Advertisement

ಭಾರತಿಗೆ ಶುಭಹಾರೈಸಿದ ಯಡಿಯೂರಪ್ಪ

12:25 PM Jun 15, 2017 | |

“ಹುಡುಗಾರ ಕಣ್ಣೀರು ಮುನ್ಸಿಪಾಲ್ಟಿ ಉಪ್ಪು ನೀರು. ವೇಸ್ಟಾದ್ರೂ ಕೇಳ್ಳೋರ್ಯಾರೂ ಇಲ್ಲ. ಹುಡುಗೀರ ಕಣ್ಣೀರು ಕಾವೇರಿ ಸಿಹಿನೀರು …’ ಇದು “ರಾಜಹಂಸ’ ಚಿತ್ರದ ಹಾಡು. ಈ ಹಾಡನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷ.

Advertisement

ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿ ಹಾಡಿರುವ ಯೂತ್‌ಫ‌ುಲ್‌ ಹಾಡು ಈಗಿನ ಯುವಕರಿಗೆ ಟ್ರೆಂಡಿಯಂತಿದೆ ಎಂಬುದು ಚಿತ್ರತಂಡದ ಮಾತು. “ಯುರೋಪಿಯನ್‌ ಶೈಲಿಯ ಅದ್ಧೂರಿ ಸಂಗೀತದ ಜತೆಯಲ್ಲಿ ಹದಿಹರೆಯದ ಮನಸ್ಸುಗಳಿಗೆ ಕಚಗುಳಿ ಇಡುವಂತಹ ಸಾಲುಗಳು ಈ ಹಾಡಲ್ಲಿದೆ. “ಬಾರಮ್ಮ ಬಾರೆ ಭಾರತಿ …’ ಎಂದು ಶುರುವಾಗುವ ಈ ಹಾಡು ಆರತಿ, ಲೀಲಾವತಿ, ಮೈನಾವತಿ, ಮಂಜುಳ, ಜಯಂತಿ ಸೇರಿದಂತೆ ಇನ್ನಿತರ ಕಾಲದ ನಾಯಕಿಯರ ಹೆಸರಿಂದ ಶುರುವಾಗಿ ಮುಂದೆ ಇಂಡಿಪೆಂಡೆನ್ಸ್‌ ಡೇ, ಫ್ರೆಂಡ್‌ಶಿಪ್‌ ಡೇ, ಯೋಗಾ ಡೇ ಹೀಗೆ ಇತರೆ ವಿಶೇಷ ದಿನಗಳನ್ನು ಕಾರಣವಾಗಿಟ್ಟುಕೊಂಡು ನಾಯಕ ತನ್ನ ನಾಯಕಿಯನ್ನು ಕರೆಯುವ ಹಾಡನ್ನು ಮಜವಾಗಿ ಕಟ್ಟಿಕೊಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಜಡೇಶ್‌ಕುಮಾರ್‌ ಹಂಪಿ.

ಈ ಹಾಡನ್ನು ಧನಂಜಯ್‌ ದಿಡಗ ಬರೆದಿದ್ದಾರೆ. ಸಂಭಾಷಣೆ ಕೂಡ ಇವರದೇ. ಈ ಚಿತ್ರಕ್ಕೆ ಗೌರಿಶಿಖರ್‌ ಹೀರೋ ಆಗಿದ್ದಾರೆ. ನಿರ್ಮಾಣ ಕೂಡ ಅವರದೇ. ಜನಮನ ಸಿನಿಮಾಸ್‌ ಮೂಲಕ ಒಂದಷ್ಟು ಗೆಳೆಯರ ಜೊತೆಗೂಡಿ “ರಾಜಹಂಸ’ ಮಾಡಿದ್ದಾರೆ ಗೌರಿಶಿಖರ್‌. ಈ ಹಿಂದೆ “ಜೋಕಾಲಿ’ ಹೀರೋ ಆಗಿದ್ದ ಗೌರಿಶಿಖರ್‌ “ರಾಜಹಂಸ’ ಮೂಲಕ ರೀ ಎಂಟ್ರಿಯಾಗುತ್ತಿದ್ದಾರೆ. ಇವರಿಗೆ “ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಬಿ.ಸಿ .ಪಾಟೀಲ್‌, ಶ್ರೀಧರ್‌, ಯಮುನಾ, ರಾಜು ತಾಳಿಕೋಟೆ, ಬುಲೆಟ್‌ ಪ್ರಕಾಶ್‌, ತಬಲಾನಾಣಿ, ವಿಜಯ್‌ ಚಂಡೂರ್‌ ಇತರರು ನಟಿಸಿದ್ದಾರೆ. “ಅರಸು’ ಹಾಗೂ “ಗೂಗ್ಲಿ’ ಬಳಿಕ ಜೋಶ್ವ ಶ್ರೀಧರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರೂರ್‌ ಸುಧಾಕರ್‌ ಕ್ಯಾಮೆರಾ ಹಿಡಿದಿದ್ದಾರೆ. ಅಂದಹಾಗೆ, ಈ ಚಿತ್ರದ ಆಡಿಯೋ ಸಿಡಿ ಜೂನ್‌ 19ರಂದು ಬಿಡುಗಡೆಯಾಗಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next