Advertisement

ಯಡಿಯೂರಪ್ಪ ಕಿವಿಯಲ್ಲಿ ಹೂವಿಟ್ಟು ಹೋದರು: ಪ್ರಸನ್ನಾನಂದ ಶ್ರೀ ಕಿಡಿ

03:16 PM Dec 24, 2021 | Team Udayavani |

ವಾಡಿ: ರಾಜ್ಯದ ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯಕ್ಕಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಹಾವೇರಿ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪೂಜ್ಯ ಶ್ರೀಪ್ರಸನ್ನಾನಂದ ಮಹಾಸ್ವಾಮಿ ಸರಕಾರವನ್ನು ಆಗ್ರಹಿಸಿದರು.

Advertisement

ಇದೇ ಫೆ.8 ಹಾಗೂ 9 ರಂದು ಹರಿಹರದ ರಾಜನಳ್ಳಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ 4ನೇ ಜಾತ್ರಾಮಹೋತ್ಸವದ ಜಾಗೃತಿ ಸಭೆ ಉದ್ದೇಶಿಸಿ ಸ್ವಾಮೀಜಿ ಮಾತನಾಡಿದರು.

ಕಳೆದ 30 ವರ್ಷಗಳಿಂದ ಎಸ್ ಟಿ ಮಕ್ಕಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ನಿವೃತ್ತ ನ್ಯಾಯಮೂರ್ತಿ ಡಾ.ನಾಗಮೋನದಾಸ ಅವರ ವರದಿ ಬಂದ ತಕ್ಷಣವೇ ಮೀಸಲಾತಿ ಪರಮಾರ್ಶೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ವಾಲ್ಮೀಕಿ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸದೆ ಕಿವಿಯಲ್ಲಿ ಹೂವಿಟ್ಟು ಹೋದರು ಎಂದು ಆಕ್ರೋಶ ವ್ಯಕ್ತಪಡಿಸಿ, ಇದರ ವಿರುದ್ಧ ಸಿಂಹದ ರೂಪದಲ್ಲಿ ಘರ್ಜಿಸಬೇಕಾದ ನಾಯಕ ಸಮಾಜ ಮೌನವಹಿಸಿದೆ ಎಂದರು.

ಸಮುದಾಯವನ್ನು ಎಚ್ಚರಿಸುವ ವೈಚಾರಿಕ ಜಾಗೃತಿ ಜಾತ್ರೆ ಏರ್ಪಡಿಸಲಾಗಿದೆ. ಜಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು ಮತ್ತು ನ್ಯಾ.ನಾಗಮೋಹನದಾಸ್ ಅವರ ವರದಿಯೂ ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ವರ್ಷದ ಜಾತ್ರೆಯಲ್ಲಿ ಮುಖ್ಯಮಂತ್ರಿಗಳು ನಾಯಕ ಜನಾಂಗಕ್ಕೆ ಉತ್ತಮ ಸಂದೇಶ ನೀಡುವ ನಿರೀಕ್ಷೆ ಹೊಂದಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ವಾಲ್ಮೀಕಿ ಸಮಾಜದ ಬಂಧುಗಳು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಇದನ್ನೂ ಓದಿ:ತಾವರಗೇರಾ: ಮತ ಯಂತ್ರಗಳ ಸಂಖ್ಯೆ ಬದಲಾಗಿವೆ ಎಂದು ಪ್ರತಿಭಟನೆ

Advertisement

ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ ಭೀಮರಾವ ದೊರೆ, ಶಹಾಬಾದ ತಾಲೂಕು ಅಧ್ಯಕ್ಷ ಜಗದೇವ ಸುಬೇದಾರ, ನಗರಾಧ್ಯಕ್ಷ ನಾಗೇಶ ಜಮಾದಾರ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಶ್ರೀಗಳು ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next