Advertisement

ಬಿಎಸ್‌ವೈನಿಂದಲೇ ಚುನಾವಣಾ ಭ್ರಷ್ಟಾಚಾರ

12:26 PM Apr 07, 2017 | Team Udayavani |

ಮೈಸೂರು: ಬಿ.ಎಸ್‌.ಯಡಿಯೂರಪ್ಪನ ಬಗ್ಗೆ ತಾನು ಟೀಕೆ ಮಾಡುವುದಕ್ಕೆ ಹೋಗಲ್ಲ. ಅದು ನಮ್ಮ ಸಂಸ್ಕೃತಿ ಅಲ್ಲ. ಆದರೂ ತನ್ನ ಬಗ್ಗೆ ಸುಮ್ಮನೆ ಬೈತಿರ್ತಾನೆ, ಕೇಳಿಕೊಂಡು ಸುಮ್ಮನಿರಲಾಗಲ್ಲ. ಚುನಾವಣೆ ಭ್ರಷ್ಟಾಚಾರ ಶುರುಮಾಡಿದ್ದೇ ಯಡಿಯೂರಪ್ಪ, ಒಂದೊಂದು ಉಪ ಚುನಾವಣೆಗೆ 25 ಕೋಟಿ ಖರ್ಚು ಮಾಡಿದ್ರು. ಈಗ ಮೂರು ಹೆತ್ತವಳು ಆರು ಹೆತ್ತವಳಿಗೆ ಬುದ್ಧಿ ಹೇಳಿದಂತೆ ಮಾತನಾಡ್ತಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

2008ರಲ್ಲಿ ಹಸಿರು ಶಾಲು ಹೊದ್ದುಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಮೂರೇ ತಿಂಗಳಿಗೆ ಬಿತ್ತನೆಬೀಜ, ರಸಗೊಬ್ಬರ ಕೊಡಲಾಗದೆ ರೈತರ ಮೇಲೆ ಗೋಲಿಬಾರ್‌ ಮಾಡಿಸಿ ಇಬ್ಬರು ರೈತರ ಸಾವಿಗೆ ಕಾರಣರಾದರು. ಇಂಥವರಿಗೆ ರೈತರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಜನರ ತೆರಿಗೆ ಹಣ ಲೂಟಿ ಮಾಡಿ ತಂದು ಉಪ ಚುನಾವಣೆಯಲ್ಲಿ ಖಚು ಮಾಡುತ್ತಿದ್ದಾರೆ.

ಯಾರಪ್ಪನ ಮನೆ ಹಣ ಇದು ಎಂದು ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಆರೂವರೆ ಕೋಟಿ ಜನರ ತೆರಿಗೆ ಹಣ ರಾಜ್ಯಸರ್ಕಾರದ್ದು, ನಮ್ಮಪ್ಪನ ಮನೆಯ ಹಣವೂ ಅಲ್ಲ, ನಿಮ್ಮಪ್ಪನ ಮನೆಯ ಹಣವೂ ಅಲ್ಲ. ಆನರ ತೆರಿಗೆ ಹಣವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಚ್ಚರಿಕೆ, ಜವಾಬ್ದಾರಿ ಯಿಂದ ಖರ್ಚು ಮಾಡಬೇಕಾಗುತ್ತದೆ ಎಂದು ಯಡಿಯೂರಪ್ಪಹೇಳಿಕೆಗೆ ತಿರುಗೇಟು ನೀಡಿದರು.

2018ರಲ್ಲಿ ಅಧಿಕಾರಕ್ಕೆ ಬರುವ ಯಡಿಯೂರಪ್ಪ ಕನಸು ನನಸಾಗುವುದಿಲ್ಲ. ಸೈಕಲ್‌ ಕೊಟ್ಟಿದ್ದು ಬಿಟ್ಟರೆ 3 ವರ್ಷ ಮುಖ್ಯಮಂತ್ರಿಯಾಗಿ ಯಡಿಯೂರಪ್ಪಮಾಡಿದ್ದೇನು ಎಂದು ಪ್ರಶ್ನಿಸಿದ ಅವರು, ನಮ್ಮ ಸರ್ಕಾರದ ಕಾರ್ಯಕ್ರಮಗಳ ದೊಡ್ಡಪಟ್ಟಿಯೇ ಇದೆ. ಐದು ವರ್ಷಗಳ ಕಾರ್ಯಕ್ರಮ ಮೆಚ್ಚಿ ಜನ ಮತ್ತೆ ನಮಗೇ ಮತ ಹಾಕುತ್ತಾರೆ. ನಿಮ್ಮ 150 ಪ್ಲಸ್‌ ಮಿಷನ್‌ ಹುಸಿಬಾಂಬ್‌ ಆಗುತ್ತದೆ ಎಂದು ಅವರು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next