಿಬ್ಬಂದಿಗಳು ಮತ್ತು ಭಕ್ತಾಧಿಗಳಲ್ಲಿ ತುಂಬಲಾರದ ನೋವು ಉಂಟಾಗಿದೆ. ಗಂಗಾಳ ಅಂತ್ಯಕ್ರಿಯೆ, ಮಾಲೂರು ತಾಲೂಕು ಲಕ್ಷ್ಮಿಸಾಗರ ಮೀಸಲು ಅರಣ್ಯ ಪ್ರದೇಶದಲ್ಲಿ ನೆರವೇರಿಸುತ್ತಿರುವುದು ಭಕ್ತಾಧಿಗಳಿಗೆ ಬೇಸರದ ಸಂಗತಿಯಾಗಿದೆ. ಗಂಗಾಳನ್ನು ಶ್ರೀ ಕ್ಷೇತ್ರದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಲ್ಲವಾದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ದೇವರಾಜು(ದೀಪು) ಎಚ್ಚರಿಸಿದ್ದಾರೆ.
ಹಲವು ವರ್ಷಗಳಿಂದ ಆನೆ ಗಂಗಾ ಮಲಗದೇ ನಿಂತೆ ಇರುತ್ತಿದ್ದಳು. ಹಾಗಾಗಿ ಕಾಲು ಊದಿಕೊಂಡು ಗಾಯವಾಗಿ ಸೋಂಕಿಗೆ ಒಳಗಾಗಿತ್ತು. ಅವಳನ್ನು ಪರೀಕ್ಷಿಸಿದ ಪಶು ಸಂಗೋಪನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರ ಲಕ್ಷ್ಮಿಸಾಗರಕ್ಕೆ ದಾಖಲಿಸುವಂತೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಹೃದಯಾಘಾತದಿಂದ ಗಂಗಾಳು ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.-ಪಿ.ಜಗದೀಶ್
ಆರ್.ಎಫ್.ಓ ಹುಲಿಯೂರುದುರ್ಗ